ನಗರದ ಎಟಿಎಂ ಕೇಂದ್ರಗಳಲ್ಲಿ ಇನ್ನೂ ಭದ್ರತೆ ಸಾಲದು

By Suvarna Web DeskFirst Published Feb 4, 2017, 7:29 PM IST
Highlights

ಇನ್ನು ಹೇಗೆಲ್ಲಾ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಬ್ಯಾಂಕ್‌ಗಳಿಗೆ ಬೆಂಗಳೂರು ಪೊಲೀಸರು ಮಾರ್ಗಸೂಚಿ ಸಹ ಹೊರಡಿಸಿದ್ದರು. ಈ ಮಾರ್ಗಸೂಚಿ ಜಾರಿಗೆ ಗಡುವು ಸಹ ವಿಸಿದ್ದರು. ಆದರೆ ಎಟಿಎಂಗಳ ಭದ್ರತಾ ವ್ಯವಸ್ಥೆಯಲ್ಲಿ ಮಾತ್ರ ಸುಧಾರಣೆ ಕಾಣಲಿಲ್ಲ. ಕೆಲವು ಬ್ಯಾಂಕ್‌ಗಳು, ಪ್ರಾರಂಭದಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಿದ್ದು ಹೊರತುಪಡಿಸಿದರೆ ಮತ್ಯಾವುದೇ ರೀತಿಯಲ್ಲೂ ಸುರಕ್ಷತೆಗೆ ಕಡೆಗೆ ಒತ್ತು ನೀಡಲಿಲ್ಲ.

ಬೆಂಗಳೂರು(ಫೆ.5): ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಎಟಿಎಂ ಕೇಂದ್ರದಲ್ಲಿ ಬ್ಯಾಂಕ್ ಉದ್ಯೋಗಿ ಮೇಲೆ ಹಲ್ಲೆ ಕೃತ್ಯ ನಡೆದು ಮೂರು ವರ್ಷಗಳು ಕಳೆದಿವೆ. ಕೊನೆಗೆ ಹಲ್ಲೆಕೋರನೂ ಸಿಕ್ಕಿಬಿದ್ದಿದ್ದಾನೆ. ಆದರೆ ವಿಪರ್ಯಾಸವೆಂದರೆ ಎಟಿಎಂಗಳ ಚಿತ್ರಣ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಬದಲಾಗಿಲ್ಲ.

2013ರ ನ.19 ರಂದು ಬಿಬಿಎಂಪಿ ಕೇಂದ್ರ ಕಚೇರಿ ಹತ್ತಿರದ ಎನ್.ಆರ್. ವೃತ್ತದಲ್ಲಿರುವ ಕಾರ್ಪೋರೇಷನ್ ಬ್ಯಾಂಕ್‌ನ ಎಟಿಎಂನಲ್ಲಿ ಆ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಮೇಲಿನ ಹಲ್ಲೆ ಪ್ರಕರಣ ಬಳಿಕ ಗ್ರಾಹಕರ ಭದ್ರತೆ ಕುರಿತು ಪ್ರಬಲ ಜನಧನಿ ಮೊಳಗಿತು. ರಾಜ್ಯ ಮಾತ್ರವಲ್ಲದೆ ಕೇಂದ್ರ ಸರ್ಕಾರ ಸಹ, ಎಟಿಎಂಗಳಲ್ಲಿ ಗ್ರಾಹಕರ ‘ದ್ರತೆಗೆ ಕ್ರಮ ತೆಗೆದುಕೊಳ್ಳುವಂತೆ ಬ್ಯಾಂಕ್‌ಗಳಿಗೆ ಸೂಚಿಸಿದ್ದವು.

Latest Videos

ಇನ್ನು ಹೇಗೆಲ್ಲಾ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಬ್ಯಾಂಕ್‌ಗಳಿಗೆ ಬೆಂಗಳೂರು ಪೊಲೀಸರು ಮಾರ್ಗಸೂಚಿ ಸಹ ಹೊರಡಿಸಿದ್ದರು. ಈ ಮಾರ್ಗಸೂಚಿ ಜಾರಿಗೆ ಗಡುವು ಸಹ ವಿಸಿದ್ದರು. ಆದರೆ ಎಟಿಎಂಗಳ ಭದ್ರತಾ ವ್ಯವಸ್ಥೆಯಲ್ಲಿ ಮಾತ್ರ ಸುಧಾರಣೆ ಕಾಣಲಿಲ್ಲ. ಕೆಲವು ಬ್ಯಾಂಕ್‌ಗಳು, ಪ್ರಾರಂಭದಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಿದ್ದು ಹೊರತುಪಡಿಸಿದರೆ ಮತ್ಯಾವುದೇ ರೀತಿಯಲ್ಲೂ ಸುರಕ್ಷತೆಗೆ ಕಡೆಗೆ ಒತ್ತು ನೀಡಲಿಲ್ಲ.

ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಬ್ಯಾಂಕ್‌ಗಳಿಗೆ ಹಲವು ಬಾರಿ ನೋಟಿಸ್ ಜಾರಿಗೊಳಿಸಿದ ಪೊಲೀಸರು, ಕೊನೆಗೆ ಹಲ್ಲೆ ಪ್ರಕರಣಕ್ಕೂ ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಸಿದರು. ಎಟಿಎಂ ಭದ್ರತೆ ಮರೀಚಿಕೆಯಾಯಿತು.

