ಬಳ್ಳಾರಿ ವಿಭಜನೆಗೆ ಬಜೆಪಿಯಲ್ಲಿಯೇ ಅಪಸ್ಟರ| ವಿಜಯನಗರ ನೂತನ ಜಿಲ್ಲೆಯ ವಿಚಾರವಾಗಿ ಮೂಡದ ಒಮ್ಮತ| ಸರ್ಕಾರದಲ್ಲೇ ಭಿನ್ನಾಭಿಪ್ರಾಯ.
ಬೆಂಗಳೂರು, (ಸೆ.20): ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಕಾಂಗ್ರೆಸ್‌ನ ಪ್ರಭಾವಿ ರಾಜಕಾರಣಿಗಳ ಜಿದ್ದಾಜಿದ್ದಿಗೆ ಕಾರಣವಾಗಿ ದೆಹಲಿ ಹೈ ಕಮಾಂಡ್‌ವರೆಗೂ ಹೋಗಿತ್ತು. ಇದು ರಾಜ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು ಜಗತ್ ಜಾಹೀರು ಆಗಿತ್ತು. ಈ ಪಿಎಲ್‌ಡಿ ಬ್ಯಾಂಕ್ ಕಿಚ್ಚು ಮೈತ್ರಿ ಪತನಕ್ಕೂ ಒಂದು ರೀತಿ ಕಾರಣವಾಯ್ತು.
ಅದೇ ಮಾದರಿಯಲ್ಲಿ ಇದೀಗ ಬಳ್ಳಾರಿ ವಿಭಜನೆ ವಿಚಾರಕ್ಕೆ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಬಳ್ಳಾರಿಯನ್ನು ವಿಭಜಿಸಿ ವಿಜಯನಗರವನ್ನು ನೂತನ ಜಿಲ್ಲೆಯನ್ನಾಗಿ ಮಾಡುವ ವಿಚಾರದಲ್ಲಿ ಸರ್ಕಾರದಲ್ಲಿಯೇ ಭಿನ್ನಾಭಿಪ್ರಾಯ ಉಂಟಾಗಿದ್ದು, ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ.
ಬಳ್ಳಾರಿ ವಿಭಜನೆಗೆ BSY ಅಸ್ತು: ವಿಜಯನಗರ ಜಿಲ್ಲೆಗೆ ಸರ್ಕಾರದ ಮೊದಲ ಹೆಜ್ಜೆ
ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಅನರ್ಹ ಶಾಸಕರಾದ ಆನಂದ್ಸಿಂಗ್, ಕಾಂಗ್ರೆಸ್ ಮುಖಂಡರಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಕಂಪ್ಲಿ ಶಾಸಕ ಗಣೇಶ್ ನೇತೃತ್ವದ ನಿಯೋಗ ಇತ್ತೀಚೆಗೆ ಸಿಎಂ ಭೇಟಿ ಮಾಡಿ ವಿಜಯನಗರ ಜಿಲ್ಲೆ ಮಾಡುವಂತೆ ಮನವಿ ಮಾಡಿತ್ತು.
ಈ ಮನವಿಯನ್ನು ಪುರಸ್ಕರಿಸಿರುವ ಸಿಎಂ ಯಡಿಯೂರಪ್ಪ, ಈ ಬಗ್ಗೆ ಸರ್ಕಾರ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಜಯನಗರ ಜಿಲ್ಲೆ ವಿಷಯ ಪ್ರಸ್ತಾಪ ಮಾಡುವಂತೆ ಸೂಚನೆ ನೀಡಿದ್ದಾರೆ. ಇದ್ರಿಂದ ರೆಡ್ಡಿ ಬ್ರದರ್ಸ್ ಕಣ್ಣು ಕೆಂಪಾಗಿಸಿದ್ದು, ಬಳ್ಳಾರಿ ಜಿಲ್ಲೆ ಇಬ್ಭಾಗ ಮಾಡಲು ಬಿಡುವುದಿಲ್ಲ ಎಂದು ಶಾಸಕ ಸೋಮಶೇಖರ ರೆಡ್ಡಿ ಗುಡುಗಿದ್ದಾರೆ.
ಬೆಳಗಾವಿ ಬಿರುಗಾಳಿಗೆ ವಿಧಾನಸೌಧ ಗಡಗಡ ; ಎಲ್ಲವೂ ನಾಳೆ ನಿರ್ಧಾರ !
