
ಬೆಂಗಳೂರು (ಏ.11): ದಿನಗಳು ಕಳೆದ ಹಾಗೆ ಬೆಂಗಳೂರು ಮೆಟ್ರೋದಲ್ಲಿ ಜನರು ಸಂಸ್ಕೃತಿಹೀನರಾಗಿ ವರ್ತನೆ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದರೊಂದಿಗೆ ಬೆಂಗಳೂರು ಮೆಟ್ರೋ ಕೂಡ ದೆಹಲಿ ಮೆಟ್ರೋದ ಹಾದಿಯಲ್ಲಿಯೇ ಸಾಗುತ್ತಿದೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ. ಅದಕ್ಕೆ ಕಾರಣ, ಬೆಂಗಳೂರು ಮೆಟ್ರೋ ನಿಲ್ದಾಣದಲ್ಲಿ ಜೋಡಿಯೊಂದು ರೋಮಾನ್ಸ್ ಮಾಡುತ್ತಿರುವ ದೃಶ್ಯ.
ಅಕ್ಕ ಪಕ್ಕ ಜನರು ನಿಂತಿದ್ದರೂ ಕ್ಯಾರೆ ಎನ್ನದೆ ಯುವ ಜೋಡಿಯೊಂದು ರೋಮಾನ್ಸ್ ಮಾಡುತ್ತಿರುವ ದೃಶ್ಯ ಸೋಶಿಯಲ್‌ಮೀಡಿಯಾದಲ್ಲಿ ವೈರಲ್ ಆಗಿದೆ. ಪಕ್ಕದಲ್ಲಿ ಮಹಿಳೆಯರು,ಹಿರಿಯರು ಇದರೂ ಯಾವುದಕ್ಕೂ ಕ್ಯಾರೇ ಎನ್ನದೇ ಹುಡುಗ ಮೆಟ್ರೋ ನಿಲ್ದಾಣದಲ್ಲಿಯೇ ಹುಡುಗಿಗೆ ಕೈಬಿಟ್ಟಿದ್ದಾನೆ. ಈ ಜೋಡಿಯ ರೋಮ್ಯಾನ್ಸ್ ವಿಡಿಯೋ ಭಾರೀ ವೈರಲ್ ಆಗಿದೆ. 1 ನಿಮಿಷ 30 ಸೆಕಂಡ್ ವಿಡಿಯೋ ಇದಾಗಿದ್ದು, ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಫ್ಲ್ಯಾಟ್ ಫಾರ್ಮ್ -3ಯಲ್ಲಿ ನಡೆದ ಘಟನೆ ಅನ್ನೋ ಮಾಹಿತಿ ಸಿಕ್ಕಿದೆ.
ಇನ್ನೊಂದೆಡೆ ಇದು ಮಾದಾವರ ಮೆಟ್ರೋ ನಿಲ್ದಾಣದಲ್ಲಿ ನಡೆದಿರುವ ಘಟನೆ ಎನ್ನಲಾಗಿದೆ. ಕರ್ನಾಟಕ ಪೋರ್ಟ್‌ಫೋಲಿಯೋ ಎನ್ನುವ ಎಕ್ಸ್ ಹ್ಯಾಂಡಲ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ‘‘ಬೆಂಗಳೂರು ಮೆಟ್ರೋ ಕೂಡ ದೆಹಲಿ ಮೆಟ್ರೋ ಸಂಸ್ಕೃತಿಯತ್ತ ಸಾಗುತ್ತಿದೆಯೇ?’’ ಎಂದು ಪ್ರಶ್ನಿಸಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋಗೆ (Viral Video) ಈಗ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದೆ. ಇನ್ನು ಈ ವಿಡಿಯೋ ಬಗ್ಗೆ ಬೆಂಗಳೂರು ಮೆಟ್ರೋ ಅಧಿಕಾರಿಗಳಾಗಲಿ, ಪೊಲೀಸರಾಗಲಿ ಯಾವುದೇ ಹೇಳಿಕೆ ನೀಡಿಲ್ಲ.
