ಚೇತನ್‌ ಭಗತ್‌ ವಿರುದ್ಧ ಬೆಂಗಳೂರು ಲೇಖಕಿಯಿಂದ ಕೃತಿಚೌರ್ಯ ಆಪಾದನೆ

By Suvarna Web DeskFirst Published Apr 26, 2017, 8:09 AM IST
Highlights

ಚೇತನ್‌ರ ನೂತನ ಪುಸ್ತಕ ‘ಒನ್‌ ಇಂಡಿಯನ್‌ ಗಲ್‌ರ್‍' ವಿರುದ್ಧ ಕೃತಿಚೌರ್ಯದ ಆಪಾದನೆ ಕೇಳಿಬಂದಿದೆ. ಚೇತನ್‌ ಈ ಆಪಾದನೆಗಳನ್ನು ತಳ್ಳಿ ಹಾಕಿದ್ದಾರಾದರೂ, ಬೆಂಗಳೂರು ಕೋರ್ಟ್‌ ತಡೆ ನೀಡಿದೆ. ಐಐಟಿ ಮತ್ತು ಐಐಎಂ ಪದವೀಧರೆ ಅನ್ವಿತಾ ಬಾಜ್‌ಪಾಯ್‌ ಎಂಬವರು ಈ ಪ್ರಕರಣ ದಾಖಲಿಸಿದ್ದರು.

ನವದೆಹಲಿ: ಖ್ಯಾತ ಲೇಖಕ ಚೇತನ್‌ ಭಗತ್‌ರ ಭಾರೀ ಮಾರಾಟವಾಗುತ್ತಿರುವ ನೂತನ ಪುಸ್ತಕವೊಂದರ ಬಗ್ಗೆ ಬೆಂಗಳೂರು ಮೂಲದ ಲೇಖಕಿಯೊಬ್ಬರು ಕೃತಿಚೌರ್ಯ ಪ್ರಕರಣ ದಾಖಲಿಸಿದ್ದ ಹಿನ್ನೆಲೆಯಲ್ಲಿ, ಪುಸ್ತಕವನ್ನು ದೆಹಲಿ ವಿಶ್ವವಿದ್ಯಾಲಯದ ಪುಸ್ತಕದ ಭಾಗವನ್ನಾಗಿ ಮಾಡುವುದಕ್ಕೆ ಬೆಂಗಳೂರಿನ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ಚೇತನ್‌ರ ನೂತನ ಪುಸ್ತಕ ‘ಒನ್‌ ಇಂಡಿಯನ್‌ ಗಲ್‌ರ್‍' ವಿರುದ್ಧ ಕೃತಿಚೌರ್ಯದ ಆಪಾದನೆ ಕೇಳಿಬಂದಿದೆ. ಚೇತನ್‌ ಈ ಆಪಾದನೆಗಳನ್ನು ತಳ್ಳಿ ಹಾಕಿದ್ದಾರಾದರೂ, ಬೆಂಗಳೂರು ಕೋರ್ಟ್‌ ತಡೆ ನೀಡಿದೆ. ಐಐಟಿ ಮತ್ತು ಐಐಎಂ ಪದವೀಧರೆ ಅನ್ವಿತಾ ಬಾಜ್‌ಪಾಯ್‌ ಎಂಬವರು ಈ ಪ್ರಕರಣ ದಾಖಲಿಸಿದ್ದರು.

ತಾವು 2014ರ ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಚೇತನ್‌ರಿಗೆ ಉಡುಗೊರೆಯಾಗಿ ನೀಡಿದ್ದ ‘ಲೈಫ್‌, ಓಡ್ಸ್‌ ಆ್ಯಂಡ್‌ ಎಂಡ್ಸ್‌' ಎಂಬ ಕೃತಿಯಲ್ಲಿರುವ ಪಾತ್ರ, ಸ್ಥಳ ಮತ್ತು ಭಾವನಾತ್ಮಕ ಹರಿವುಗಳನ್ನು ಅವರು ಕೃತಿಚೌರ್ಯ ನಡೆಸಿದ್ದಾರೆ ಎಂದು ಅನ್ವಿತಾ ಆಪಾದಿಸಿದ್ದಾರೆ. ತಾತ್ಕಾಲಿಕ ತಡೆಯಾಜ್ಞೆ ನೀಡಿರುವುದನ್ನು ಅನ್ವಿತಾ ದೃಢಪಡಿಸಿದ್ದಾರೆ.

click me!