ಒಂದು ಕಡೆ ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಬೇಕೆನ್ನುವುದು ಕಾಂಗ್ರೆಸ್ ಅನರ್ಹ ಶಾಸಕ ಆನಂದ್ ಸಿಂಗ್, ಮತ್ತೊಂದು ಕಡೆ ಬಳ್ಳಾರಿ ವಿಭಜಿಸಲು ಬಿಡಲ್ಲ ಎಂದು ರೆಡ್ಡಿ ಬ್ರದರ್ಸ್. ಇದ್ರಿಂದ ಯಡಿಯೂರಪ್ಪಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕಾಂಗ್ರೆಸ್ ಬಿಟ್ಟು ಬಿಜೆಪಿ ಸರ್ಕಾರಕ್ಕೆ ಬೆಂಬಲ ಸೂಚಿಸಿರುವ ಆನಂದ್ ಸಿಂಗ್, ಇದೀಗ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದು, ಅವರಿಗೆ ಯಾವುದೇ ಸ್ಥಾನಮಾವಿಲ್ಲ. ಈ ಹಿನ್ನೆಲೆಯಲ್ಲಿ ಅವರ ಬೇಡಿಕೆಯನ್ನಾದರೂ ಈಡೇರಿಸಿ ಅವರನ್ನು ಸಮಾಧಾನಪಡಿಸಬೇಕೆನ್ನುವುದು ಬಿಎಸ್‌ವೈ ಪ್ಲಾನ್ ಆಗಿದೆ. ಆದ್ರೆ, ಇದಕ್ಕೆ ರೆಡ್ಡಿ ಬ್ರದರ್ಸ್ ರೊಚ್ಚಿಗೆದ್ದಿದ್ದು, ಯಾವುದೇ ಕಾರಣಕ್ಕೂ ಬಳ್ಳಾರಿ ಇಬ್ಭಾಗ ಮಾಡಲು ಬಿಡುವುದಿಲ್ಲವೆಂದು ತೊಡೆತಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿಯೇ ಭಿನ್ನಾಭಿಪ್ರಾಯ ಸ್ಫೋಟಗೊಂಡಿದ್ದು, ಬೆಳಗಾವಿ ಕಾಂಗ್ರೆಸ್‌ನಲ್ಲಿ ಶುರುವಾಗಿದ್ದ ಕಾದಾಟ, ಬಳ್ಳಾರಿ ಬಿಜೆಪಿಯಲ್ಲಿ ಶುರುವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಜಾರಕಿಜೊಳಿ ಬ್ರದರ್ಸ್ ನಡುವೆ ಪಿಲ್‌ಡಿ ಬ್ಯಾಂಕ್ ಎಲೆಕ್ಷನ್ ವಿಚಾರಣವಾಗಿ ಬೆಳಗಾವಿಯಲ್ಲಿ ಬಹಿರಂಗ ಜಂಗಿಕುಸ್ತಿಯಾಗಿದ್ದನ್ನು ಇಲ್ಲಿ ಸ್ಮರಿಸಬಹದು. ಇದೇ ತರಹನಾಗಿ ಬಳ್ಳಾರಿ ರೆಡ್ಡಿ ಬ್ರದರ್ಸ್ ಹಾಗೂ ಆನಂದ್ ಸಿಂಗ್ ನಡುವೆ ರಾಜಕೀಯ ಕಾದಾಟಕ್ಕೆ ವಿಜಯನಗರ ಜಿಲ್ಲೆ ಎನ್ನುವ ಅಖಾಡ ಹಣಿಯಾಗುವ ಮುನ್ಸೂಚನೆ ಕಾಣಿಸುತ್ತಿವೆ.
ಒಂದು ವೇಳೆ ಅನರ್ಹ ಶಾಸಕ ಆನಂದ್ ಸಿಂಗ್ ಒತ್ತಡದ ಮೇರೆಗೆ ಯಡಿಯೂರಪ್ಪ ಅವರು ಬಳ್ಳಾರಿ ಜಿಲ್ಲೆಯನ್ನು ವಿಭಜಿಸಲು ಮುಂದಾದರೇ ರೆಡ್ಡಿ ಬ್ರದರ್ಸ್ ಬಹಿರಂಗವಾಗಿ ಬಿಎಸ್‌ವೈ ವಿರುದ್ಧ ದಂಗೆ ಹೇಳಿದರೂ ಅಚ್ಚರಿಪಡಬೇಕಿಲ್ಲ.