ಬೆಂಗಳೂರಿನಲ್ಲಿ ರಾಂಗ್ ರೂಟ್‌ನಲ್ಲಿ ಬೈಕ್ ಚಲಾಯಿಸುತ್ತಿದ್ದ ಸವಾರನೊಬ್ಬ, ಸರಿಯಾದ ದಾರಿಯಲ್ಲಿ ಬರುತ್ತಿದ್ದ ಕಾರು ಚಾಲಕನಿಗೆ ಅವಾಜ್ ಹಾಕಿದ್ದಾನೆ. ಈ ಘಟನೆಯಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಏ.4): ಒಂದೆಡೆ ಗುಂಡಿ ಬಿದ್ದ ರಸ್ತೆಗಳು, ಇನ್ನೊಂದೆಡೆ ರಸ್ತೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ರೋಡ್ ರೇಜ್ ಪ್ರಕರಣಗಳ ನಡುವೆ ಸಿಲಿಕಾನ್ ಸಿಟಿಯಲ್ಲಿ ವಾಹನಗಳನ್ನು ಓಡಿಸೋದೇ ದುಸ್ತರವಾಗಿದೆ. ಇನ್ನೊಂದೆಡೆ ಸರ್ಕಲ್‌ಗೆ ಒಬ್ಬರಂತೆನಿಲ್ಲುವ ಟ್ರಾಫಿಕ್ ಪೊಲೀಸರು ಕೂಡ ಎಲ್ಲರ ಮೇಲೂ ಹದ್ದಿನ ಕಣ್ಣಿಡಲು ಸಾಧ್ಯವಿಲ್ಲ. ಜನರೂ ಕೂಡ ತಮ್ಮ ವಾಹನಗಳನ್ನು ಓಡಿಸುವಾಗ ಬೇರೊಬ್ಬರಿಗೆ ತೊಂದರೆ ಆಗದಿರುವಂತೆ ಟ್ರಾಫಿಕ್ ನಿಯಮಗಳನ್ನು ಪಾಲಿಸಿ ವಾಹಗಳನ್ನು ಚಲಾಯಿಸಬೇಕು.
ಶುಕ್ರವಾರ ಬೆಂಗಳೂರಿನ ಉತ್ತರಹಳ್ಳಿಯ ಮುಖ್ಯರಸ್ತೆಯಲ್ಲಿ ನಡೆದ ಘಟನೆ ಇದು. ಬೈಕ್ ಸವಾರ ರಾಂಗ್ ರೂಟ್‌ನಲ್ಲಿ ಬಂದಿರೋದು ಅಲ್ಲದೆ, ಟ್ರಾಫಿಕ್ ನಿಯಮ ಪಾಲಿಸಿ ಸರಿ ದಾರಿಯಲ್ಲಿ ಬರುತ್ತಿದ್ದ ಕಾರು ಚಾಲಕನಿಗೆ ಆವಾಜ್ ಹಾಕಿರುವ ಘಟನೆ ನಡೆದಿದೆ. ವಿರುದ್ಧ ದಿಕ್ಕಿನಲ್ಲಿ ಬಂದು ರೋಡ್ ರೌಡಿಸಂಗೆ ಬೈಕ್ ಸವಾರ ಮುಂದಾಗಿದ್ದಾನೆ.
ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದು ಮಾತ್ರವಲ್ಲದೆ, ಕಾರ್ ಚಾಲಕನೊಂದಿಗೆ ಸುಖಾ ಸುಮ್ಮನೆ ಕಿರಿಕ್ ಮಾಡಿಕೊಂಡು ಹೋಗಿದ್ದಾನೆ. ಬೈಕ್ ಸವಾರ ವಿರುದ್ಧ ದಿಕ್ಕಿನಲ್ಲಿ ಬಂದ ಹಿನ್ನೆಲೆ ಇಡೀ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ತನ್ನಿಂದಾನೆ ಟ್ರಾಫಿಕ್ ಹೆಚ್ಚಿದ್ದರೂ, ಕಾರು ಚಾಲಕನ ಮೇಲೆ ದಬ್ಬಾಳಿಕೆ ನಡೆಸಿದ ವಿಡಿಯೋ ವೈರಲ್ ಆಗಿದೆ.
ಭಟ್ಕಳದಲ್ಲಿ ಚಿನ್ನದಂಗಡಿಗೆ ಸೇರುತ್ತಿದೆಯೇ ಸರ್ಕಾರದ ಟ್ರಾಫಿಕ್ ದಂಡದ ಹಣ?
ಅವಾಚ್ಯ ಪದಗಳ ಬೈಕ್ ರೈಡರ್ ಬಳಸಿದ್ದು ಮಾತ್ರವಲ್ಲದೆ, ಏಕವಚನದಲ್ಲಿ ನಿಂದನೆ ಮಾಡಿದ್ದಾನೆ. KA 05 QF 1849 ಬೈಕ್ ಸವಾರನ ವಿರುದ್ಧ ಕ್ರಮಕ್ಕೆ ಆಗ್ರಹ ವ್ಯಕಗ್ತವಾಗಿದೆ. ದ್ವಿಚಕ್ರ ವಾಹನ ವರ್ತನೆಗೆ ಆಕ್ರೋಶ ವ್ಯಕ್ತವಾಗಿದ್ದು, ರೋಡ್ ರೌಡಿಸಂ ಕಡಿವಾಣ ಹಾಕಲು ಪೊಲೀಸರಿಗೆ ಜನಸಾಮಾನ್ಯರು ಸೋಶಿಯಲ್ ಮೀಡಿಯಾ ಮೂಲಕ ಮನವಿ ಮಾಡಿದ್ದಾರೆ.
ಬೆಂಗಳೂರಲ್ಲಿ ಟ್ರಾಫಿಕ್ ರೂಲ್ ಬ್ರೇಕ್ ಮಾಡ್ತೀರಾ, ನಿಮ್ಮ ಕೆಲಸ ಕೂಡ ಹೋಗಬಹುದು ಹುಷಾರ್!