ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದೆ ಬೆಂಗಾಲ್ ಬಿಳಿ ಟೈಗರ್

Published : Sep 19, 2017, 07:48 PM ISTUpdated : Apr 11, 2018, 01:13 PM IST
ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದೆ ಬೆಂಗಾಲ್ ಬಿಳಿ ಟೈಗರ್

ಸಾರಾಂಶ

ಕಾಡುಪ್ರಾಣಿಗಳ ಪ್ರವಾಸಿ ತಾಣವಾಗಿ ಖ್ಯಾತಿಗಳಿಸಿರುವ ಬೆಂಗಳೂರು ಹೊರವಲಯ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ನಲ್ಲಿ ದಿನದಿಂದ ದಿನಕ್ಕೆ ಕಾಡು ಪ್ರಾಣಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದೀಗ ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ  ಬೆಂಗಾಲ್ ಬಿಳಿ ಟೈಗರ್  ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು (ಸೆ.19): ಕಾಡುಪ್ರಾಣಿಗಳ ಪ್ರವಾಸಿ ತಾಣವಾಗಿ ಖ್ಯಾತಿಗಳಿಸಿರುವ ಬೆಂಗಳೂರು ಹೊರವಲಯ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ನಲ್ಲಿ ದಿನದಿಂದ ದಿನಕ್ಕೆ ಕಾಡು ಪ್ರಾಣಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದೀಗ ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ  ಬೆಂಗಾಲ್ ಬಿಳಿ ಟೈಗರ್  ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸಫಾರಿಯಲ್ಲಿರುವ ಮೂರು ಬೆಂಗಾಲ್ ಟೈಗರ್ಸ್ ದಾರಿ ತಪ್ಪಿ ಬಂದಿದ್ದ ಮೃದು ಸ್ವಭಾವದ ಬಿಳಿ ಟೈಗರ್  ಮೇಲೆ ಅಕ್ಷರಶಃ  ರೌಡಿಗಳಂತೆ  ಅಟ್ಯಾಕ್ ಮಾಡಿ ತೀವ್ರವಾಗಿ ಗಾಯಗೊಳಿಸಿವೆ, ಇನ್ನೂ ತೀವ್ರವಾಗಿ ಗಾಯಗೊಂಡಿರುವ ಬಿಳಿ ಹುಲಿ ಮೇಲೆ ಏಳೋದಕ್ಕೆ ಸಾಧ್ಯವಾಗುತ್ತಿಲ್ಲ, ಬಹುಶಃ ಸ್ಪೈನಲ್ ಕಾರ್ಡ್ ಬೆನ್ನು ಹುರಿಗೆ ಬಲವಾದ ಪೆಟ್ಟು ಬಿದ್ದಿರುವ ಬಗ್ಗೆ ಅನುಮಾನ ಮೂಡಿಸಿದೆ, ಬಹುತೇಕ ಎಲ್ಲೇಡೆ ಬಿಳಿ ಹುಲಿ ಮತ್ತು ಕೆಂಪು ಮತ್ತು ಕಂದು ಬಣ್ಣದ ಹುಲಿಗಳನ್ನು ಪ್ರತ್ಯೇಕವಾಗಿ ಇರಿಸಿ ನುರಿತ ಕೆಲಸಗಾರರನ್ನು ಕಾವಲಿಗಿರುಸುತ್ತಾರೆ, ಆದರೆ ಬನ್ನೇರುಘಟ್ಟ ಪಾರ್ಕ್ನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಕಾಬಿಟ್ಟಿಯಾಗಿ ವಾಚರ್ ಗಳನ್ನು ಇಟ್ಟು ಕೆಲಸ ಮಾಡಿಸುತ್ತಿದ್ದಾರೆ, ಭಾನುವಾರ ಸಫಾರಿಗೆ ಬಸ್ಸೊಂದರ ಹಿಂದೆ ಬಿಳಿ ಹುಲಿ ಬಂದಾಗ ಸುರಕ್ಷತೆಗಿರುವ ಮತ್ತೊಂದು ಗೇಟ್ ಬಂದ್ ಮಾಡಿ ಅದನ್ನು ವಾಪಸ್ಸು ಕಳಿಸಬಹುದಿತ್ತು, ಇದರ ಬಗ್ಗೆ ಯಾವುದೇ ನೈಪುಣ್ಯತೆ ಹೊಂದದ ವಾಚರ್ ಗಳನ್ನಿಟ್ಟು ಈ ಯಡವಟ್ಟು ಮಾಡಿದ್ದಾರೆ, ಬಿಳಿ ಹುಲಿ ಇನ್ನೊಂದು ಖೇಜ್ ದಾರಿ ತಪ್ಪಿ ಹೋದಾಗಲು ಹೆಚ್ಷಿನ ಸಿಬ್ಬಂದಿಯನ್ನು ಹಾಕಿ ಬಿಳಿ ಹುಲಿಯನ್ನು ರಕ್ಷಿಸುವ ಕೆಲಸಕ್ಕೆ ಅಧಿಕಾರಿಗಳ ಬೇಜವಾಬ್ದರಿಯನ್ನು ತೋರಿಸುತ್ತಿದೆ, ಇದೀಗ ತೀವ್ರವಾಗಿ ಗಾಯಗೊಂಡಿರುವ ಬಿಳಿ ಹುಲಿಗೆ ಚಿಕಿತ್ಸೆ ನೀಡಲಾಗುತಿದ್ದು ಎಷ್ಟರಮಟ್ಟಿಗೆ  ಸ್ಪಂದಿಸುತ್ತದೆಂದು ಕಾದು ನೋಡಬೇಕಿದೆ, ಇನ್ನೂ ಕಳೆದ ತಿಂಗಳಷ್ಟೇ ಮರವೊಂದನ್ನು ನೆಡಲು ಜಿಬ್ರಾ ಪಾರ್ಕ್ ನಲ್ಲಿ ಗುಂಡಿ ತೋಡಿ ಮುಚ್ಚದೇ ಆ ಗುಂಡಿಯಲ್ಲಿ ಹಿಮ್ಮುಖವಾಗಿ ಜಿಬ್ರಾ ಮೃತಪಟ್ಟ ಘಟನೆ ಮರೆಯುವ ಮುನ್ನವೇ ಮತ್ತೊಂದು ಪ್ರಾಣಿಯ ಪ್ರಾಣಕ್ಕೆ ಕುತ್ತು ತಂದ ಅಧಿಕಾರಿ ಡಿಎಪ್ ಓ ಕುಶಾಲಪ್ಪ ವಿರುದ್ದ ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆನೆಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ರೈಲು, 7 ಗಜ ಬಲಿ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