
ಬೆಂಗಳೂರು (ಜೂ. 01): ರಾಜ್ಯದಲ್ಲಿ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದು 10 ದಿನ ಕಳೆದರೂ ಕಗ್ಗಂಟಾಗಿ ಉಳಿದಿದ್ದ ಸಚಿವ ಸಂಪುಟ ರಚನೆಯು ಕೊನೆಗೂ ಕ್ಲೈಮ್ಯಾಕ್ಸ್ ಹಂತಕ್ಕೆ ಮುಟ್ಟಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಯಾವ್ಯಾವ ಖಾತೆಗಳನ್ನು ಇಟ್ಟುಕೊಳ್ಳಲಿವೆ ಎಂಬುವುದನ್ನು ಉಭಯಪಕ್ಷಗಳ ನಾಯಕರು ಇಂದು ಪ್ರಕಟಿಸಿದ್ದಾರೆ.
ಖಾಸಗಿ ಹೊಟೇಲ್’ನಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರು ನಡೆಸಿದ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಭಾಗಿಯಾಗಿ ಸಚಿವ ಸಂಪುಟ ರಚನೆ ಬಗ್ಗೆ ಮಾಹಿತಿ ನೀಡಿದರು.
ನೂತನ ಮಂತ್ರಿಮಂಡಲವು ಮುಂದಿನ ಬುಧವಾರ [ಜೂ.6] ಕ್ಕೆ ಮಧ್ಯಾಹ್ನ 2 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದೆ.
ಮೈತ್ರಿ ಸರ್ಕಾರದ ಸಚಿವ ