ವರುಣನ ಅಬ್ಬರಕ್ಕೆ ಬಲಿಯಾದ ಜಗದೀಶ್ ಕುಟುಂಬಕ್ಕೆ ನೀಡಿದ ಚೆಕ್'ಬೌನ್ಸ್; ಹೊಸ ಚೆಕ್ ನೀಡುವುದಾಗಿ ಬಿಬಿಎಂಪಿ ಭರವಸೆ

Published : Sep 19, 2017, 07:13 PM ISTUpdated : Apr 11, 2018, 12:53 PM IST
ವರುಣನ ಅಬ್ಬರಕ್ಕೆ ಬಲಿಯಾದ ಜಗದೀಶ್ ಕುಟುಂಬಕ್ಕೆ ನೀಡಿದ ಚೆಕ್'ಬೌನ್ಸ್; ಹೊಸ ಚೆಕ್ ನೀಡುವುದಾಗಿ ಬಿಬಿಎಂಪಿ ಭರವಸೆ

ಸಾರಾಂಶ

ಇಡೀ ಕುಟಂಬಕ್ಕೆ ಆಧಾರವಾಗಿದ್ದ ಜಗದೀಶ್ ವರುಣನ ಅಬ್ಬರಕ್ಕೆ ಬಲಿಯಾಗಿ ದಿನಗಳೇ ಕಳೆದಿವೆ. ಇತ್ತ ಬಿಬಿಎಂಪಿಯೂ ಜಗದೀಶ್ ಕುಟುಂಬಕ್ಕೆ 5ಲಕ್ಷ ರೂಪಾಯಿ ಚೆಕ್ ನಿಡಿ ಸಮಾಧಾನ ಮಾಡಿತ್ತು. ಆದ್ರೆ ಚೆಕ್ ಬೌನ್ಸ್ ಆಗಿದ್ದು ದುಡ್ಡೂ ಇಲ್ಲ, ಗಂಡನೂ ಇಲ್ಲದೆ ರೂಪಾ ಬೇಸತ್ತಿದ್ದಾರೆ. ಅಲ್ಲದೆ ಪತಿಯ ಕಾರ್ಯ ಮಾಡಲೂ ದುಡ್ಡಿಲ್ಲದೆ, ಜಗದೀಶ್ ಪತ್ನಿ ರೂಪಾ ಕಣ್ಣೀರಲ್ಲಿ ಕೈ ತೊಳಿತಿದ್ಧಾರೆ. ಈ ಬಗ್ಗೆ ಸುವರ್ಣನ್ಯೂಸ್ ಸುದ್ದಿ ಮಾಡಿದ್ದು, ಮೇಯರ್ ಹೊಸ ಚೆಕ್ ಕೊಡುವುದಾಗಿ ಮೇಯರ್ ಹೇಳಿದ್ದಾರೆ. ಇದು ಸುವರ್ಣನ್ಯೂಸ್ ಇಂಪ್ಯಾಕ್ಟ್!

ಬೆಂಗಳೂರು (ಸೆ.19): ಇಡೀ ಕುಟಂಬಕ್ಕೆ ಆಧಾರವಾಗಿದ್ದ ಜಗದೀಶ್ ವರುಣನ ಅಬ್ಬರಕ್ಕೆ ಬಲಿಯಾಗಿ ದಿನಗಳೇ ಕಳೆದಿವೆ. ಇತ್ತ ಬಿಬಿಎಂಪಿಯೂ ಜಗದೀಶ್ ಕುಟುಂಬಕ್ಕೆ 5ಲಕ್ಷ ರೂಪಾಯಿ ಚೆಕ್ ನಿಡಿ ಸಮಾಧಾನ ಮಾಡಿತ್ತು. ಆದ್ರೆ ಚೆಕ್ ಬೌನ್ಸ್ ಆಗಿದ್ದು ದುಡ್ಡೂ ಇಲ್ಲ, ಗಂಡನೂ ಇಲ್ಲದೆ ರೂಪಾ ಬೇಸತ್ತಿದ್ದಾರೆ. ಅಲ್ಲದೆ ಪತಿಯ ಕಾರ್ಯ ಮಾಡಲೂ ದುಡ್ಡಿಲ್ಲದೆ, ಜಗದೀಶ್ ಪತ್ನಿ ರೂಪಾ ಕಣ್ಣೀರಲ್ಲಿ ಕೈ ತೊಳಿತಿದ್ಧಾರೆ. ಈ ಬಗ್ಗೆ ಸುವರ್ಣನ್ಯೂಸ್ ಸುದ್ದಿ ಮಾಡಿದ್ದು, ಮೇಯರ್ ಹೊಸ ಚೆಕ್ ಕೊಡುವುದಾಗಿ ಮೇಯರ್ ಹೇಳಿದ್ದಾರೆ. ಇದು ಸುವರ್ಣನ್ಯೂಸ್ ಇಂಪ್ಯಾಕ್ಟ್!

