ಬೆನಾಮಿ ಆಸ್ತಿ ಬಗ್ಗೆ ತೆರಿಗೆ ಇಲಾಖೆಗೆ ಮಾಹಿತಿ ನೀಡಿ, 5 ಕೋಟಿ ರೂ. ಗೆಲ್ಲಿ

Published : Jun 01, 2018, 05:31 PM IST
ಬೆನಾಮಿ ಆಸ್ತಿ ಬಗ್ಗೆ ತೆರಿಗೆ ಇಲಾಖೆಗೆ ಮಾಹಿತಿ ನೀಡಿ, 5 ಕೋಟಿ ರೂ. ಗೆಲ್ಲಿ

ಸಾರಾಂಶ

ಯಾರಾದ್ರೂ ಬೇನಾಮಿ ಆಸ್ತಿ ಮಾಡಿರೋ ಬಗ್ಗೆ ನಿಮ್ಮ ಹತ್ತಿರ ಇನ್‌ಫಾರ್ಮೇಷನ್ ಇದೆಯಾ? ಇದ್ದರೆ ತೆರಿಗೆ ಇಲಾಖೆಗೆ ತಿಳಿಸಿ, ಬರೋಬ್ಬರಿ 1 ಕೋಟಿ ರೂ. ಗಳಿಸಿ. ಅಷ್ಟೇ ಅಲ್ಲ ವಿದೇಶದಲ್ಲಿಟ್ಟಿರುವ ಕಪ್ಪು ಹಣದ ಬಗ್ಗೆ ಮಾಹಿತಿ ನೀಡಿದರೆ, ಇಲಾಖೆ 5 ಕೋಟಿ ಬಹುಮಾನ ನೀಡುತ್ತೆ.

ಹೊಸದಿಲ್ಲಿ: ಯಾರಾದ್ರೂ ಬೇನಾಮಿ ಆಸ್ತಿ ಮಾಡಿರೋ ಬಗ್ಗೆ ನಿಮ್ಮ ಹತ್ತಿರ ಇನ್‌ಫಾರ್ಮೇಷನ್ ಇದೆಯಾ? ಇದ್ದರೆ ತೆರಿಗೆ ಇಲಾಖೆಗೆ ನಿರ್ದಿಷ್ಟ ಮಾದರಿಯಲ್ಲಿ ತಿಳಿಸಿ, ಬರೋಬ್ಬರಿ 1 ಕೋಟಿ ರೂ. ಗಳಿಸಿ. ಅಷ್ಟೇ ಅಲ್ಲ ವಿದೇಶದಲ್ಲಿಟ್ಟಿರುವ ಕಪ್ಪು ಹಣದ ಬಗ್ಗೆ ಮಾಹಿತಿ ನೀಡಿದರೆ, ಇಲಾಖೆ 5 ಕೋಟಿ ಬಹುಮಾನ ನೀಡುತ್ತೆ.

ಕ್ರಮ ಕೈಗೊಳ್ಳಬಹುದಾದಂಥ ಮಾಹಿತಿಯನ್ನು ಐಟಿ ಇಲಾಖೆಯೊಂದಿಗೆ ಹಂಚಿಕೊಂಡವರಿಗೆ 50 ಲಕ್ಷ ರೂ. ಬಹುಮಾನ ನೀಡುವ ತೆರಿಗೆ ಇಲಾಖೆ ಮಾಹಿತಿಗಾರರಿಗೆ ಬಹುಮಾನ ಯೋಜನೆಗೆ ತಿದ್ದುಪಡಿ ತಂದಿದ್ದು, ಬಹುಮಾನ ಮೊತ್ತವನ್ನು ಕೋಟಿಗೆ ಹಾಗೂ 5 ಕೋಟಿ ರೂ.ವರೆಗೂ ಹೆಚ್ಚಿಸಲಾಗಿದೆ.

ಬೇನಾಮಿ ವ್ಯವಹಾರ (ತಡೆ) ತಿದ್ದುಪಡಿ ಕಾಯ್ದೆ, 2016ರ ಅಡಿಯಲ್ಲಿ ವಿಚಾರಣೆಗ ಒಳಪಡಿಸಬಹುದಾದ ಆಸ್ತಿಯ ಬೇನಾಮಿ ವ್ಯವಹಾರದ ಬಗ್ಗೆ ವಿದೇಶಿ ಪ್ರಜೆ ಸೇರಿ ಯಾವುದೇ ವ್ಯಕ್ತಿ ಜಂಟಿ ಅಥವಾ ಹೆಚ್ಚುವರಿ ಆದಾಯ ತೆರಿಗೆ ಆಯುಕ್ತರೊಂದಿಗೆ ಮಾಹಿತಿ ಹಂಚಿಕೊಳ್ಳಬಹುದು, ಎಂದು ನೇರ ತೆರಿಗೆ ಕೇಂದ್ರ ಮಂಡಳಿ ಘೋಷಿಸಿದೆ. ಬೇನಾಮಿ ಆಸ್ತಿ ಅಥವಾ ಕದ್ದು ಮುಚ್ಚಿ ವ್ಯವಹಾರ ಮಾಡುವವರ ವಿರುದ್ಧ ಸೂಕ್ತ ಮಾಹಿತಿ ನೀಡುವವರನ್ನು ಉತ್ತೇಜಿಸಲು ಇಲಾಖೆ ಇಂಥ ಕ್ರಮಕ್ಕೆ ಮುಂದಾಗಿದೆ.

ಬೇನಾಮಿ ತಡೆ ಘಟಕ್ಕೆ ಈ ಕಾಯ್ದೆಯಡಿ ವ್ಯಕ್ತಿಯೊಬ್ಬ ನಿಗಧಿತ ಮಾದರಿಯಲ್ಲಿ ಕಪ್ಪು ಹಣ ಹಾಗೂ ಬೇನಾಮಿ ಆಸ್ತಿ ಹಾಗೂ ಬಂಡವಾಳ ಹೂಡಿಕೆ ಬಗ್ಗೆ ಮಾಹಿತಿ ನೀಡಬೇಕು. ವ್ಯಕ್ತಿ ನೀಡಿರುವ ಮಾಹಿತಿಯಿಂದ ಆ ನಿರ್ದಿಷ್ಟ ವ್ಯಕ್ತಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಇರುವ ಸಾಧ್ಯ ಸಾಧ್ಯತೆಗಳನ್ನು ಪರಿಶೀಲಿಸಿ, ಮಾಹಿತಿ ನೀಡಿದವರಿಗೆ ಒಂದು ಕೋಟಿ ರೂ.ವರೆಗೂ ಬಹುಮಾನ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ಮಾಹಿತಿ ನೀಡಿದವರ ವಿವರವನ್ನು ಇಲಾಖೆ ಬಹಿರಂಗ ಪಡಿಸದೇ, ಗೌಪ್ಯವಾಗಿಡಲಿದೆ.

ಅಲ್ಲದೇ ವಿದೇಶದಲ್ಲಿಟ್ಟಿರುವ ಕಪ್ಪು ಹಣದ ಬಗ್ಗೆ ಮಾಹಿತಿ ನೀಡಿದರೆ 5 ಕೋಟಿವರೆಗೂ ಬಹುಮಾನ ಪಡೆಯಬಹುದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