
ನವದೆಹಲಿ (ಫೆ. 27): ವ್ಯಕ್ತಿಯ ಆಧಾರ್ ಬಯೋಮೆಟ್ರಿಕ್’’ಗಳನ್ನು ಕಾನೂನು ಬಾಹಿರವಾಗಿ ಸಂಗ್ರಹಿಸಿ ದುರ್ಬಳಕೆ ಮಾಡಿದ್ದಾರೆಂದು ಆರೋಪಿಸಿ, ಆಕ್ಸಿಸ್ ಬ್ಯಾಂಕ್ ಸೇರಿದಂತೆ 3 ಕಂಪನಿಗಳ ವಿರುದ್ಧ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಸೈಬರ್ ಪೊಲೀಸರಿಗೆ ದೂರು ದಾಖಲಿಸಿದೆ.
ಆಕ್ಸಿಸ್ ಬ್ಯಾಂಕ್, ಮುಂಬೈಯ ಸುವಿಧಾ ಇನ್ಫೋ ಸರ್ವ್, ಹಾಗೂ ಬೆಂಗಳೂರಿನ ಇ-ಮುದ್ರಾ ಕಂಪನಿಗಳು ಕಾನೂನು ಬಾಹಿರವಾಗಿ ವ್ಯಕ್ತಿಯ ಆಧಾರ್ ಬಯೋಮೆಟ್ರಿಕ್’ಗಳನ್ನು ಸಂಗ್ರಹಿಟ್ಟುಕೊಂಡಿದ್ದಾರಲ್ಲದೇ, ದುರ್ಬಳಕೆ ಮಾಡಿದ್ದಾರೆಂದು ದೆಹಲಿಯ ಸೈಬರ್ ಸೆಲ್’ನಲ್ಲಿ ವಿಶಿಷ್ಟ ಗುರುತು ಪ್ರಾಧಿಕಾರವು ಕ್ರಿಮಿನಲ್ ದೂರು ದಾಖಲಿಸಿದೆ.
ಓರ್ವ ವ್ಯಕ್ತಿಯು 14 ಜುಲೈ 2016 ಮತ್ತು 19 ಫೆಬ್ರವರಿ 2017 ನಡುವೆ 397 ಬಯೋಮೆಟ್ರಿಕ್ ವ್ಯವಹಾರಗಳನ್ನು ನಡೆಸಿರುವುದು ಅಧಾರ್ ಅಧಿಕಾರಿಗಳ ಗಮನಕ್ಕೆ ಬಂದಿದೆ. ಅದರಲ್ಲಿ 194 ವ್ಯವಹಾರಗಳು ಆಕ್ಸಿಸ್ ಬ್ಯಾಂಕ್, 112 ವ್ಯವಹಾರಗಳು ಇ-ಮುದ್ರಾ ಹಾಗೂ 91 ವ್ಯವಹಾರಗಳು ಸುವಿಧಾ ಇನ್ಪೋಸರ್ವ್ ಮೂಲಕ ನಡೆಸಿರುವುದು ಪತ್ತೆಯಾಗಿದೆ. ಬೇರೆ ಬೇರೆ ಸಂಸ್ಥೆಗಳ ಮೂಲಕ ಒಂದೇ ಬಯೋಮೆಟ್ರಿಕ್ ಗುರುತುಗಳು ಏಕಕಾಲದಲ್ಲಿ ಬಳಕೆಯಾಗುವುದುರ ಹಿಂದೆ ಅಕ್ರಮ ವ್ಯವಹಾರ ಇರಬಹುದೆಂದು ಅಧಿಕಾರಿಗಳಿಗೆ ಶಂಕೆ ಉಂಟಾಗಿದೆ.
ಆದರೆ ಸುವಿಧಾ ಇನ್ಫೋಸರ್ವ್ ಕಂಪನಿ ಸಿಇಓ ಪರೇಶ್ ರಾಜ್ಡೆ, ಆಕ್ಸಿಸ್ ಬ್ಯಾಂಗ್’ನ ನೂತನ ಯೋಜನೆಯೊಂದಕ್ಕೆ ಹೊಸ ಅಪ್ಲಿಕೇಶನ್ ಒಂದರ ಪ್ರಯೋಗ ನಡೆಸುವಾಗ ಪರೀಕ್ಷಾರ್ಥವಾಗಿ ವ್ಯವಹಾರ ನಡೆಸಲಾಗಿತ್ತು. ಅದರಿಂದ ಯಾವುದೇ ಹಣಕಾಸು ವಂಚನೆ ಅಥವಾ ನಷ್ಟವುಂಟಾಗಿಲ್ಲವೆಂದು ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ನಮ್ಮ ವ್ಯವಹಾರ ಪಾಲುದಾರ ಸುವಿಧಾ ಇನ್ಫೋಸರ್ವ್ ಪರೀಕ್ಷಾರ್ಥವಾಗಿ ವ್ಯವಹಾರಗಳನ್ನು ನಡೆಸಿದೆ. ಅದರಿಂದ ವಂಚನೆಯೇನೂ ಆಗಿಲ್ಲ. ವಿಶಿಷ್ಟ ಗುರುತು ಪ್ರಾಧಿಕಾರವು ವಿವರಣೆಯನ್ನು ಕೇಳಿದೆ. ನಾವು ಅವರ ಸಂಪರ್ಕದಲ್ಲಿದ್ದೇವೆಯೆಂದು ಆಕ್ಸಿಸ್ ಬ್ಯಾಂಕ್ ಸ್ಪಷ್ಟನೆ ನೀಡಿರುವುದಾಗಿ ವರದಿ ಹೇಳಿದೆ.
ಆದರೆ ಬಯೋಮೆಟ್ರಿಕ್’ಗಳನ್ನು ಸಂಗ್ರಹಿಸುವುದು ಆಧಾರ್ ಕಾನೂನಿನ ಉಲ್ಲಂಘನೆಯಾಗಿದೆ ಹಾಗೂ ಅಪರಾಧ ಸಾಬೀತಾದಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆಯೂ ನಿಡಬಹುದಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.