ದುಬಾರಿ ಬೈಕ್ ಕದಿಯುತ್ತಿದ್ದ ಕಳ್ಳನ ಬಂಧನ

By Suvarna Web DeskFirst Published Nov 15, 2017, 12:57 PM IST
Highlights

ಮೂಲತಃ ತಮಿಳುನಾಡಿನ ಅರ್ಜುನ್ ಬಸ್ ಮೂಲಕ ಬೆಂಗಳೂರಿಗೆ ಬರುತ್ತಿದ್ದ. ನಗರದಲ್ಲಿ ಮಧ್ಯರಾತ್ರಿ ಸಂಚರಿಸಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌'ಗಳ ಹ್ಯಾಂಡಲ್ ಮುರಿದು ಕಳವು ಮಾಡುತ್ತಿದ್ದ. ಕದ್ದ ಬೈಕ್‌'ಗಳನ್ನು ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ಬೆಂಗಳೂರು(ನ.15): ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಅಂತಾರಾಜ್ಯ ಕಳ್ಳನನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಸೇಲಂ ಜಿಲ್ಲೆಯ ಅರ್ಜುನನ್(27) ಬಂಧಿತ ಆರೋಪಿ. ಆರೋಪಿಯಿಂದ ₹ 15 ಲಕ್ಷ ಮೌಲ್ಯದ 14 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಮೂಲತಃ ತಮಿಳುನಾಡಿನ ಅರ್ಜುನ್ ಬಸ್ ಮೂಲಕ ಬೆಂಗಳೂರಿಗೆ ಬರುತ್ತಿದ್ದ. ನಗರದಲ್ಲಿ ಮಧ್ಯರಾತ್ರಿ ಸಂಚರಿಸಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌'ಗಳ ಹ್ಯಾಂಡಲ್ ಮುರಿದು ಕಳವು ಮಾಡುತ್ತಿದ್ದ. ಕದ್ದ ಬೈಕ್‌'ಗಳನ್ನು ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು. ಆಡುಗೋಡಿ, ವಿವೇಕ ನಗರ, ಪರಪ್ಪನ ಅಗ್ರಹಾರ ಕಳವು ಮಾಡುತ್ತಿದ್ದ. ಈತನ ಬಂಧನದಿಂದ 14 ಪ್ರಕರಣಗಳು ಬೆಳಕಿಗೆ ಬಂದಿವೆ.

Latest Videos

ಆರೋಪಿ ದುಬಾರಿ ಬೆಲೆಯ ಮೂರು ಎನ್‌'ಫೀಲ್ಡ್ ಬೈಕ್'ಗಳನ್ನು ಕೂಡ ಕಳುವು ಮಾಡಿದ್ದ. ಕುಖ್ಯಾತ ಕಳ್ಳನಾಗಿರುವ ಅರ್ಜುನನ್ ವಿರುದ್ಧ ತಮಿಳುನಾಡಿನಲ್ಲಿ ಕಳವು, ಡಕಾಯತಿ, ಮನೆಗಳವು ಪ್ರಕರಣಗಳಿವೆ. ಮತ್ತೆ-ಮತ್ತೆ ಕಳವು ಕೃತ್ಯ ಮುಂದುವರಿಸುತ್ತಿದ್ದರಿಂದ ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಆರೋಪಿ ನಗರಕ್ಕೆ ಬಂದು ಕಳವು ಕೃತ್ಯ ಎಸಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

click me!