
ಬೆಂಗಳೂರು [ಜು.19] : ವಿಶ್ವಾಸ ಮತಕ್ಕೆ ಗವರ್ನರ್ ಡೆಡ್ ಲೈನ್ ನೀಡಿದ್ದಾರೆ. ಆದರೆ ಅವರು ಸ್ಪೀಕರ್ ಗೆ ಮಾರ್ಗದರ್ಶನ ನೀಡಬಹುದು. ಸದನದಲ್ಲಿ ಚರ್ಚೆ ಮಾಡುವ ಮುನ್ನ ಅವಸರ ಮಾಡುವುದು ಸೂಕ್ತವಲ್ಲ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಅತೃಪ್ತರಾಗಿ ತೆರಳಿದವರು ನಾವು ಕಾಂಗ್ರೆಸಿಗರು ಎಂದೇ ಎಲ್ಲಾ ಕಡೆ ಹೇಳಿಕೊಳ್ಳುತ್ತಿದ್ದಾರೆ. ಅವರು ಯಾವ ಪಕ್ಷಕ್ಕೂ ಸೇರಿಲ್ಲ. ಅತೃಪ್ತ ಶಾಸಕರು ಕಾಂಗ್ರೆಸ್ ಗೆ ನೀಡಿದ ಬೆಂಬಲ ವಾಪಸ್ ಪಡೆದಿದ್ದಾರೆ ಎಂದು ಗವರ್ನರ್ ಹೇಳುತ್ತಿದ್ದಾರೆ. ಅದನ್ನು ಸಾಬೀತು ಮಾಡಲಿ ಎಂದು ಡಿಕೆಶಿ ಹೇಳಿದರು.
ಬಿಜೆಪಿಯವರು ಅತೃಪ್ತ ಶಾಸಕರ ಭವಿಷ್ಯ ಹಾಳು ಮಾಡುತ್ತಿದ್ದಾರೆ. ದಿಕ್ಕು ತಪ್ಪಿಸುವ ಕಾರ್ಯತಂತ್ರ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡರ ವಿರುದ್ಧ ಡಿಕೆಶಿ ಅಸಮಾಧಾನ ಹೊರ ಹಾಕಿದರು.
ಇನ್ನು ಒಮ್ಮೆ ರಾಜೀನಾಮೆ ನೀಡಿದಲ್ಲಿ ಮಂತ್ರಿ ಸ್ಥಾನ ಸಿಗಲ್ಲ ಎಂದು ವಾರ್ನಿಂಗ್ ನೀಡಿದ ಡಿಕೆ, ನಿಮ್ಮ ಭವಿಷ್ಯ ಹಾಳುಮಾಡಿಕೊಳ್ಳಬೇಡಿ ಎಂದರು.
ಈಗಾಗಲೇ ಮುಂಬೈನಲ್ಲಿ 15 ಮೈತ್ರಿ ಶಾಸಕರು ಬೀಡುಬಿಟ್ಟಿದ್ದಾರೆ. ಅದರೊಂದಿಗೆ ಕೆಲ ಕಾಂಗ್ರೆಸ್ ಶಾಸಕರು ಗೈರಾಗಿದ್ದಾರೆ. ಇದರಿಂದ ವಿಶ್ವಾಸ ಮತದ ವೇಳೆ ಹಿನ್ನಡೆ ಅನುಭವಿಸುವ ಅಳುಕು ಮೈತ್ರಿ ಪಾಳಯದಲ್ಲಿದೆ. ಆದರೂ ಕೂಡ ಕೊಂಚ ವಿಶ್ವಾಸ ಉಳಿಸಿಕೊಂಡಂತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.