ಲೋಕಸಭಾ ಚುನಾವಣೆಗೂ ಮುನ್ನ 2.80 ಲಕ್ಷ ಕೋಟಿ ಕೃಷಿ ಸಾಲ ಮನ್ನಾ?

Published : Jul 07, 2018, 11:26 AM IST
ಲೋಕಸಭಾ ಚುನಾವಣೆಗೂ ಮುನ್ನ  2.80 ಲಕ್ಷ ಕೋಟಿ ಕೃಷಿ ಸಾಲ ಮನ್ನಾ?

ಸಾರಾಂಶ

2019ರ ಲೋಕಸಭೆ ಚುನಾವಣೆ ಘೋಷಣೆಗೊಳ್ಳುವ ವೇಳೆಗೆ ಭಾರತದಲ್ಲಿನ ಕೃಷಿ ಸಾಲ ಮನ್ನಾ ಪ್ರಮಾಣವು 2.80 ಲಕ್ಷ ಕೋಟಿ ರು. ತಲುಪಲಿದೆ ಎಂದು ಅಮೆರಿಕದ ಮೆರಿಲ್‌ ಲಿಂಚ್‌ ಬ್ಯಾಂಕ್‌ ವರದಿ ತಿಳಿಸಿದೆ.  

ನವದೆಹಲಿ :  2019ರ ಲೋಕಸಭೆ ಚುನಾವಣೆ ಘೋಷಣೆಗೊಳ್ಳುವ ವೇಳೆಗೆ ಭಾರತದಲ್ಲಿನ ಕೃಷಿ ಸಾಲ ಮನ್ನಾ ಪ್ರಮಾಣವು 2.80 ಲಕ್ಷ ಕೋಟಿ ರು. ತಲುಪಲಿದೆ ಎಂದು ಅಮೆರಿಕದ ಮೆರಿಲ್‌ ಲಿಂಚ್‌ ಬ್ಯಾಂಕ್‌ ವರದಿ ತಿಳಿಸಿದೆ.

ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಗುರುವಾರ, ರಾಜ್ಯದ ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿ ರೈತರು ಮಾಡಿದ್ದ 2 ಲಕ್ಷ ರು.ವರೆಗಿನ 34 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿದ್ದರು.

ಇದರ ಬೆನ್ನಲ್ಲೇ ವರದಿ ಬಿಡುಗಡೆ ಮಾಡಿರುವ ಪ್ರಮುಖ ಜಾಗತಿಕ ಹಣಕಾಸು ಸಂಸ್ಥೆಯಾಗಿರುವ ಮೆರಿಲ್‌ ಲಿಂಚ್‌, ‘2019ರ ಲೋಕಸಭೆ ಚುನಾವಣೆಗೆ ಮುನ್ನ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಸೇರಿಕೊಂಡು ಸುಮಾರು 2.80 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡುವ ನಿರೀಕ್ಷೆಯಿದೆ. ಈಗ ಕರ್ನಾಟಕವು 34 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿರುವ ಹಿನ್ನೆಲೆಯಲ್ಲಿ ಸಾಲ ಮನ್ನಾ ವಿವಿಧ ರಾಜ್ಯಗಳಿಗೂ ವಿಸ್ತರಣೆಯಾಗುವ ಸಾಧ್ಯತೆ ಇದೆ’ ಎಂದು ಹೇಳಿದೆ.

ಸಲ ಮನ್ನಾ ಜಿಡಿಪಿಯ ಒಟ್ಟು ಶೇ.1.5ರಷ್ಟುಇರಲಿದೆ. ಆದರೆ ಇದು ಕೃಷಿ ಉತ್ಪಾದನೆ ಮೇಲೆ ಸಕಾರಾತ್ಮಕ ಫಲಿತಾಂಶ ಬೀರುವ ಸಾಧ್ಯತೆ ಇದ್ದು, ಕೃಷಿ ಆದಾಯ 2018-20ರ ಮಧ್ಯೆ ಶೇ.3ರಷ್ಟುಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಮೆರಿಲ್‌ ಲಿಂಚ್‌ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

14 ವರ್ಷಗಳಲ್ಲಿ ಭಾರತೀಯ ಪೌರತ್ವ ತ್ಯಜಿಸಿದವರ ಸಂಖ್ಯೆ ಎಷ್ಟು? ಈ ವಲಸೆಗೆ ಏನು ಕಾರಣ?
ಚೈತ್ರಾ ಕುಂದಾಪುರಗೆ ಮತ್ತೊಮ್ಮೆ ಕಾನೂನು ಸಂಕಷ್ಟ; ಅಪ್ಪನ ವಿಚಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬರ್ತಾರಾ?