ಬೆಂಗಳೂರು ಮೆಟ್ರೋದಲ್ಲಿ ಜೂ.22 ರಿಂದ 6 ಕೋಚ್ ಸೌಲಭ್ಯ

Published : Jun 18, 2018, 03:15 PM ISTUpdated : Jun 18, 2018, 03:18 PM IST
ಬೆಂಗಳೂರು ಮೆಟ್ರೋದಲ್ಲಿ  ಜೂ.22 ರಿಂದ 6 ಕೋಚ್ ಸೌಲಭ್ಯ

ಸಾರಾಂಶ

ಬಯ್ಯಪ್ಪನಹಳ್ಳಿ- ಮೈಸೂರು ರಸ್ತೆಯ ಪರ್ಪಲ್ ಮಾರ್ಗಕ್ಕೆ  6 ಕೋಚ್'ಗಳ ಸೌಲಭ್ಯ ಜೂನ್ 2019ರ ವೇಳೆಗೆ ಎಲ್ಲ ಮಾರ್ಗಗಳಿಗೂ 6 ಕೋಚ್'ಗಳ ವಿಸ್ತರಣೆ

ಬೆಂಗಳೂರು[ಜೂ.18]: ನಮ್ಮ ಮೆಟ್ರೋದ ಫೇಸ್ 1 ಜೂ.24 ಕ್ಕೆ ಒಂದು ವರ್ಷ ಪೂರ್ಣಗೊಳಿಸಲಿದ್ದು ಈ ಶುಭ ಸಂದರ್ಭಕ್ಕಾಗಿ ಬಿಎಂಆರ್'ಸಿಎಲ್ ಜೂ.22ರಿಂದ ಪ್ರಯಾಣಿಕರಿಗಾಗಿ 6 ಕೋಚ್'ಗಳ ಸೌಲಭ್ಯ ಒದಗಿಸಲಿದೆ.

ಪೂರ್ವ - ಪಶ್ಚಿಮ ಕಾರಿಡಾರ್'ನ ಬಯ್ಯಪ್ಪನಹಳ್ಳಿ- ಮೈಸೂರು ರಸ್ತೆಯ ಪರ್ಪಲ್ ಮಾರ್ಗಕ್ಕೆ  6 ಕೋಚ್'ಗಳನ್ನು ಒದಗಿಸಲಾಗುತ್ತದೆ. ಮೊದಲ ಬೋಗಿಯನ್ನು ಮಹಿಳೆಯರಿಗಾಗಿ ಮೀಸಲಿಡಲಾಗುತ್ತದೆ. 

ಹಾಲಿ ಮೆಟ್ರೋ ರೈಲುಗಳು 3 ಕೋಚ್'ಗಳನ್ನು ಹೊಂದಿದ್ದು ಒಮ್ಮೆಗೆ 900 ಪ್ರಯಾಣಿಕರು ಸಂಚರಿಸಬಹುದು. ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಹೆಚ್ಚು ಕೋಚ್'ಗಳನ್ನು ಅಳವಡಿಸಲಾಗುತ್ತಿದೆ. ಜೂನ್ 2019ರ ವೇಳೆಗೆ ಎಲ್ಲ ಮಾರ್ಗಗಳಿಗೂ 6 ಕೋಚ್'ಗಳನ್ನು ವಿಸ್ತರಿಸಲು ಬಿಎಂಆರ್'ಸಿಎಲ್ ಉದ್ದೇಶ ಹೊಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

62 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಡೆಸಿ ಗೆದ್ದ 82ರ ವೃದ್ಧ
ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್‌ ನಬೀನ್‌ ನೇಮಕ: ರಾಜಕೀಯ ವಲಯದಲ್ಲಿ ಅಚ್ಚರಿ