ಅತೃಪ್ತರ ಮನವೊಲಿಕೆಗೆ ಮುಂದಾಗಿರುವ ದೋಸ್ತಿಗೆ ಬಿಗ್ ಶಾಕ್..!| ಮತ್ತೊಬ್ಬ ಕಾಂಗ್ರೆಸ್ ಶಾಸಕ ನಾಳೆ ಸದನಕ್ಕೆ ಗೈರಾಗೋದು ಪಕ್ಕಾ| ಸದನದಲ್ಲಿ ದಿನದಿಂದ ದಿನಕ್ಕೆ ಕುಸಿಯುತ್ತಿದ್ದೆ ದೋಸ್ತಿ ಸಂಖ್ಯಾಬಲ
ಬೆಂಗಳೂರು[ಜು.21]: ರಾಜ್ಯ ರಾಜಕೀಯದಲ್ಲಿ ನಾಳೆ ಮಹತ್ವದ ದಿನವಾಗಿದ್ದು, ದೋಸ್ತಿ ನಾಯಕರು ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸುವ ಸಾಧ್ಯತೆಗಳಿವೆ. ಈಗಾಗಲೇ ಮುಂಬೈನಲ್ಲಿ ಬೀಡು ಬಿಟ್ಟಿರುವ ಅತೃಪ್ತ ಶಾಸಕರ ಮನವೊಲಿಸಲಾಗದೆ ಪೆಚ್ಚುಮೋರೆ ಹಾಕಿಕೊಂಡಿರುವ ಮೈತ್ರಿ ನಾಯಕರಿಗೆ ಸದ್ಯ ಮತ್ತೊಂದು ಶಾಕಿಂಗ್ ಸುದ್ದಿ ಬಂದೆರಗಿದೆ. ಹೌದು ನಾಳೆ ಸೋಮವರ ನಡೆಯಲಿರುವ ಸದನಕ್ಕೆ ಮತ್ತೊಬ್ಬ ಕಾಂಗ್ರೆಸ್ ಶಾಸಕ ಗೈರಾಗುವುದು ಖಚಿತವೆನ್ನಲಾಗಿದೆ.
ಈಗಾಗಲೇ ಹೃದಯಾಘಾತಕ್ಕೀಡಾಗಿರುವ ಬಳ್ಳಾರಿ ಗ್ರಾಮಾಂತರ ಕಾಂಗ್ರೆಸ್ ಶಾಸಕ ಬಿ. ನಾಗೇಂದ್ರ ನಗರದ ಆಸ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಿಎಂ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಾಗೂ ಜಮೀರ್ ಅಹ್ಮದ್ ಎರಡು ದಿನಗಳ ಹಿಂದಷ್ಟೇ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು ಹಾಗೂ ಸದನಕ್ಕೆ ಹಾಜರಾಗುವಂತೆ ಮನವಿ ಮಾಡಿಕೊಂಡಿದ್ದರು. ಹೀಗಿರುವಾಗ ನಿನ್ನೆ ಶನಿವಾರ ಅವರು ಮುಂಬೈಗೆ ತೆರಳಿದ್ದಾರೆಂಬ ವದಂತಿ ಹಬ್ಬಿತ್ತು.
ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆದರೀಗ ಈ ಎಲ್ಲಾ ವದಂತಿಗಳಿಗೂ ತೆರೆ ಬಿದ್ದಿದ್ದು, ಬಿ. ನಾಗೇಂದ್ರ ಸದನಕ್ಕೆ ಗೈರಾಗೋದು ಖಚಿತ ಎನ್ನಲಾಗಿದೆ. ಆದರೆ ಇವರು ಮುಂಬೈ ಸೇರಿಲ್ಲ ಎಂಬುವುದೂ ಉಲ್ಲೇಖನೀಯ. ಹೌದು ಹೃದಯಾಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿ. ನಾಗೇಂದ್ರಗೆ ನಾಳೆ, ಸೋಮವಾರ ಬೆಳಗ್ಗೆ 6 ಗಂಟೆಗೆ ಆಪರೇಷನ್ ನಡೆಯಲಿದೆ. ಇದೇ ಕಾತರಣಕ್ಕಾಗಿ ಅವರು ಸದನಕ್ಕೆ ಹಾಜರಾಗುವುದು ಅಸಾಧ್ಯವೆನ್ನಲಾಗಿದೆ.
ಇತ್ತ ಶಾಸಕ ಬಿ. ನಾಗೇಂದ್ರ ಕೂಡಾ ಸದನಕ್ಕೆ ಹಾಜರಾಗುವ ಕುರಿತಾಗಿ ಯಾವುದೇ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ಅದೇನಿದ್ದರೂ ನಾಳೆ ವಿಶ್ವಾಸಮತ ನಡೆಯುವ ಸಾಧ್ಯತೆಗಳಿದ್ದು, ದೋಸ್ತಿ ನಾಯಕರು ಈ ಅಗ್ನಿಪರೀಕ್ಷಚೆಯಲ್ಲಿ ಗೆಲ್ಲುತ್ತಾರಾ? ಅಥವಾ ಸರ್ಕಾರ ಪತನಗೊಳ್ಳುತ್ತಾ? ಕಾದು ನೊಡಬೇಕಷ್ಟೇ.