ಬಸ್ಸಿನಲ್ಲೇ ಮಹಿಳೆಗೆ ಲೈಂಗಿಕ ಕಿರುಕುಳ: ಕುಳಿತಲ್ಲೆ ಆ್ಯಪ್'ನಿಂದ ದೂರು,ಬಂಧನ

Published : May 11, 2017, 12:24 PM ISTUpdated : Apr 11, 2018, 12:56 PM IST
ಬಸ್ಸಿನಲ್ಲೇ ಮಹಿಳೆಗೆ ಲೈಂಗಿಕ ಕಿರುಕುಳ: ಕುಳಿತಲ್ಲೆ ಆ್ಯಪ್'ನಿಂದ ದೂರು,ಬಂಧನ

ಸಾರಾಂಶ

ವೈಟ್'ಫೀಲ್ಡ್'ನ ಸಾಫ್ಟ್'ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಧುಸೂದನ್ ರಾವ್ (47) ಬಂಧಿತ ಆರೋಪಿ.

ಬೆಂಗಳೂರು(ಮೇ.11): ಬಸ್ಸಿನಲ್ಲೇ ಮಹಿಳೆಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಬೆಂಗಳೂರು ಟೆಕ್ಕಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ವೈಟ್'ಫೀಲ್ಡ್'ನ ಸಾಫ್ಟ್'ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಧುಸೂದನ್ ರಾವ್ (47) ಬಂಧಿತ ಆರೋಪಿ.ಈತ ಐಟಿ ಕಂಪನಿಯಲ್ಲಿ ಕೆಲಸ ಮಾಡುವ 29 ವರ್ಷದ ಮಹಿಳೆಯೊಬ್ಬಳನ್ನು ಬಿಎಂಟಿಸಿ ವೋಲ್ವೊ ಬಸ್ಸಿನಲ್ಲಿ ಸಿಲ್ಕ್ ಬೋರ್ಡ್ ಬಳಿ ಸಂಚರಿಸುತ್ತಿದ್ದಾಗ ಬುಧವಾರ ಸಂಜೆ ಎಳದಾಡಿದ್ದಾನೆ. ಜನಸಂದಣಿಯಿದ್ದ ಬಸ್'ನಲ್ಲಿ  ಮಹಿಳೆಯ ಹಿಂಬದಿ ಕುಳಿತ್ತಿದ್ದ ಈತ ಅಸಭ್ಯವಾಗಿ ವರ್ತಿಸಿ ಎಳದಾಡಿದ್ದಾನೆ.

ನಂತರ ಈಕೆ ಬೆಳ್ಳಂದೂರು ಪೊಲೀಸ್ ಠಾಣೆಗೆ ಇತ್ತೀಚಿಗಷ್ಟೆ ಬಿಡುಗಡೆಗೊಳಿಸಿರುವ ಆನ್'ಲೈನ್'ನಲ್ಲಿ ದೂರು ಸ್ವೀಕರಿಸುವ '"Know Your Police Station" ಆ್ಯಪ್'ಗೆ ಬಸ್'ನಿಂದಲೇ ದೂರು ನೀಡಿದ್ದಾಳೆ. ತಕ್ಷಣ ದೂರು ಸ್ವೀಕರಿಸಿದ ಪೊಲೀಸರು ಬಸ್ ಚಲುಸುತ್ತಿದ್ದ ಸ್ಥಳಕ್ಕೆ ಆಗಮಿಸಿ  ಆರೋಪಿಯನ್ನು ಬಂಧಿಸಿ ಐಪಿಸಿ ಸೆಕ್ಷನ್ 354ರಡಿ ದೂರು ದಾಖಲಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೆ ಓಲಾ ಕ್ಯಾಬ್ ಚಾಕಲನೊಬ್ಬ ಗಾಯಕಿಯೊಬ್ಬಳನ್ನು ಮಧ್ಯರಾತ್ರಿಯ ವೇಳೆ ಡ್ರಾಪ್ ನೀಡುವ ಸಂದರ್ಭದಲ್ಲಿ ಲೈಂಗಿಕವಾಗಿ ಅನುಚಿತವಾಗಿ ವರ್ತಿಸಿದ್ದ. ರಾತ್ರಿ 2 ಗಂಟೆಯಾಗಿದ್ದ ಕಾರಣ ಯಾರೊಬ್ಬರು ಸಹಾಯಕ್ಕೆ ಬರಲಿಲ್ಲ. ನಂತರ ಆಕೆಯೇ ಚಾಲಕನನ್ನು ತಳ್ಳಿ ತಪ್ಪಿಸಿಕೊಂಡಿದ್ದಳು.4 ದಿನಗಳ ನಂತರ ಈಕೆ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಂತರ ಆರೋಪಿಯನ್ನು ಬಂಧಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಂಗ್ಲಾದೇಶದಲ್ಲಿ ಅನಾಮಿಕನ ಕೈಚಳಕ, ಒಸ್ಮಾನ್ ಹದಿ ಬೆನ್ನಲ್ಲೇ ಮತ್ತೊಬ್ಬ ನಾಯಕನಿಗೆ ಗುಂಡೇಟು
ದುಬೈನ ಬುರ್ಜ್ ಖಲೀಫಾಗೆ ಬಡಿದ ಸಿಡಿಲು: ವೀಡಿಯೋ ವೈರಲ್