ಇನ್ಮುಂದೆ ಕರೆಂಟ್ ಹೋಗುವ ಮುನ್ನ ಮೊಬೈಲ್'ಗೆ ಬರಲಿದೆ ಮೆಸೇಜ್

Published : Feb 03, 2017, 02:53 AM ISTUpdated : Apr 11, 2018, 12:42 PM IST
ಇನ್ಮುಂದೆ ಕರೆಂಟ್ ಹೋಗುವ ಮುನ್ನ ಮೊಬೈಲ್'ಗೆ ಬರಲಿದೆ ಮೆಸೇಜ್

ಸಾರಾಂಶ

ಇಷ್ಟು ದಿನ ಕರೆಂಟ್​ ಹೋಗುವುದು ಗೊತ್ತಾಗುತ್ತಿರಲಿಲ್ಲ. ಆದರೆ, ಇನ್ಮುಂದೆ ಕರೆಂಟ್ ಹೋಗುವ ಮೊದಲು ಗ್ರಾಹಕರ ಗಮನಕ್ಕೆ ಬರಲಿದೆ. ಈ ಮೂಲಕ ಬೆಸ್ಕಾಂ ಗ್ರಾಹಕರಿಗೆ ಇನ್ನುಷ್ಟು ಹತ್ತಿರವಾಗುತ್ತಿದೆ. ಅದು ಹೇಗೆ ಅಂತೀರಾ ಈ ಸ್ಟೋರಿ ನೋಡಿ

ಬೆಂಗಳೂರು(ಫೆ.03): ಇಷ್ಟು ದಿನ ಕರೆಂಟ್​ ಹೋಗುವುದು ಗೊತ್ತಾಗುತ್ತಿರಲಿಲ್ಲ. ಆದರೆ, ಇನ್ಮುಂದೆ ಕರೆಂಟ್ ಹೋಗುವ ಮೊದಲು ಗ್ರಾಹಕರ ಗಮನಕ್ಕೆ ಬರಲಿದೆ. ಈ ಮೂಲಕ ಬೆಸ್ಕಾಂ ಗ್ರಾಹಕರಿಗೆ ಇನ್ನುಷ್ಟು ಹತ್ತಿರವಾಗುತ್ತಿದೆ. ಅದು ಹೇಗೆ ಅಂತೀರಾ ಈ ಸ್ಟೋರಿ ನೋಡಿ

ಬೆಸ್ಕಾಂನ ನ್ಯೂ ಪ್ಲಾನ್ ಸೂಪರ್​  

ಕೇವಲ ಗ್ರಾಮೀಣ ಪ್ರದೇಶಗಳಿಗೆ ಮಾತ್ರವಲ್ಲ, ಬೆಂಗಳೂರಿಗೂ ವಿದ್ಯುತ್ ಸಮಸ್ಯೆ ತಪ್ಪಿಲ್ಲ. ಯಾವಾಗ ಕರೆಂಠ್ ಹೋಗುತ್ತದೆ. ಯಾವಾಗ್ ಬರುತ್ತದೆ ಎನ್ನುವುದು ನಮ್ಮ ಗಮನಕ್ಕೂ ಬರುವುದಿಲ್ಲ. ಹೀಗಾಗಿ, ಬೆಸ್ಕಾಂಗೆ ಜನ ಹಿಡಿಶಾಪ ಹಾಕುತ್ತಿದ್ದರು. ಇದಕ್ಕೆ ಪರಿಹಾರ ಎನ್ನುವ ಹಾಗೆ ಬೆಸ್ಕಾಂ ವಿದ್ಯುತ್ ಪೂರೈಕೆ, ಕಡಿತಗೊಳ್ಳುವ ಮುನ್ನ ಗ್ರಾಹಕರ ಗಮನಕ್ಕೆ ತರಲು ಮುಂದಾಗಿದೆ. ಕರೆಂಟ್ ಹೋಗುವ ಹತ್ತು ನಿಮಿಷಗಳ ಮೊದಲು ಗ್ರಾಹಕರ ಸೆಲ್ ಫೋನ್​​​ ಅಲರ್ಟ್ ಮೆಸೇಜ್ ಬರಲಿದೆ.

ಈ ಯೋಜನೆಗೋಸ್ಕರ ಬೆಸ್ಕಾಂ ಗ್ರಾಹಕರ ಮೊಬೈಲ್ ಫೋನ್ ನಂಬರ್ ಕಲೆಕ್ಟ್ ಮಾಡುತ್ತಿದೆ. ಬೆಂಗಳೂರಿನ 40 ಲಕ್ಷ ಗ್ರಾಹಕರಲ್ಲಿ ಸುಮಾರು 30 ಲಕ್ಷ ಗ್ರಾಹಕರ ನಂಬರನ್ನು ಬೆಸ್ಕಾಂ ಈಗಾಗಲೇ ಸಂಗ್ರಹಿಸಿದೆ. ಮನೆಯ ಮುಖ್ಯಸ್ಥನ ನಂಬರ್'ಗೆ ಈ ಅಲರ್ಟ್ ಮೆಸೇಜ್ ಬರಲಿದೆ. ಓ ಯೋಜನೆಯ ಲಾಭ ಕೇವಲ ನಗರಕ್ಕೆ ಮಾತ್ರವಲ್ಲ ಹಳ್ಳಿಗಳ ಗ್ರಾಹಕರೂ ಉಪಯೋಗ ಪಡೆಯಬಹುದು.

ಬೆಸ್ಕಾಂ ಈ ಯೋಜನೆ ಬೆಂಗಳೂರು ಸುತ್ತಲಿನ ರೈತರಿಗೂ ವರದಾನವಾಗಲಿದೆ. ತಮ್ಮ ಕೃಷಿ ಚಟುವಟಿಕೆಗಳ ಮೇಲೆ ಮತ್ತಷ್ಟು ನಿಗಾ ಇಡಲು ಸಹಕಾರಿ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ತಿಂಗಳಾಂತ್ಯಕ್ಕೆ ನಿಮ್ಮ ಸೆಲ್ ಫೋನ್'​​ಗೆ ಬೆಸ್ಕಾಂನ ಅಲರ್ಟ್ ಮೆಸೇಜ್ ಬರಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!