ದೆಹಲಿ ಮೆಟ್ರೋ ರೀತಿಯಂತಾದ ಬೆಂಗಳೂರು: ಈ ಬಗ್ಗೆ ಬರೆದುಕೊಂಡಿರುವ Karnataka Portfolio ಎಕ್ಸ್ ಹ್ಯಾಂಡಲ್, 'ಬೆಂಗಳೂರು ದೆಹಲಿ ಮೆಟ್ರೋ ಸಂಸ್ಕೃತಿಯತ್ತ ಸಾಗುತ್ತಿದೆಯೇ??? ನಮ್ಮ ಮೆಟ್ರೋ ನಿಲ್ದಾಣದಲ್ಲಿ ಸಾರ್ವಜನಿಕರ ನಡವಳಿಕೆಯು ಬೆಂಗಳೂರಿನ ಸಭ್ಯತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ' ಎಂದು ಬರೆದುಕೊಂಡಿದೆ.
ಕೆಲವು ವ್ಯಕ್ತಿಗಳು ಈಗ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುತ್ತಿರುವ ರೀತಿಯ ನಡವಳಿಕೆಯನ್ನು ನೋಡುವುದು ಅತ್ಯಂತ ನಿರಾಶಾದಾಯಕ ಮತ್ತು ಕಳವಳಕಾರಿಯಾಗಿದೆ. ಮಾದಾವರ ಬಳಿಯ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಇತ್ತೀಚೆಗೆ ನಡೆದ ಘಟನೆಯು ಅನೇಕರನ್ನು ಆಘಾತಗೊಳಿಸಿದೆ. ಒಬ್ಬ ಯುವಕ ತನ್ನ ಗೆಳತಿಯೊಂದಿಗೆ ಅತ್ಯಂತ ಅನುಚಿತ ವರ್ತನೆಯಲ್ಲಿ ತೊಡಗಿದ್ದು, ಅವಳೊಂದಿಗೆ ನಿಂತಾಗ ಬಹಿರಂಗವಾಗಿ ಆಕೆಯ ಬಟ್ಟೆಯೊಳಗೆ ತನ್ನ ಕೈಗಳನ್ನು ಅಸಭ್ಯ ರೀತಿಯಲ್ಲಿ ಇಡುತ್ತಿರುವುದು ಕಂಡುಬಂದಿದೆ. ಅಂತಹ ಕ್ರಮಗಳು, ವಿಶೇಷವಾಗಿ ಮೆಟ್ರೋ ನಿಲ್ದಾಣದಂತಹ ಸಾರ್ವಜನಿಕ ಸ್ಥಳದಲ್ಲಿ, ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ.
ಸಾರ್ವಜನಿಕ ಸ್ಥಳಗಳು ಮಕ್ಕಳು, ಮಹಿಳೆಯರು, ಕುಟುಂಬಗಳು, ಹಿರಿಯರು ಎಲ್ಲರಿಗೂ ಮೀಸಲಾಗಿವೆ - ಮತ್ತು ಜನರು ಅವುಗಳನ್ನು ಆತ್ಮೀಯ ನಡವಳಿಕೆಗಾಗಿ ಖಾಸಗಿ ವಲಯಗಳಾಗಿ ಪರಿಗಣಿಸುವುದನ್ನು ನೋಡುವುದು ಅಗೌರವ ಮತ್ತು ಅವಮಾನಕರ. ಸಾರ್ವಜನಿಕ ನಡವಳಿಕೆ ಅಥವಾ ಅವರ ಸುತ್ತಮುತ್ತಲಿನ ಜನರ ಬಗ್ಗೆ ಯಾವುದೇ ಗೌರವವನ್ನು ಹೊಂದಿರದ ಕೆಲವು ವ್ಯಕ್ತಿಗಳಲ್ಲಿ ನಾಚಿಕೆ ಮತ್ತು ಸಭ್ಯತೆಯ ಕೊರತೆ ಹೆಚ್ಚುತ್ತಿರುವುದನ್ನು ಇದು ಪ್ರತಿಬಿಂಬಿಸುತ್ತದೆ.
