
ನವದೆಹಲಿ: ಭಾರ್ತಿ ಏರ್‌ಟೆಲ್ ಕಂಪನಿಯು ಅ್ಯಪಲ್ ವಾಚ್ ಇ-ಸಿಮ್ ಸೇವೆಯ ನಿಯಮಗಳನ್ನು ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿರುವ ರಿಲಯನ್ಸ್ ಜಿಯೋ, ದೂರ ಸಂಪರ್ಕ ಇಲಾಖೆಗೆ ದೂರು ನೀಡಿದೆ.
ನಿಯಮಗಳನ್ನು ಉಲ್ಲಂಘಿಸಿ ಏರ್‌ಟೆಲ್ ಕಂಪನಿಯು ಅ್ಯಪಲ್ ವಾಚ್ ಸೀರಿಸ್-3 ಸೇವೆಗಳನ್ನು ನೀಡುತ್ತಿದೆ ಎಂದು ಆರೋಪಿಸಿರುವ ರಿಲಯನ್ಸ್ ಜಿಯೋ, ಕೂಡಲೇ ಸೇವೆಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದೆ.
ಭಾರ್ತಿ ಏರ್‌ಟೆಲ್ ಹಾಗೂ ರಿಲಯನ್ಸ್ ಜಿಯೋ- ಎರಡೂ ಕಂಪನಿಗಳು ಕಳೆದ ಮೇ.11 ರಿಂದ ಅ್ಯಪಲ್ ವಾಚ್ ಸೀರಿಸ್-3 ಸೇವೆಗಳನ್ನು ನೀಡಲು ಆರಂಭಿಸಿವೆ.
ಈ ತಂತ್ರಜ್ಞಾನದಲ್ಲಿ, ಐಫೋನ್ ಬಳಕೆದಾರರ ಅ್ಯಪಲ್ ವಾಚ್ ಹಾಗೂ ಹ್ಯಾಂಡ್‌ಸೆಟ್ ಒಂದೇ ಸಂಖ್ಯೆಯನ್ನು ಹೊಂದಿದ್ದು, ಬಳಕೆದಾರರು ಇ-ಸಿಮ್ [eSIM] ಮೂಲಕ ಸ್ವತಂತ್ರವಾಗಿ ಏಕಕಾಲದಲ್ಲಿ ಆ ಎರಡೂ ಸಾಧನಗಳನ್ನು ಕರೆ ಮಾಡಲು/ಸ್ವೀಕರಿಸಲು ಉಪಯೋಗಿಸಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.