ಚಕ್ಕರ್ ಹಾಕಿದರೆ ಕೆಲಸದಿಂದ ವಜಾ

By Web DeskFirst Published Oct 13, 2018, 6:23 PM IST
Highlights

ಯೋಗಿ ಆದಿತ್ಯನಾಥ್ ಅಅವರು ಗೋರಖ್'ಪುರದಲ್ಲಿ ಇಂದು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ 'ಶಿಕ್ಷಕರು ಶಾಲೆಗೆ ನಿಯಮಿತವಾಗಿ ಹಾಜರಾಗಬೇಕು. ಚಕ್ಕರ್ ಹಾಕಿದರೆ ಕೆಲಸದಿಂದ ವಜಾಗೊಳಿಸಬೇಕಾಗುತ್ತದೆ'

ಗೋರಖ್'ಪುರ[ಅ.13]: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಪ್ರಮಾಣಿಕ ರಾಜ್ಯದ ಶಿಕ್ಷಕರಿಗೆ ಖಡಕ್ ಆದೇಶ ನೀಡಿದ್ದಾರೆ.

ನಿಯಮಿತವಾಗಿ ಶಾಲೆಗೆ ಹಾಜರಾಗಿ ಮಕ್ಕಳಿಗೆ ಉತ್ತಮ ಪಾಠವನ್ನು ಹೇಳಿಕೊಡಿ. ಇಲ್ಲದಿದ್ದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿರುವ ಅವರು ರಾಜ್ಯದಲ್ಲಿರುವ 3 ಸಾವಿರ ಪ್ರಾಥಮಿಕ ಶಾಲೆಗಳನ್ನು ಸುಸ್ಥಿತಿಗೆ ತರುವ ಸಲುವಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದಾಗಿ ಎಂದು ತಿಳಿಸಿದ್ದಾರೆ.

ಗೋರಖ್'ಪುರದಲ್ಲಿ ಇಂದು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಯೋಗಿ ಆದಿತ್ಯನಾಥ್,  'ಶಿಕ್ಷಕರು ಶಾಲೆಗೆ ನಿಯಮಿತವಾಗಿ ಹಾಜರಾಗಬೇಕು. ಚಕ್ಕರ್ ಹಾಕಿದರೆ ಕೆಲಸದಿಂದ ವಜಾಗೊಳಿಸಬೇಕಾಗುತ್ತದೆ' ಎಂದು ಎಚ್ಚರಿಸಿದರು. ಸರಿಯಾಗಿ ಬೋಧನೆ ಮಾಡದಿರುವುದು, ಪರೀಕ್ಷೆಯಲ್ಲಿ ನಕಲು ಶಿಕ್ಷಣ ಇಲಾಖೆಯಲ್ಲಿರುವ ಮುಂತಾದ ಅವ್ಯವಸ್ಥೆಗಳನ್ನು ಹೋಗಲಾಡಿಸುವ ಸಲುವಾಗಿ ಈ ಕ್ರಮ ಜಾರಿಗೊಳಿಸಲಾಗುತ್ತಿದೆ ಎನ್ನಲಾಗಿದೆ.

 

click me!