ಶ್ರೀಮಂತ ನಗರಗಳ ಪಟ್ಟಿ: ಬೆಂಗಳೂರು ನಂ. 3

Published : Feb 27, 2017, 05:45 AM ISTUpdated : Apr 11, 2018, 01:12 PM IST
ಶ್ರೀಮಂತ ನಗರಗಳ ಪಟ್ಟಿ: ಬೆಂಗಳೂರು ನಂ. 3

ಸಾರಾಂಶ

ಮುಂಬೈ ಸಿರಿವಂತರ ಆಸ್ತಿ ರು. 54 ಲಕ್ಷ ಕೋಟಿ; ದಿಲ್ಲಿ ಶ್ರೀಮಂತರ ಬಳಿ ರು. 30 ಲಕ್ಷ ಕೋಟಿ ಹಣ; ಬೆಂಗಳೂರು ಕುಬೇರರ ಆಸ್ತಿ 21 ಲಕ್ಷ ಕೋಟಿ

ನವದೆಹಲಿ: ಅತಿ ಹೆಚ್ಚು ಶ್ರೀಮಂತರು ವಾಸಿಸುವ ನಗರಗಳ ಪಟ್ಟಿಯಲ್ಲಿ ಭಾರತದ ಐಟಿ ರಾಜಧಾನಿ ಎಂದೇ ಕರೆಸಿಕೊಳ್ಳುವ ಬೆಂಗಳೂರು ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಮುಂಬೈ ನಂ.1 ಸ್ಥಾನದಲ್ಲಿದೆ.
ಬೆಂಗಳೂರಿನಲ್ಲಿ ಸದ್ಯ 7700 ಮಂದಿ ಮಿಲಿಯನೇರ್‌ಗಳು (10 ಲಕ್ಷ ಅಮೆರಿಕನ್‌ ಡಾಲರ್‌ ಅಥವಾ 6.7 ಕೋಟಿ ರು.ಗಿಂತ ಹೆಚ್ಚಿನ ಸಂಪತ್ತು ಹೊಂದಿದವರು) ಹಾಗೂ 8 ಬಿಲಿಯನೇರ್‌ (100 ಶತಕೋಟಿ ಡಾಲರ್‌ ಅಥವಾ 6700 ಕೋಟಿ ರು. ಸಂಪತ್ತು ಹೊಂದಿದವರು)ಗಳು ಇದ್ದಾರೆ. ಒಟ್ಟಾರೆ ಬೆಂಗಳೂರಿನ ಶ್ರೀಮಂತರು 21 ಲಕ್ಷ ಕೋಟಿ ರು. ಆಸ್ತಿ ಹೊಂದಿದ್ದಾರೆ ಎಂದು ‘ನ್ಯೂ ವಲ್ಡ್‌ರ್‍ ವೆಲ್ತ್‌' ವರದಿ ತಿಳಿಸಿದೆ.

ಬರೋಬ್ಬರಿ 46 ಸಾವಿರ ಮಿಲಿಯನೇರ್ ಹಾಗೂ 28 ಬಿಲಿಯನೇರ್'ಗಳೀಗೆ ಆಶ್ರಯ ತಾಣವಾಗುವ ಮೂಲಕ ವಾಣಿಜ್ಯ ರಾಜಧಾನಿ ಮುಂಬೈ ದೇಶದ ನಂ.1 ಕುಬೇರರ ನಗರವಾಗಿ ಹೊರಹೊಮ್ಮಿದೆ.

ಮುಂಬೈನಲ್ಲಿರುವ ಸಿರಿವಂತರ ಒಟ್ಟಾರೆ ಆಸ್ತಿ 54 ಲಕ್ಷ ಕೋಟಿ ರೂ.ನಷ್ಟಿದೆ. ದೇಶದ ರಾಜಧಾನಿ ದೆಹಲಿ ಎರಡನೇ ಸ್ಥಾನದಲ್ಲಿದ್ದು, ಅಲ್ಲಿ 23 ಸಾವಿರ ಮಿಲಿಯನೇರ್ ಹಾಗೂ 18 ಬಿಲಿಯನೇರ್'ಗಳು ವಾಸ ಮಾಡುತ್ತಿದ್ದಾರೆ. ಅಲ್ಲಿನ ಶ್ರೀಮಂತರ ಬಳಿ 30 ಲಕ್ಷ ಕೋಟಿ ರೂ. ಸಂಪತ್ತು ಇದೆ ಎಂದು ವರದಿ ತಿಳಿಸಿದೆ.

2016ರ ಡಿಸೆಂಬರ್'ನ ಲೆಕ್ಕದ ಪ್ರಕಾರ, ಒಟ್ಟಾರೆ ದೇಶದಲ್ಲಿ 2.64 ಲಕ್ಷ ಮಿಲಿಯನೇರ್'ಗಳು ಹಾಗೂ 95 ಬಿಲಿಯನೇರ್'ಗಳು ಇದ್ದಾರೆ. 409 ಲಕ್ಷ ಕೋಟಿ ರೂ ಸಂಪತ್ತು ಹೊಂದಿದ್ದಾರೆ ಎಂದು ಹೇಳಿದೆ.

(epaper.kannadaprabha.in)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಶ್ವದ ಶ್ರೀಮಂತ ಕುಟುಂಬಗಳ ಪಟ್ಟಿ ಪ್ರಕಟಿಸಿದ ಬ್ಲೂಮ್‌ಬರ್ಗ್, ಭಾರತದ ಏಕೈಕ ಫ್ಯಾಮಿಲಿಗೆ ಸ್ಥಾನ
ಕಾರ್ಯಕರ್ತರು ಎದೆಗುಂದಬೇಡಿ, ಜೆಡಿಎಸ್‌ಗೆ ಉತ್ತಮ ಕಾಲ ಬರಲಿದೆ: ಕೇಂದ್ರ ಸಚಿವ ಕುಮಾರಸ್ವಾಮಿ