ಸಂಬಂಧಗಳು ವೈಯಕ್ತಿಕ ವಿಷಯವಾಗಿದ್ದರೂ, ವಾತ್ಸಲ್ಯ ಮತ್ತು ಸಾರ್ವಜನಿಕ ಅಸಭ್ಯತೆಯ ನಡುವೆ ಸ್ಪಷ್ಟವಾದ ಗೆರೆ ಇದೆ - ಮತ್ತು ಸಾರ್ವಜನಿಕ ಸಾರಿಗೆಗಾಗಿ ಉದ್ದೇಶಿಸಲಾದ ಜಾಗದಲ್ಲಿ ಆ ಗೆರೆಯನ್ನು ಎಂದಿಗೂ ದಾಟಬಾರದು. ಇನ್ನೂ ಹೆಚ್ಚು ಬೇಸರದ ವಿಷಯವೆಂದರೆ ಕೆಲವು ಯುವತಿಯರು ತಮ್ಮ ಸಂಗಾತಿಗಳಿಂದ ಅಂತಹ ನಡವಳಿಕೆಯನ್ನು ಸಹಿಸಿಕೊಳ್ಳುವ ಅಥವಾ ಪ್ರೋತ್ಸಾಹಿಸುವ ಮನೋಭಾವ, ಅದರಲ್ಲಿ ಯಾವುದೇ ತಪ್ಪಿಲ್ಲ ಎಂಬಂತೆ. ಇದು ಧೈರ್ಯ ಅಥವಾ ಸ್ವಾತಂತ್ರ್ಯವಲ್ಲ. ಇದು ನಿರ್ಲಕ್ಷ್ಯ, ಅಗೌರವ ಮತ್ತು ಸಾಮಾಜಿಕ ಅರಿವಿನ ಕೊರತೆ ಎಂದು ಬರೆದುಕೊಂಡಿದೆ.
ಮೆಟ್ರೋದಲ್ಲಿ ಮದ್ಯ ಸೇವಿಸಿ, ಪೊಲೀಸರ ಅತಿಥಿಯಾದ ಪೋಲಿ!
ಬೆಂಗಳೂರು ಯಾವಾಗಲೂ ಪ್ರಗತಿಪರ ಆದರೆ ಗೌರವಾನ್ವಿತ ಸಂಸ್ಕೃತಿಗೆ ಹೆಸರುವಾಸಿಯಾದ ನಗರವಾಗಿದೆ. ದುರದೃಷ್ಟವಶಾತ್, ಈ ರೀತಿಯ ಘಟನೆಗಳು ಹೆಚ್ಚಾಗಿ ಕಂಡುಬರುತ್ತಿರುವುದರಿಂದ, ನಮ್ಮ ನಗರಕ್ಕೆ ಯಾವ ರೀತಿಯ ಮೌಲ್ಯಗಳನ್ನು ತರಲಾಗುತ್ತಿದೆ ಮತ್ತು ಸಾರ್ವಜನಿಕ ನಡವಳಿಕೆಯ ಮೂಲಭೂತ ಮಾನದಂಡಗಳನ್ನು ಏಕೆ ನಿರ್ಲಕ್ಷಿಸಲಾಗುತ್ತಿದೆ ಎಂದು ಆಶ್ಚರ್ಯ ಪಡದೆ ಇರಲು ಸಾಧ್ಯವಿಲ್ಲ. ಅಧಿಕಾರಿಗಳು ಅಂತಹ ನಡವಳಿಕೆಯ ವಿರುದ್ಧ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು ಮತ್ತು ಸಾರ್ವಜನಿಕ ಸ್ಥಳಗಳು ಎಲ್ಲರಿಗೂ ಸುರಕ್ಷಿತ, ಸ್ವಚ್ಛ ಮತ್ತು ಗೌರವಾನ್ವಿತವಾಗಿ ಉಳಿಯುವಂತೆ ಮಾದರಿ ಕ್ರಮಗಳನ್ನು ತೋರಿಸಬೇಕು ಎಂದು ಬರೆಯಲಾಗಿದೆ.
ಓಯೋ ರೂಮ್ ಬಾಗಿಲು ಹಾಕೊಳ್ಳೋದನ್ನ ಮರೆತ ಜೋಡಿ; ಮೆಟ್ರೋ ನಿಲ್ದಾಣದಿಂದ ಕೂಗಿ ಹೇಳಿದ ವ್ಯಕ್ತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.