ಪಾಕ್ ಜೊತೆ ಯುದ್ಧಕ್ಕೆ ಸನ್ನದ್ಧರಾಗಿರಿ: ಕಮಾಂಡರ್'ಗಳಿಗೆ ಸೂಚನೆ ಕೊಟ್ಟ ವಾಯುಪಡೆ ಮುಖ್ಯಸ್ಥ

By Suvarna Web DeskFirst Published May 1, 2017, 4:22 PM IST
Highlights

ಸಂಪೂರ್ಣ ಸಮನ್ವಯಗೊಳಿಸುವ ಶಸ್ತ್ರಾಸ್ತ್ರಗಳು, ಕ್ಷಿಪಣಿಗಳು ಮತ್ತು ಎಚ್ಚರಿಕೆ ನೀಡುವ ರಾಡಾರ್ ವ್ಯವಸ್ಥೆಗಳೊಂದಿಗೆ ವಿಮಾನಗಳು ಯುದ್ಧಕ್ಕೆ ಸಿದ್ಧವಾಗಬೇಕು ಎಂದು ಕಳೆದ ವಾರ ನಡೆದ ಐಎಎಫ್ ಕಮಾಂಡರ್'ಗಳೊಂದಿಗೆ ನಡೆದ ಸಮ್ಮೇಳನ ಸಭೆಯಲ್ಲಿ ಈ ಸೂಚನೆ ನೀಡಿದ್ದಾರೆ' ಎಂದು ಅಧಿಕೃತ ಮೂಲಗಳು ತಿಳಿಸಿವೆ ಎಂದು ಡೆಕ್ಕನ್ ಕ್ರಾನಿಕಲ್ ವರದಿ ಮಾಡಿದೆ.

ನವದೆಹಲಿ(ಮೇ.01): ಪಾಕ್ ಜೊತೆ ಯುದ್ಧಕ್ಕೆ ಸನ್ನದ್ಧರಾಗಿರುವಂತೆ ಭಾರತೀಯ ವಾಯುಪಡೆ ಮುಖ್ಯಸ್ಥರಾದ ಬಿ.ಎಸ್.ಧನೋವಾ ಕಮಾಂಡರ್'ಗಳಿಗೆ ಸೂಚನೆ ನೀಡಿದ್ದಾರೆ.

ಕಮಾಂಡರ್'ಗಳು ಯುದ್ಧಕ್ಕೆ ಬೇಕಾದ ಎಲ್ಲ ಅಗತ್ಯತೆಗಳು ಹಾಗೂ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿರುವ ಧನೋವಾ ಅವರು, ಯುದ್ಧ ಆರಂಭವಾದರೆ ಪಾಕ್' ಅಣಿಯಲು 10 ದಿನ ಬೇಕಾಗಬಹುದು.ಒಂದು ವೇಳೆ ಚೀನಾ ಪಾಕಿಸ್ತಾನಕ್ಕೆ ಬೆಂಬಲ ನೀಡಿದರೆ 15 ದಿನ ಬೇಕಾಗಬಹುದು ಎಂದು ತಿಳಿಸಿದ್ದಾರೆ.

click me!