ಗರ್ಭ ಗುಡಿಯಲ್ಲಿ ರಿಲ್ವಾರ್‌'‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ನಾಯಕ!

Published : Jul 19, 2017, 08:11 AM ISTUpdated : Apr 11, 2018, 01:04 PM IST
ಗರ್ಭ ಗುಡಿಯಲ್ಲಿ ರಿಲ್ವಾರ್‌'‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ನಾಯಕ!

ಸಾರಾಂಶ

ಬಿಜೆಪಿ ಮುಖಂಡ ಶಿವನಗೊಡ ಪಾಟೀಲ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ತುರಕರಶೀಗಿಹಳ್ಳಿ ಗ್ರಾಮದ ನಿವಾಸಿ. ಎಂದಿನಂತೆ ಗ್ರಾಮದ ದೇವಸ್ಥಾನಕ್ಕೆ ಹೋದ ಆತ ಅಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗ್ರಾಮದ ಗಿರಿಮಲ್ಲೇಶ್ವರ  ದೇವಾಲಯದ ಗರ್ಭ ಗುಡಿಯಲ್ಲಿ ತನ್ನದೇ ಲೈಸನ್ಸ್‌ ರಿವಾಲ್ವರ್‌'ನಿಂದ ಹಣೆಗೆ ಗುಂಡು ಹಾರಿಸಿಕೊಂಡಿದ್ದಾನೆ. ಗುಂಡಿನ ಶಬ್ಧ ಕೇಳಿಸುತ್ತಿದಂತೆ ದೇವಾಲಯದ ಪೂಜಾರಿಗಳು, ಗ್ರಾಮದ ಜನರು ಸ್ಥಳಕ್ಕೆ ಬಂದು ನೋಡಿದಾಗ ದೇವಾಲಯದ ಗರ್ಭಗುಡಿಯಲ್ಲಿ  ಶಿವನಗೌಡನ ಉಸಿರು ನಿಂತುಹೋಗಿತ್ತು.

ಬೆಂಗಳೂರು(ಜು.19): ಬಿಜೆಪಿ ಮುಖಂಡ ಶಿವನಗೊಡ ಪಾಟೀಲ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ತುರಕರಶೀಗಿಹಳ್ಳಿ ಗ್ರಾಮದ ನಿವಾಸಿ. ಎಂದಿನಂತೆ ಗ್ರಾಮದ ದೇವಸ್ಥಾನಕ್ಕೆ ಹೋದ ಆತ ಅಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗ್ರಾಮದ ಗಿರಿಮಲ್ಲೇಶ್ವರ  ದೇವಾಲಯದ ಗರ್ಭ ಗುಡಿಯಲ್ಲಿ ತನ್ನದೇ ಲೈಸನ್ಸ್‌ ರಿವಾಲ್ವರ್‌'ನಿಂದ ಹಣೆಗೆ ಗುಂಡು ಹಾರಿಸಿಕೊಂಡಿದ್ದಾನೆ. ಗುಂಡಿನ ಶಬ್ಧ ಕೇಳಿಸುತ್ತಿದಂತೆ ದೇವಾಲಯದ ಪೂಜಾರಿಗಳು, ಗ್ರಾಮದ ಜನರು ಸ್ಥಳಕ್ಕೆ ಬಂದು ನೋಡಿದಾಗ ದೇವಾಲಯದ ಗರ್ಭಗುಡಿಯಲ್ಲಿ  ಶಿವನಗೌಡನ ಉಸಿರು ನಿಂತುಹೋಗಿತ್ತು.

ಕಿತ್ತೂರು ತಾಲೂಕಿನಲ್ಲಿ ಶಿವನಗೌಡ ಪಾಟೀಲ ಬಿಜೆಪಿಯ ಸಕ್ರಿಯ ಮುಖಂಡ. ಬಿಜೆಪಿ ಬ್ಲಾಕ್‌ನ ಉಪಾಧ್ಯಕ್ಷರಾಗಿ ಪಕ್ಷ ಸಂಘಟಿಸಿದ್ದರು. ನಾಲ್ವರು ಹೆಣ್ಣು ಮಕ್ಕಳು ಹಾಗೂ ಪತ್ನಿ ಇದ್ದಾರೆ. ನಾಲ್ಕು ಎಕರೆ ಜಮೀನು ಹೊಂದಿದ್ದ ಈತ, ಮೈ ತುಂಬ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ ಸಾಲಬಾಧೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಎಸ್ಪಿ ರವಿಕಾಂತೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  

ಒಟ್ಟ್ನಲ್ಲಿ ಸಾಲದಬಾಧೆಗೆ ಹೆದರಿ ಬಿಜೆಪಿ ಮುಖಂಡನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು ದುರಂತವೇ ಸರಿ. ನಾಲ್ಕು ಜನರಿಗೆ ಧ್ವನಿಯಾಗಬೇಕಿದ್ದ ಕೇಸರಿ ಮುಖಂಡನ ಆತ್ಮಹತ್ಯೆ ನಿರ್ಧಾರ ಆತನ ಕುಟುಂಬವನ್ನ ಅನಾಥಗೊಳಿಸಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ರಾಂಡ್ ಫಿನಾಲೆ ಬಳಿಕ ಕಿಚ್ಚ ಸುದೀಪ್ ಮೇಲೆ ಮುಗಿಬಿದ್ದ ಕೆಲವರು.. ಸೋಷಿಯಲ್ ಮೀಡಿಯಾ ಟೀಕೆ ಎಷ್ಟುಗೆ ಏನರ್ಥ?
ಮದುವೆ ಆಮಿಷವೊಡ್ಡಿ ಟೆಕ್ಕಿಗೆ 1.53 ಕೋಟಿ ರೂ. ವಂಚನೆ: ಹೆಂಡತಿಯನ್ನೇ ಅಕ್ಕ ಎಂದು ಪರಿಚಯಿಸಿದ್ದ ಕಿರಾತಕ ಸೆರೆ!