ಸೆಪ್ಟೆಂಬರ್ 8 ರಂದು ಸುರಿದ ಧಾರಾಕಾರ ಮಳೆಗೆ  ಜೆಸಿ ರಸ್ತೆಯಲ್ಲಿ ಮರವೊಂದು ಧರೆಗುರುಳಿ ಜಗದೀಶ್ ಸೇರಿದಂತೆ ಮೂವರು ಸಾವನ್ನಪ್ಪಿದ್ದರು. ಟೈಲರಿಂಗ್ ಮಾಡಿ ಕುಟುಂಬಕ್ಕೆ ಆಧಾರವಾಗಿದ್ದ ಜಗದೀಶ್ ಕುಟುಂಬಕ್ಕೆ  ಬಿಬಿಎಂಪಿಯಿಂದ ಮೇಯರ್ 5ಲಕ್ಷ ರೂಪಾಯಿ ಪರಿಹಾರವಾಗಿ ಚೆಕ್ ನೀಡಿದ್ರು. ಆದ್ರೆ ಚೆಕ್ ಬೌನ್ ಆಗಿದ್ದು ಎಸ್​ಬಿಐ ಬ್ಯಾಂಕ್​ನಿಂದ ವಾಪಾಸ್ಸಾಗಿದೆ. ಮೊದಲೇ  ಪತಿಯ ಕಾರ್ಯ ಮಾಡಲು ದುಡ್ಡಿಲ್ಲದೆ ಪರದಾಡಿದ ರೂಪಾ ಅಕ್ಕ ಪಕ್ಕದ ಮನೆಯವರಿಂದ ಸಾಲ ಪಡೆದುಕೊಂಡಿದ್ದಾರೆ. ಒಂದೆಡೆ ಪತಿಯನ್ನು ಕಳೆದುಕೊಂಡು ಇತ್ತ ಚೆಕ್ ಸಿಗದೆ ರೂಪಾ ಕಣ್ಣೀರ ಕಥೆಯನ್ನು ಸುವರ್ಣನ್ಯೂಸ್  ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಮೇಯರ್ ಪದ್ಮಾವತಿ ನಾಳೆಯೇ ನಮ್ಮ ಕಛೇರಿಯಲ್ಲಿ ಹೊಸ ಚೆಕ್ ನೀಡೋದಾಗಿ ಹೇಳಿದ್ದಾರೆ. ಇದು ಸುವರ್ಣನ್ಯೂಸ್ ಇಂಪ್ಯಾಕ್ಟ್!

ಇನ್ನು ಬಿಬಿಎಂಪಿಯಿಂದ 5 ಲಕ್ಷ ಪರಿಹಾರ ಘೋಷಣೆಯಾಗುತ್ತಿದ್ದಂತೆ ಇತ್ತ ಜಗದೀಶ್ ಸಾಲಗಾರರು ಮನೆ ಮುಂದೆ ಜಮಾಯಿಸಿದ್ದಾರೆ. ಆದರೆ ಚೆಕ್ ಬೌನ್ಸ್ ಆಗಿರೋದ್ರಿಂದ ರೂಪಾ ಕಂಗಾಲಾಗಿದ್ದು, ಕಣ್ಣೀರಿಡುತ್ತಿದ್ದಾರೆ. ಅಷ್ಟೆ ಅಲ್ಲ ಇಷ್ಟೂ ದಿನ ನಮ್ಮ ಕುಟುಂಬ ಹೇಗಿದೆ ಅಂತಾ ಇಣುಕಿಯೂ ನೋಡದ ಅತ್ತೆ ಮಾವ ಈಗ ಪರಿಹಾರ ಹಣಕ್ಕಾಗಿ ಮುಂದೆ ಬಂದಿದ್ದಾರೆ. ಇದ್ಯಾವ ನ್ಯಾಯ? ಅಂತಾ ಪ್ರಶ್ನಿಸಿದ್ದಾರೆ. ಎಲ್ಲಾ ಕಡೆಯಿಂದಲೂ ಕಿರುಕುಳ ಜಾಸ್ತಿಯಾಗ್ತಿದೆ, ನಾನು ಆತ್ಮಹತ್ಯೆ ಮಾಡಿಕೊಳ್ತೇನೆ ಅಂತಾ ಸುವರ್ಣನ್ಯೂಸ್​ಗೆ ಹೇಳಿದ್ದಾರೆ.

 

 

.

 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆನೆಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ರೈಲು, 7 ಗಜ ಬಲಿ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