ಪಾಕ್ ಸೇನೆ ಬೆಂಬಲಿಸಿ ಪೋಸ್ಟ್ : ಬಳ್ಳಾರಿ ಯುವಕ ಅರೆಸ್ಟ್

By Web Desk  |  First Published Mar 2, 2019, 10:07 AM IST

ಪಾಕಿಸ್ತಾನ ಸೇನೆ ಪರವಾಗಿ ಪೋಸ್ಟ್ ಹಾಕಿದ ವ್ಯಕ್ತಿಯೋರ್ವನನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ.


ಹೂವಿನಹಡಗಲಿ: ಪಾಕಿಸ್ತಾನದ ಸೈನಿಕರನ್ನು ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ ಕಾರಣ ತಾಲೂಕಿನ ಹಿರೇಹಡಗಲಿ ಗ್ರಾಮದ ಯುವಕನನ್ನು  ಪೊಲೀಸರು ಬಂಧಿಸಿದ್ದಾರೆ.

ಕೆ.ರಮೇಶ್ (19) ಬಂಧಿತ. ನಾನು ಪಾಕ್ ಸೇನೆ ಜತೆಗಿರುವೆ ಎಂದು ರಮೇಶ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ. ಆದಕಾರಣ ದೇಶ ದ್ರೋಹದಡಿ ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ಬಂಧಿಸಿದ್ದಾರೆ.

Tap to resize

Latest Videos

ಈಗಾಗಲೇ ಉಗ್ರರ ದಾಳಿ ಬೆಂಬಲಿಸಿದ್ದ ಅನೇಕರನ್ನು ದೇಶದ ವಿವಿಧೆಡೆ ಬಂಧನಕ್ಕೆ ಒಳಪಡಿಸಲಾಗಿದೆ.

click me!