ಅನಾಥ ಶವಕ್ಕೆ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಬೆಂಗಳೂರು ಪೊಲೀಸ್ರು..!

By Web DeskFirst Published Aug 3, 2019, 7:59 PM IST
Highlights

ಪೊಲೀಸ್ರು ಅಂದ್ರೆ ಕೆಟ್ಟವರು, ಮಾನವೀಯತೆ ಇಲ್ಲವಾದರೂ ಎಂದು ಎಲ್ಲರು ಹೇಳುತ್ತಾರೆ. ಹೌದು. ಸಾಮಾನ್ಯವಾಗಿ ಪೊಲೀಸರು ಅಂದಕೂಡಲೇ ಎಲ್ಲರಿಗೂ ಅದೇ ನೆನಪಾಗುತ್ತದೆ. ಆದ್ರೆ ಅದರಲ್ಲೂ ಕೆಲವರು ಒಳ್ಳೆಯವರು ಇರುತ್ತಾರೆ ನನ್ನೊಂದು, ಈ ರೀತಿಯ ಒಳ್ಳೆಯ ಕೆಲಸ ಮಾಡಿದಾಗ ಮಾತ್ರ ಗೊತ್ತಾಗುತ್ತದೆ. ಅಂತಹದೊಂದು ಕೆಲಸವನ್ನು ಬೆಂಗಳೂರು ಪೊಲೀಸರು ಮಾಡಿದ್ದಾರೆ. ಅಷ್ಟಕ್ಕೂ ಬೆಂಗ್ಳೂರು ಪೊಲೀಸ್ರು ಮಾಡಿದ್ದಾದರೂ ಏನು ಅಂತೀರಾ..? ಮುಂದೆ ಓದಿ.

ಬೆಂಗಳೂರು [ಆ.03]: ಮನುಷ್ಯನ ಹುಟ್ಟು ಸಾವು ಪ್ರಕೃತಿಯ ಸಹಜ ಗುಣ. ಅದೇ ರೀತಿ ಸತ್ತವರಿಗೆ ನಮ್ಮಲ್ಲಿ ಹಲವು ಶಾಸ್ತ್ರ ಹಾಗೂ ಸಂಪ್ರದಾಯದಿಂದ ಮೋಕ್ಷ ಸಿಗುವಂತೆ ಮಾಡುತ್ತಾರೆ. 

ಹೌದು, ಯಾಕಂದ್ರೆ ಆತ್ಮಕ್ಕೆ ಮುಕ್ತಿ ಸಿಗದೇ ಇದ್ದರೇ, ಪ್ರೇತಾತ್ಮಗಳಾಗಿ ಅಲೆಯುತ್ತಾರೆ ಅನ್ನೋದು ಜನರ ನಂಬಿಕೆ. ಹಾಗಾಗಿ ನಮ್ಮಲ್ಲಿ ಸತ್ತವರಿಗೆ ಆಯಾ ಧರ್ಮದಂತ ಅನ್ವಯದಂತೆ ವಿಧಿವಿಧಾನಗಳ ಮೂಲಕ ಮೋಕ್ಷ ದೊರಕುವಂತೆ ಮಾಡುತ್ತಾರೆ. 

ಆದರೆ, ಕೆಲವರು ಬೀದಿಯಲ್ಲಿ ಬಿದ್ದು ಸಾಯುತ್ತಾರೆ. ಅಂಥವರಿಗೆ ಯಾವುದೇ ಶಾಸ್ತ್ರ, ಪೂಜೆಗಳಿರುವುದಿಲ್ಲ. ಅದೇ ರೀತಿ ಇಲ್ಲೊಂದು ಅನಾಥವಾಗಿ ಬಿದ್ದಿದ್ದ ಶವಕ್ಕೆ ಪೊಲೀಸರು ಮುಕ್ತಿ ಸಿಗುವಂತೆ ಮಾಡಿದ್ದಾರೆ.

ಮಣಿ [61) ಎಂಬಾತ ಸಹಜ ಸಾವಿಗೀಡಾಗಿದ್ದು, ಈತನಿಗೆ ಹಿಂದೆ-ಮುಂದೆ ಅಂತ ಯಾರು ಇಲ್ಲ. ಇದರಿಂದ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸರು ಅನಾಥ ಶವದ ಅಂತ್ಯಸಂಸ್ಕಾರ ಮಾಡಿದ್ದಾರೆ. 

ಇಂದು [ಶನಿವಾರ] ನಂದಿನಿ ಲೇಔಟ್ ಇನ್ಸ್ ಪೆಕ್ಟರ್ ಲೋಹಿತ್ ಅವರು ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ. ಕುಟುಂಬದ ಸದಸ್ಯನಂತೆ ಇನ್ಸ್ ಪೆಕ್ಟರ್ ಲೋಹಿತ್ ಅವರು ಶವಕ್ಕೆ ಹೂವಿನ ಹಾರ ಹಾಕಿ, ಊದುಬತ್ತಿ ಹಚ್ಚಿ ಜತೆಗೆ ಟೆಂಗಿನ ಕಾಯಿ ಹೊಡೆದು ಪುಜೆ ಪುನಸ್ಕಾರದೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದರು.  

click me!