‘ಶಬರಿಮಲೆ ತೀರ್ಪಿನ ಕಾರಣಕ್ಕೆ ಮಸೀದಿ ಪ್ರವೇಶವನ್ನು ಕೈಗೆತ್ತಿಕೊಳ್ಳಬಹುದು’

By Web DeskFirst Published Apr 16, 2019, 11:02 PM IST
Highlights

ಮತ್ತೆ ಸುಪ್ರೀಂ ಕೋರ್ಟ್ ನಲ್ಲಿ ಮಹಿಳೆಯರ ಪ್ರವೇಶ ವಿಚಾರ ಚರ್ಚೆಗೆ ಬಂದಿದೆ. ಶಬರಿಮಲೆ ತೀರ್ಪಿನ ಕಾರಣಕ್ಕೆ ಮಸೀದಿಗೆ ಮಹಿಳೆಯರು ಪ್ರವೇಶ ವಿಚಾರ ವಿವಾರಣೆ ಕೈಗೆ ಎತ್ತಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನವದೆಹಲಿ[ಏ. 16] ಶಬರಿಮಲೆ ತೀರ್ಪಿನ ಕಾರಣಕ್ಕಾಗಿ ಮಸೀದಿಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನೂ ತಾನು ಕೈಗೆತ್ತಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮುಸ್ಲಿಂ ಮಹಿಳೆಯರು ಮಸೀದಿ ಪ್ರವೇಶಿಸುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ತೆಗೆದುಕೊಂಡಿತ್ತು.  ಶಬರಿಮಲೆ ದೇವಲಾಯಕ್ಕೆ ಮಹಿಳೆಯರ ಪ್ರವೇಶಕ್ಕೆ ಇದ್ದ ನಿಷೇಧವನ್ನು ಕಳೆದ ಸೆಪ್ಟೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ತೆರವು ಮಾಡಿತ್ತು.

ಅಯ್ಯಪ್ಪ ದೇಗುಲ ಪ್ರವೇಶಿಸಿದ ಮಹಿಳೆಗೆ ಅತ್ತೆಯಿಂದ ಗೂಸಾ!: ಆಸ್ಪತ್ರೆಗೆ ದಾಖಲು

ಮುಸ್ಲಿಂ ಮಹಿಳೆಯರಿಗೆ  ನಮಾಜ್ ಮಾಡುವುದಕ್ಕೆ ಅವಕಾಶ ನೀಡದಿರುವುದು ಮೂಲಭೂತ ಹಕ್ಕಿಗೆ ಚ್ಯುತಿ ಉಂಟುಮಾಡಿದಂತೆ ಆಗಿದೆ. ಮುಸ್ಲಿಂ ಮಹಿಳೆಯರಿಗೆ ನ್ಯಾಯ  ದೊರೆಯಬೇಕು ಎಂದು ದಂಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಸಮಯದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

click me!