ಆಯುಧ ಪೂಜೆಯಂದು ಮುತ್ತಪ್ಪ ರೈಗೆ ಅಪರಿಚಿತ ತಂದ ಆಪತ್ತು: ಯಾರವರು?

By Web Desk  |  First Published Oct 20, 2018, 5:20 PM IST

ಇದು ಮುತ್ತಪ್ಪ ರೈಗೆ ಅಪರಿಚಿತ ತಂದ ಅಪತ್ತು. ಮಾಜಿ ಡಾನ್ ಮುತ್ತಪ್ಪ ರೈಗೆ ಸಂಕಷ್ಟ ತಂದಿದ್ದು ಯಾರು ಗೊತ್ತಾ..? ಹಲವು ವರ್ಷಗಳ ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ ಮುತ್ತಪ್ಪ ರೈ. ಇದಕ್ಕೆ ಕಾರಣ ಯಾರು? ಇಲ್ಲಿದೆ ಡಿಟೇಲ್ಸ್


ಬೆಂಗಳೂರು, [ಅ.20]: ಜಯಕರ್ನಾಟಕ ಸಂಘಟನೆಯ ಸಂಸ್ಥಾನಪಕ, ಮಾಜಿ ಡಾನ್ ಮುತ್ತಪ್ಪ ರೈ ಅವರು ಹಲವು ವರ್ಷಗಳ ಬಳಿಕ ಇಂದು [ಶನಿವಾರ] ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಅಪರಿಚಿತರೊಬ್ಬ ಮಾಡಿದ ಸಣ್ಣ ಯಡವಟ್ಟಿನಿಂದ ಇಂದು ಮುತ್ತಪ್ಪ ರೈ ಪೊಲೀಸ್ ಮೆಟ್ಟಿಲೇರಬೇಕಾಯಿತು. ಅಷ್ಟಕ್ಕೂ ಮುತ್ತಪ್ಪ ರೈ ಪೊಲೀಸ್ ಮೆಟ್ಟಿಲೇರಲು ಬೇರೆ ಯಾರು ಅಲ್ಲ ಒಬ್ಬ ಅರ್ಚಕ. 

Tap to resize

Latest Videos

ಎಲ್ಲಾ ಎತ್ಕೊಂಡ್ ಸ್ಟೇಷನ್ ಗೆ ಬನ್ನಿ: ಆಯುಧ ಪೂಜೆ ಮಾಡಿದ್ದ ಮುತ್ತಪ್ಪ ರೈಗೆ ಸಂಕಷ್ಟ!

ಹೌದು, ಮುತ್ತಪ್ಪ ರೈ ಅವರು ಮೊನ್ನೇ ಆಯುಧ ಪೂಜೆ ದಿನದಂದು ಪೂಜೆ ಮಾಡಲು ಅರ್ಚಕರನ್ನ ಕರೆಯಿಸಿದ್ದರು. ಈ ವೇಳೆ ಅರ್ಚಕರ ಜೊತೆ ಬಂದಿದ್ದ ಸಹಾಯಕ ಅರ್ಚಕರೊಬ್ಬರು ಆಯುಧಗಳ ಜೊತೆ ಮುತ್ತಪ್ಪ ರೈಇದ್ದ ಫೋಟೋ ತೆಗೆದಿದ್ದಾನೆ.

ಬಳಿಕ ಆ ಫೋಟೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟಿದ್ದು, ಫೋಟೋ ಫುಲ್ ವೈರಲ್ ಆಗಿದೆ. ಈ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ಆಯುಧಗಳ ಸಮೇತ ಹಾಜರಾಗುವಂತೆ ಮುತ್ತಪ್ಪ ರೈಗೆ ನೋಟಿಸ್ ನೀಡಿದ್ದಾರೆ.  

ಇದರ ಅನ್ವಯ ಇಂದು ಮುತ್ತಪ್ಪ ರೈ ಸಿಸಿಬಿ ಮುಂದೆ ಹಾಜರಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

click me!