
ಬೆಂಗಳೂರು (ಏ. 21): ಅನಿಮೇಶನ್’ನಲ್ಲಿ ಆಸಕ್ತಿ ಹೊಂದಿದ ವಿದ್ಯಾರ್ಥಿಗಳು, ಕಲಾವಿದರು ಹಾಗೂ ವೃತ್ತಿಪರರಿಗೆ ತಮ್ಮ ಕೌಶಲ್ಯವನ್ನು ಹೆಚ್ಚಿಸಲು ಅನುಕೂಲವಾಗುವಂತೆ ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ಮುಂಬರುವ ಮೇ.12-14ವೆರಗೆ ಅನಿಮೆಶನ್, ಗೇಮಿಂಗ್ ಹಾಗೂ ವಿಶುವಲ್ ಎಫೆಕ್ಟ್ಸ್ ಸಮ್ಮೆಳನ ಹಮ್ಮಿಕೊಂಡಿದೆ.
ಸಮ್ಮೇಳನದಲ್ಲಿ ತಜ್ಞರಿಂದ ತರಗತಿ ಚರ್ಚೆ-ಉಪನ್ಯಾಸ, ಪ್ರಾತ್ಯಕ್ಷಿತೆ, ಕಾರ್ಯಾಗಾರ, ಲೈವ್ ಮ್ಯಾರಥಾನ್, ಕಲಾ ಸ್ಪರ್ಧೆ ಹಾಗೂ ತಾಂತ್ರಿಕ ಹ್ಯಾಕಥಾನ್’ಗಳು ಕೂಡಾ ನಡೆಯಲಿವೆ.
ವರ್ಚುವಲ್ ರಿಯಾಲಿಟಿ, ಕ್ಯಾರಿಯರ್ ಹಾಗೂ ಉದ್ಯೋಗ ಮೇಳಗಳು ಕೂಡಾ ಈ ಬೆಂಗಳೂರು GAFX ಕಾನ್ಫರೆನ್ಸ್’ನ ಭಾಗವಾಗಿರುವುದು.
ಅನಿಮೇಶನ್, ಗೇಮಿಂಗ್’ಗೆ ಸಂಬಂಧಪಟ್ಟಂತೆ ಇದು ಭಾರತದಲ್ಲೇ ಅತೀ ದೊಡ್ಡ ಸಮ್ಮೇಳನವಾಗಿದ್ದು, ವಿದ್ಯಾರ್ಥಿಗಳು, ತಂತ್ರಜ್ಞರು ಹಾಗೂ ಕಲಾವಿದರಿಗೆ ಜಾಗತಿಕೆ ವೇದಿಕೆ ಒದಗಿಸಿದಂತಾಗುತ್ತದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.