ಬೀಗರಾಗ್ತಾರಂತೆ ರಾಮುಲು-ರಮೇಶ್, ರಾಜ್ಯಕ್ಕೆ ಹೊಸ ಡಿಸಿಎಂ?

By Web DeskFirst Published Sep 7, 2018, 2:11 PM IST
Highlights

ಮೇಲು ನೋಟಕ್ಕೆ ಬೆಳಗಾವಿಯಲ್ಲಿನ ಕಾಂಗ್ರೆಸ್ ಬಣ ರಾಜಕಾರಣ ಶಮನವಾದಂತೆ ಕಂಡು ಬಂದಿದ್ದರೂ ಈ ಬೆಳವಣಿಗೆ ಆಪರೇಷನ್ ಕಮಲಕ್ಕೆ ವೇದಿಕೆ ಮಾಡಿ ಕೊಡಬಹುದೆ ಎಂಬ ಅನುಮಾನ ಏಳಲು ಕಾರಣವಾಗಿದೆ.

ಬೆಳಗಾವಿ(ಸೆ.7)  ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಬಣಕ್ಕೆ ಜಯವಾಗಿದೆ. ಆದರೆ ಈ ಬ್ಯಾಂಕ್ ರಾಜಕಾರಣದ ವಿಚಾರ ಇಲ್ಲಿಗೆ ಕೊನೆಯಾಗುವಂತೆ ಕಾಣುತ್ತಿಲ್ಲ. 

ಹಿರಿಯ ನಾಯಕರು ಸಂಧಾನ ನಡೆಸಿದ್ದರೂ ಸಚಿವ ರಮೇಶ್ ಜಾರಕಿಹೊಳಿ ಸಮಾಧಾನಗೊಂಡಿಲ್ಲ. ಮೈತ್ರಿ ಸರ್ಕಾರಕ್ಕೆ ಆತಂಕ ತಂದಿಡುವ ವಿಚಾರ ಈ ಬಣದಿಂದ ಸದ್ಯವೇ ಹೊರಬಿದ್ದರೂ ಆಶ್ಚರ್ಯವಿಲ್ಲ. ಬೆಳಗಾವಿ ರಾಜಕಾರಣದ ಕಣಕ್ಕೆ ಬಿಜೆಪಿ ನಾಯಕ ಶ್ರೀರಾಮಲು ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.

 ಆಪರೇಷನ್ ಕಮಲ ನಡೆಯುವ ಸಾಧ್ಯತೆ ಕಂಡುಬಂದಿದ್ದು  ವಾಲ್ಮೀಕಿ ಸಮುದಾಯದವರನ್ನ ಡಿಸಿಎಂ ಮಾಡ್ತೇವೆ ಎಂದು ಶಾಸಕರನ್ನ ಸೆಳೆಯಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ. ಇದು ಕೌಟಂಬಿಕ ಸಂಬಂಧ ಬೆಸೆಯುವುದರ ಮೂಲಕವೂ ಸಾಧ್ಯವಾಗುವ ಲಕ್ಷಣ ಕಾಣಿಸಿಕೊಂಡಿದೆ.

ಕಾಂಗ್ರೆಸ್ ಹೈ ಕಮಾಂಡ್‌ಗೆ ಉಗ್ರ ತೀರ್ಮಾನದ ಎಚ್ಚರಿಕೆ ನೀಡಿದ ಜಾರಕಿಹೊಳಿ

ಸದ್ಯದಲ್ಲಿಯೇ  ಶ್ರೀರಾಮುಲು, ರಮೇಶ್ ಜಾರಕಿಹೊಳಿ ಬೀಗರಾಗ್ತಿದ್ದಾರಾ ಎನ್ನುವ ಪ್ರಶ್ನೆಯೂ ಮೂಡಿದೆ.  ರಮೇಶ್ ಜಾರಕಿಹೊಳಿ ಪುತ್ರನಿಗೆ ಶ್ರೀರಾಮುಲು ಪುತ್ರಿ ತಂದುಕೊಳ್ಳಲು ಚರ್ಚೆ ನಡೆದಿದೆ.  ಇದಾದ ಮೇಲೆ ಶ್ರೀರಾಮುಲುಗೆ ಅಂತಿಮವಾಗಿ  ಡಿಸಿಎಂ ಮಾಡುವ ಬಗ್ಗೆಯೂ ಜಾರಕಿಹೊಳಿ ಬ್ರದರ್ಸ್ ಚರ್ಚಿಸಿದ್ದಾರಾ ಎನ್ನುವ  ಪ್ರಶ್ನೆಯೂ ಎದುರಾಗಿದೆ.

ಈ ಬಗ್ಗೆ ದೆಹಲಿಗೆ ಹೋಗಿ ಬಿಜೆಪಿ ನಾಯಕರೊಂದಿಗೆ ರಮೇಶ್ ಜಾರಕಿಹೊಳಿ ಚರ್ಚಿಸಿ ಬಂದಿದ್ದಾರೆ. 12 ಶಾಸಕರನ್ನ ಬಿಜೆಪಿಗೆ ಕರೆದೊಯ್ದು ಮೈತ್ರಿ ಸರ್ಕಾರಕ್ಕೆ ರಮೇಶ್ ಜಾರಕಿಹೊಳಿ ಕಂಟಕವಾಗಿ ಪರಿಣಮಿಸಲಿದ್ದಾರೆ ಎನ್ನುವ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

click me!