ಬಿಜೆಪಿ ‘ಬುರೇ ದಿನ್’ ಎದುರಿಸಲು ಸನ್ನದ್ಧವಾಗಿರಲಿ: ಮಾಯಾವತಿ ಗುಡುಗು

Published : Jan 15, 2017, 02:55 PM ISTUpdated : Apr 11, 2018, 12:41 PM IST
ಬಿಜೆಪಿ ‘ಬುರೇ ದಿನ್’ ಎದುರಿಸಲು ಸನ್ನದ್ಧವಾಗಿರಲಿ: ಮಾಯಾವತಿ ಗುಡುಗು

ಸಾರಾಂಶ

ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮವು ದೇಶದ ಶೇ.90ರಷ್ಟು ಜನರನ್ನು ಕಂಗೆಡಿಸಿದೆ. ಅದರ ಪ್ರತಿಕೂಲ ಪರಿಣಾಮಗಳನ್ನು ಬಿಜೆಪಿ ಎದುರಿಸಲಿದೆ ಎಂದು ಲಕ್ನೋವಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾಯಾವತಿ ಹೇಳಿದ್ದಾರೆ.

ನವದೆಹಲಿ (ಜ.15): ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಬಹುಜನ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ, ಬಿಜೆಪಿಯು ‘ಬುರೆ ದಿನ್’ (ಕೆಟ್ಟ ದಿನ)ಗಳನ್ನು ಎದುರಿಸಲು ತಯಾರಾಗುವಂತೆ ಎಚ್ಚರಿಸಿದ್ದಾರೆ.

ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮವು ದೇಶದ ಶೇ.90ರಷ್ಟು ಜನರನ್ನು ಕಂಗೆಡಿಸಿದೆ. ಅದರ ಪ್ರತಿಕೂಲ ಪರಿಣಾಮಗಳನ್ನು ಬಿಜೆಪಿ ಎದುರಿಸಲಿದೆ ಎಂದು ಲಕ್ನೋವಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾಯಾವತಿ ಹೇಳಿದ್ದಾರೆ.

ನೋಟು ಅಮಾನ್ಯ ಕ್ರಮ ಘೋಷಿಸಿ 50ಕ್ಕಿಂತ ಹೆಚ್ಚು ದಿವಸಗಳು ಕಳೆದಿವೆ. ಆದರೆ ವಾಪಸು ಬಂದ ಕಪ್ಪು-ಹಣದ ಪ್ರಮಾಣವೆಷ್ಟು ಎಂದು ಪ್ರಧಾನಿ ಮೋದಿ ಈವರೆಗೆ ಬಹಿರಂಗ ಪಡಿಸಿಲ್ಲವೆಂದು  ಅವರು ಟೀಕಿಸದ್ದಾರೆ.

ಭರವಸೆಗಳ ‘ಅಚ್ಛೇ ದಿನ್’ಗಳು ಮುಗಿಯಿತು, ಬಿಜೆಪಿ ಈಗ ‘ಬುರೆ ದಿನ್ಗಳನ್ನು ಎದುರಿಸಲು ತಯಾರಿರಬೇಕು ಎಂದು ಮಾಯಾವತಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Karnataka News Live 17 September 2026: ಅ.17ಕ್ಕೆ ಕಾವೇರಿ ತೀರ್ಥೋದ್ಭವ: ಅಂದು ರಾತ್ರಿ 7.50ಕ್ಕೆ ಮುಹೂರ್ತ
UPI Payment: ಯುಪಿಐ ವಹಿವಾಟಿನ ಮೇಲಿನ ಶುಲ್ಕ: ಕೇಂದ್ರದ ವಿರುದ್ಧ ಹೋರಾಟಕ್ಕೆ ಕರೆ ನೀಡಿದ ಸಿಎಂ!