
ಬೆಳಗಾವಿ: ಮೊರಾರ್ಜಿ ದೇಸಾಯಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಾಗಲೇ ಬೆಳಗಾವಿ ಗಡಿ ವಿಷಯ ಮುಗಿದುಹೋಗಿದ್ದು, ಎಂಇಎಸ್ ವಿನಾಕಾರಣ ತಗಾದೆ ತೆಗೆಯುವುದು ಸರಿಯಲ್ಲ ಎಂದು ಜೆಡಿಎಸ್ ವರಿಷ್ಠರಾಗಿರುವ ಎಚ್.ಡಿ. ದೇವೇಗೌಡ ಗುಡುಗಿದ್ದಾರೆ.
ಜೆಡಿಎಸ್ ಆಯೋಜಿಸಿದ್ದ ಉತ್ತರ ಕರ್ನಾಟಕ ಸ್ವಾಭಿಮಾನಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಬೆಳಗಾವಿ ಸೂರ್ಯಚಂದ್ರರಿರುವ ತನಕವೂ ಕರ್ನಾಟಕದ ಅವಿಭಾಜ್ಯ ಅಂಗ ಎಂದರು.
ಬೆಳಗಾವಿಗೆ ಪ್ರಧಾನಿ ಸೇರಿದಂತೆ ಬಿಜೆಪಿ ನಾಯಕರು ಆಗಮಿಸಿ ದೊಡ್ಡ ದೊಡ್ಡ ಸಮಾವೇಶಗಳನ್ನು ಆಯೋಜಿಸಿ ಭಾಷಣ ಮಾಡಿ ಹೋಗುತ್ತಾರೆ ಅಷ್ಟೆ. ಅವರೆಲ್ಲ ಮಹದಾಯಿ ಬಗ್ಗೆ ಮಾತನಾಡುವುದಿಲ್ಲ. ಕೇಂದ್ರ ಸರ್ಕಾರ ಮನಸು ಮಾಡಿದರೆ ಮಹದಾಯಿಯನ್ನು ಇತ್ಯರ್ಥಪಡಿಸಬಹುದು. ಆದರೆ ಅದು ಮನಸು ಮಾಡುತ್ತಿಲ್ಲ ಎಂದರು.
ಕೆಜೆಪಿಯಲ್ಲಿದ್ದಾಗ ಬಿಎಸ್‌ವೈ ಮಾತಾಡಿದ ವಿಡಿಯೋ ಪ್ರದರ್ಶನ: ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಬೀಳಲು ಬಿಜೆಪಿಯವರೇ ಕಾರಣ ಎಂದು ಯಡಿಯೂರಪ್ಪ ಹೇಳಿದ್ದ ವೀಡಿಯೋ ಕ್ಲಿಪ್ಪಿಂಗ್ ಅನ್ನು ಕುಮಾರಸ್ವಾಮಿ ಪ್ರದರ್ಶಿಸಿದರು.
ಜೆಡಿಎಸ್- ಬಿಜೆಪಿ ಸಮಿಶ್ರ ಸರ್ಕಾರದ ಅವಧಿಯ ನಂತರ ಬಿಜೆಪಿ ಅಧಿಕಾರ ನೀಡಿಲ್ಲ ಎಂದು ರಾಜ್ಯದ ಜನರು ತಪ್ಪು ತಿಳಿದುಕೊಂಡು ನಮಗೆ ಶಿಕ್ಷೆ ನೀಡಿದ್ದೀರಿ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.