ಸಿಸಿಟಿವಿ ಕ್ಯಾಮೆರಾಗಳು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆಯೇ ಅಥವಾ ಹಗಲು-ರಾತ್ರಿ ಪಾಳಿಯ ಭದ್ರತಾ ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿದ್ದಾರೆಯೇ ಎಂಬ ಬಗ್ಗೆ ಬ್ಯಾಂಕ್ ಅಕಾರಿಗಳು ಮೇಲ್ವಿಚಾರಣೆ ನಡೆಸುತ್ತಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಮತ್ತೊಂದೆಡೆ ಭದ್ರತೆ ವಿಚಾರದಲ್ಲಿ ತಾಂತ್ರಿಕವಾಗಿಯೂ ಬ್ಯಾಂಕ್‌ಗಳು ಸಮರ್ಥವಾಗಿಲ್ಲ ಎಂಬ ವಾದವೂ ಕೇಳಿಬಂದಿದೆ.

ಭದ್ರತಾ ಸಿಬ್ಬಂದಿಗೇ ಭದ್ರತೆ ಇಲ್ಲ!

ಎಟಿಎಂ ಕೇಂದ್ರಗಳಲ್ಲಿ ನಿಯೋಜನೆಗೊಂಡ ಭದ್ರತಾ ಸಿಬ್ಬಂದಿಗೇ ‘ದ್ರತೆ ಇಲ್ಲವಾಗಿದೆ. ಸಿಬ್ಬಂದಿ ನೇಮಿಸಿಕೊಳ್ಳುವ ಸೆಕ್ಯೂರಿಟಿ ಏಜೆನ್ಸಿಗಳು, ಭದ್ರತಾ ಸಿಬ್ಬಂದಿಗೆ ಯಾವುದೇ ಶಸಾಸಗಳನ್ನು ನೀಡುವುದಿಲ್ಲ. ಇದರ ಲಾಭ ಪಡೆದ ದರೋಡೆಕೋರರು, ಭದ್ರತಾ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿ ಹಣ ದೋಚುತ್ತಾರೆ. ಇದಕ್ಕೆ ಪುಷ್ಠಿ ನೀಡುವಂತೆ ನಗರದಲ್ಲಿ ಸಾಕಷ್ಟು ಘಟನೆಗಳು ನಡೆದಿವೆ.

ಭದ್ರತೆ ಹೇಗಿರಬೇಕು?

ಸಿಸಿಟಿವಿ ಕ್ಯಾಮೆರಾಗಳ ಜತೆ ತುರ್ತು ಸೈರನ್ ಅಳವಡಿಸಬೇಕು

-ಎಮರ್ಜೆನ್ಸಿ ಬಟನ್‌ಗಳನ್ನು ಅಳವಡಿಸಬೇಕು

-ಸೆಕ್ಯೂರಿಟಿ ಗಾರ್ಡ್‌ಗಳಿಗೆ ಶಸಾಸಗಳನ್ನು ಒದಗಿಸಬೇಕು

-ವೃದ್ಧರಿಗಿಂತ ಯುವಕರನ್ನೇ ‘ದ್ರತೆಗೆ ನಿಯೋಜಿಸಬೇಕು

ದೈಹಿಕ ದುರ್ಬಲರೇ ಹೆಚ್ಚು

ನಗರದ ಬಹುತೇಕ ಎಟಿಎಂ ಕೇಂದ್ರಗಳಲ್ಲಿ ನಿಯೋಜನೆಗೊಂಡಿರುವ ‘ದ್ರತಾ ಸಿಬ್ಬಂದಿ ದೈಹಿಕವಾಗಿ ಸಮರ್ಥರಿಲ್ಲದವರೇ ಕಂಡು ಬರುತ್ತಾರೆ. ಆ ಪೈಕಿ ಬಹುತೇಕರು ವೃದ್ಧರು. ಈ ಕಾರಣದಿಂದಲೂ ಎಟಿಎಂ ದರೋಡೆ ಪ್ರಕರಣಗಳು, ಗ್ರಾಹಕರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ದರೋಡೆಕೋರರು ವೃದ್ಧರ ಮೇಲೆ ಹಲ್ಲೆ ನಡೆಸಿ ಹಣ ದೋಚುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಕಾರ್ಪೋರೇಷನ್ ಎಟಿಎಂನಲ್ಲಿ ಭದ್ರತೆಯಿಲ್ಲ!

ಇತರೆ ಎಟಿಎಂ ಕೇಂದ್ರಗಳಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿದ್ದ ಮಹಿಳೆ ಮೇಲೆ ಹಲ್ಲೆ ನಡೆದ ಕಾರ್ಪೋರೇಷನ್ ಬ್ಯಾಂಕ್ ಎಟಿಎಂ ಕೇಂದ್ರದಲ್ಲೇ ಈಗಲೂ ಭದ್ರತೆ ಇಲ್ಲ. ಘಟನೆ ನಡೆದ ವೇಳೆ ಇದ್ದ ಸ್ಥಿತಿಯೇ ಈಗಲೂ ಇದೆ. ಪೊಲೀಸರ ನಿರ್ದೇಶನದ ಬಳಿಕ ಎಟಿಎಂಗೆ ಭದ್ರತಾ ಸಿಬ್ಬಂದಿ ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ ಸಿಟಿಟಿವಿ ಕ್ಯಾಮೆರಾಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಇನ್ನು ಭದ್ರತಾ ಸಿಬ್ಬಂದಿ ಇದ್ದರೂ ಇಲ್ಲದಂತಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಳವಡಿಸಿರುವ ಅಲಾರಂ ಬಟನ್ ಕೂಡ ಹಾಳಾಗಿದೆ. ಅಲ್ಲದೇ ಕೇಂದ್ರದ ಹೊರ ಭಾಗದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಸಹ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ರಿಯಾಲಿಟಿ ಚೆಕ್ ವೇಳೆ ಕಂಡುಬಂದಿದೆ.

 

 

click me!