
ಬೆಂಗಳೂರು: ಆನ್ಲೈನ್ ಮಾರಾಟದ ನೆಪದಲ್ಲಿ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸುತ್ತಿದ್ದ ತಂಡ ಬೆಂಗಳೂರು ಸೈಬರ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ.
ಪೇಮಾಜ ಡಾಟ್ ಕಾಮ್ ಹೆಸರಿನ ವೆಬ್ಸೈಟ್ನಲ್ಲಿ ಕಡಿಮೆ ಬೆಲೆಗೆ ಗೃಹಪಯೋಗಿ ವಸ್ತುಗಳನ್ನು ಮಾರುವುದಾಗಿ ಖದೀಮರು ಗ್ರಾಹಕರಿಗೆ ಆಫರ್ ನೀಡುತ್ತಿದ್ದರು.
ವೆಬ್ಸೈಟ್ನಲ್ಲಿ ಕೊಳ್ಳಲು ಮುಂದಾದ ಗ್ರಾಹಕರ ಬ್ಯಾಂಕ್ ಖಾತೆ ವಿವರಗಳಿಗೆ ಕನ್ನ ಹಾಕಿ ತಮ್ಮ ಅಕೌಂಟ್’ಗೆ ಹಣ ಟ್ರಾನ್ಸ್’ಫರ್ ಮಾಡಿಕೊಳ್ಳುತ್ತಿದ್ದರು.
ಜೆಪಿನಗರದ ಬ್ಯಾಂಕ್’ವೊಂದರಲ್ಲಿರುವ ಅಜಯ್ ಸಿಂಗ್ ಎಂಬ ಹೆಸರಿನ ಅಕೌಂಟ್ಗೆ ಹಣ ಬೀಳುವಂತೆ ಮಾಡುತ್ತಿದ್ದರು.
ಬಂಧಿತ ನಾಲ್ವರು ಪಾಟ್ನಾ, ಬಿಹಾರ ಮೂಲದವರು. ಐಷಾರಾಮಿ ಜೀವನಕ್ಕಾಗಿ ಹೀಗೆ ಆನ್ಲೈನ್ ಮೋಸಕ್ಕೆ ಇಳಿದಿದ್ದರು ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.