ಈ ಕಡೆ ಪ್ರವಾಸ ಮಾಡುವಾಗ ಎಚ್ಚರ, ಜೀಕಾ ಬಂದಿದೆ ಜೋಕೆ!

By Web DeskFirst Published Oct 13, 2018, 5:27 PM IST
Highlights

ಜೀಕಾ ಪ್ರಕರಣದ ಮತ್ತೆ ಸದ್ದು ಮಾಡಿದೆ. ಜೈಪುರದಲ್ಲಿ ಜೀಕಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು ಆತಂಕ ಮೂಡಿಸಿದೆ. ಸರಕಾರ ಮತ್ತು ಆಡಳಿತ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದರೂ ಜೀಕಾ ಸೋಂಕು ಕಾಣಿಸಿಕೊಂಡಿದೆ.

ಜೈಪುರ(ಅ.13) ಜೈಪುರದ ರಜಪೂತ ಹಾಸ್ಟೇಲ್ ನಲ್ಲಿ ವಾಸಿಸುವವರಿಗೆ ಮೊದಲಿಗೆ ಜೀಕಾ ಸೋಂಕು ಕಾಣಿಸಿಕೊಂಡಿದೆ. ಇದಾದ ಮೇಲೆ ಸಿಂಧಿ ಕ್ಯಾಂಪ್ ನಲ್ಲೂ ಪತ್ತೆಯಾಗಿದೆ.

11 ಜನ ಗರ್ಭಿಣಿಯರಲ್ಲೂ ಜೀಕಾ ಸೋಂಕು ಪತ್ತೆಯಾಗಿದೆ. ಮೊದಲಿಗೆ ಕಾಣಿಸಿಕೊಂಡ 85 ವರ್ಷದ ಮಹಿಳೆಗೆ ಸಂಬಂಧಿಸಿದ ಸಕಲ ಮಾಹಿತಿಯನ್ನು ವೈದ್ಯರು ಪತ್ತೆಹಚ್ಚಿದ್ದಾರೆ. ಆದರೆ ಮಹಿಳೆ ಯಾವ ಊರಿಗೂ ಹೋಗಿ ಬಂದ ದಾಖಲೆ ಸಿಕ್ಕಿಲ್ಲ.

ಜೀಕಾ ವೈರಸ್ ಸೋಂಕಿತ ಪ್ರವಾಸಿಗರು ಸೋಂಕು ಹರಡಲು ಕಾರಣವಾಗಿರಬಹುದು ಎಂದು ಹೇಳಲಾಗಿದ್ದು ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಸೊಳ್ಳೆ ನಿಯಂತ್ರಣಕ್ಕೂ ಕ್ರಮ ತೆಗೆದುಕೊಳ್ಳಲಾಗಿದೆ. ಇಲ್ಲಿವರೆಗೆ ಭಾರತ ಸೇರಿದಂತೆ ಪ್ರಪಂಚದ 82 ರಾಷ್ಟ್ರಗಳಲ್ಲಿ ಜೀಕಾ ಕಂಡುಬಂದಿದೆ.

click me!