
ಬೆಂಗಳೂರು (ಫೆ.18): ಅಂದು ನೊರೆಯಿಂದ ಬೆಂಗಳೂರಿನ ಮಾನ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಆಗಿತ್ತು. ಇಂದು ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಆವರಿಸಿಕೊಂಡಿದರೂ ಜನಪ್ರತಿನಿಧಿಗಳೂ ಮಾತ್ರ ಕ್ಯಾರೆ ಎಂದಿಲ್ಲ.
ಕೆರೆಗೆ ಬಿದ್ದ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ದಟ್ಟ ಹೊಗೆ ಆವರಿಸಿಕೊಂಡಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ನಿವಾಸಿಗಳು ಆತಂಕಗೊಂಡಿದ್ದಾರೆ. ವಾಹನ ಸವಾರರು ಆ ಮಾರ್ಗದಲ್ಲಿ ಸಂಚರಿಸಲು ಭಯ ಪಡ್ತಿದ್ದಾರೆ.
ಬೆಂಗಳೂರಿನ ಬೆಳ್ಳಂದೂರು ಕೆರೆ ಹೊತ್ತಿ ಉರಿಯುತ್ತಿದೆ, ಆದರೆ ಸಿದ್ದರಾಮಯ್ಯ ಸರ್ಕಾರಕ್ಕೆ ಫ್ಲೈಓವರ್ ನಿರ್ಮಾಣಕ್ಕೆ ಇರುವ ಧಾವಂತ ಕೆರೆಯನ್ನು ಬೆಂಕಿಯಿಂದ ಮುಕ್ತಿಗೊಳಿಸುವುದಕ್ಕೆ ಆಸಕ್ತಿಯಿಲ್ಲ. ನಗರಾಭಿವೃದ್ಧಿ ಸಚಿವರಿಗೆ ಇನ್ನೂ ಜ್ಞಾನೋದಯವೇ ಆಗಿಲ್ಲ.
ಸದನ ಸಮಿತಿಯ ಸದಸ್ಯ ಎನ್ ಎ ಹ್ಯಾರಿಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೈಗಾರಿಕಾ ತ್ಯಾಜ್ಯ ನೇರವಾಗಿ ಕೆರೆ ಸೇರುತ್ತಿರುವುದರಿಂದ ಈ ಸಮಸ್ಯೆ ಉಲ್ಬಣಗೊಂಡಿದೆ ಎಂದು ಹೇಳಿದ್ದಾರೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಳ್ಳಂದೂರು ಕೆರೆಯಲ್ಲಿ ವಿಷ ರಾಸಾಯನಿಕ ಅಪಾಯದ ಮಟ್ಟ ದಾಟಿರುವುದರಿಂದ ಅಂತರ್ಜಲ, ಬೋರ್ ವೆಲ್ ನೀರು ವಿಷವಾಗಲಿದ್ದು, ಕುಡಿಯುವ ನೀರು ಕೂಡ ವಿಷವಾಗಲಿದೆ. ನೊರೆ, ಬೆಂಕಿಯಿಂದ ಉಸಿರಾಡುವ ಆಮ್ಲಜನಕವೂ ವಿಷಕಾರಿಯಾಗಲಿದೆ. ಇನ್ನಾದರೂ ಜನಪ್ರತಿನಿಧಿಗಳು, ಜವಾಬ್ದಾರಿಯಿಂದ ನುಣುಚಿಕೊಳ್ಳುವ ಬದಲು ಬೆಳ್ಳಂದೂರು ಕೆರೆಯನ್ನು ಬೆಂಕಿಯಿಂದ ಮುಕ್ತಿಗೊಳಿಸಬೇಕಾಗಿದೆ.
ವರದಿ: ಪ್ರಿಯಾಂಕ ತಳವಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.