ಕಮೆಂಟ್ ಮಾಡಿದವರಿಗೆ ಇರ್ಫಾನ್ ಪಠಾಣ್ ತಕ್ಕ ಉತ್ತರ ?

By Suvarna Web DeskFirst Published Jul 19, 2017, 12:09 AM IST
Highlights

ಈ ಭಾವಚಿತ್ರಕ್ಕೆ ಮೆಚ್ಚುಗೆಯ ಸುರಿಮಳೆ ಜೊತೆಗೆ ಮುಸ್ಲಿಂ ಮಹಿಳೆಯೊಬ್ಬರು ಹಿಜಾಬ್ ಧರಿಸದೆ ಮುಖ ತೋರಿಸಿದ್ದು ಹಾಗೂ ಉಗುರಿಗೆ ನೈಲ್ ಪಾಲಿಶ್ ಹಚ್ಚಿಕೊಂಡಿದ್ದು ತಪ್ಪು. ಇದು ಇಸ್ಲಾಂ'ನ ವಿರೋಧಿಯಾಗಿದ್ದು ಫೋಟೊವನ್ನು ಫೇಸ್'ಬುಕ್'ನಿಂದ ತೆಗೆಯಿರಿ ಎಂಬ ಕಮೆಂಟ್'ಗಳು ಬಂದಿದ್ದವು.

ನವದೆಹಲಿ(ಜು.18): ತಮ್ಮ ಪತ್ನಿ ಜೊತೆಯಿದ್ದ  ಫೋಟೊವನ್ನು ಫೇಸ್'ಬುಕ್'ನಲ್ಲಿ ಅಪ್'ಲೋಡ್ ಮಾಡಿದ್ದಕ್ಕೆ ಧರ್ಮ ನಿಂದಕರಿಂದ ಕಾಮೆಂಟ್'ಗಳಿಗೆ ಭಾರತದ ಕ್ರಿಕೆಟಿಗ ಇರ್ಫಾನ್ ಪಠಾಣ್ ತಕ್ಕ ಉತ್ತರ ನೀಡಿದ್ದಾರೆ.

ಇರ್ಫಾನ್ ಪಠಾಣ್ ತಮ್ಮ ಪತ್ನಿ ಸಫಾ ಬೇಗ್, ತಮ್ಮ ಅರ್ಧ ಮುಖ ಮುಚ್ಚಿಕೊಂಡು ತುಂಟ ನಗು ಬೀರಿದ್ದ ಸೆಲ್ಫಿಯೊಂದನ್ನು ಫೇಸ್‍ಬುಕ್‍  ತಮ್ಮ ಅಧಿಕೃತ ಖಾತೆಯಲ್ಲಿ ಅಪ್‍ಲೋಡ್ ಮಾಡಿ “This girl is trouble ?? #love #wifey”  ಎಂಬ ಶೀರ್ಷಿಕೆ ನೀಡಿದ್ದರು . ಈ ಭಾವಚಿತ್ರಕ್ಕೆ ಮೆಚ್ಚುಗೆಯ ಸುರಿಮಳೆ ಜೊತೆಗೆ ಮುಸ್ಲಿಂ ಮಹಿಳೆಯೊಬ್ಬರು ಹಿಜಾಬ್ ಧರಿಸದೆ ಮುಖ ತೋರಿಸಿದ್ದು ಹಾಗೂ ಉಗುರಿಗೆ ನೈಲ್ ಪಾಲಿಶ್ ಹಚ್ಚಿಕೊಂಡಿದ್ದು ತಪ್ಪು. ಇದು ಇಸ್ಲಾಂ'ನ ವಿರೋಧಿಯಾಗಿದ್ದು ಫೋಟೊವನ್ನು ಫೇಸ್'ಬುಕ್'ನಿಂದ ತೆಗೆಯಿರಿ ಎಂಬ ಕಮೆಂಟ್'ಗಳು ಬಂದಿದ್ದವು.

ಇದಕ್ಕೆ ತಕ್ಕ ಉತ್ತರ ನೀಡಿದ ಇರ್ಫಾನ್ ಪಠಾಣ್ ತಮ್ಮ ಟ್ವಿಟರ್ ಖಾತೆಯಲ್ಲಿಯೂ ಅದೇ ಫೋಟೊವನ್ನು ಅಪ್‍ಲೋಡ್ ಮಾಡಿ 'ಕುಚ್ ತೋ ಲೋಗ್ ಕಹೇಂಗೆ ಲೋಗೋಂ ಕಾ ಕಾಮ್ ಹೈ ಕೆಹೆನಾ' (ಸುಮ್ಮನಿದ್ದರೂ ಜನರು ಏನಾದರೂ ಹೇಳ್ತಾರೆ, ಹೇಳುವುದೇ ಅವರ ಕೆಲಸ) ಎಂದು ಸಿನಿಮಾದ ಹಾಡಿನ ಸಾಲೊಂದನ್ನು ಉಲ್ಲೇಖಿಸಿ ಟೀಕಾಕಾರರನ್ನು ಕಮೆಂಟ್ ಮೂಲಕವೇ ಬಾಯಿ ಮುಚ್ಚಿಸಿದ್ದಾರೆ.

click me!