
ಬೆಂಗಳೂರು(ಜೂನ್ 18) ಒಕ್ಕಲಿಗರ ಸಂಘದ ನೌಕಕರ ಪ್ರತಿಭಟನೆ ಬಿಸಿ ನಿರ್ಮಲಾನಂದ ನಾಥ ಸ್ವಾಮೀಜಿ ಅವರಿಗೂ ತಟ್ಟಿದೆ. ಒಕ್ಕಲಿಗ ಸಂಘದ ಕುವೆಂಪು ಕಲಾಕ್ಷೇತ್ರದಲ್ಲಿ ನಿಗದಿಯಾಗಿದ್ದ ಸಭೆಗೆ ಸ್ವಾಮೀಜಿ ಆಗಮಿಸಿಲ್ಲ.
ವಿವರಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಿಮ್ಸ್ ನೌಕರರು ಒಕ್ಕಲಿಗರ ಸಂಘದ ಎದುರು ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಒ್ರತಿಭಟನೆ ಸ್ಥಗಿತ ಮಾಡಿದರೆ ಮಾತ್ರ ಸಭೆಗೆ ಆಗಮಿಸುತ್ತೇನೆ ಎಂದು ಸ್ವಾಮೀಜಿ ಈ ಹಿಂದೆಯೇ ಹೇಳಿದ್ದರು. ಆದರೆ ಇಂದೂ ಸಹ ಪ್ರತಿಭಟನೆ ಮುಂದುವರಿದ ಕಾರಣ ಮುತ್ತಿಗೆ ಹಾಕಬಹುದು ಎಂಬ ಕಾರಣಕ್ಕೆ ಸ್ವಾಮೀಜಿ ಆಗಮಿಸಿಲ್ಲ.
ಸಭೆ ಕರೆದ ಬೆಟ್ಟೆಗೌಡ: ಸ್ವಾಮೀಜಿ ಸಭೆಗೆ ಆಗಮಿಸದ ಹಿನ್ನೆಲೆಯಲ್ಲಿ ಕೂಡಲೇ ಸಭೆ ಕರೆದಿರುವ ಒಕ್ಕಲಿಗ ಸಂಘದ ಅಧ್ಯಕ್ಷ ಬೆಟ್ಟಗೌಡ ಒಕ್ಕಲಿಗ ಪ್ರತಿಭಟನಾನಿರತರು ಮತ್ತು ನಿರ್ದೇಶಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಆದರೆ ಅಧ್ಯಕ್ಷರ ಮನವಿಗೆ ಬಗ್ಗದ ಒಕ್ಕಲಿಗ ಸಂಘ ನೌಕರರ ಸಂಘ, ಹೆಚ್ಚುವರಿ ನೇಮಕ ಮಾಡಿಕೊಂಡಿರುವ ಸಿಬ್ಬಂದಿ ಕೂಡಲೇ ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಜೂನ್ 21 ರಂದು ಕಾರ್ಯಕಾರಣಿ ಸಭೆ ಇದ್ದು ಅಲ್ಲಿ ಚರ್ಚೆ ಮಾಡಲಾಗುವುದು ಎಂದು ಹೇಳಿದ್ದರೂ ಪ್ರತಿಭಟನಾಕಾರರು ಬೆಲೆ ಕೊಟ್ಟಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.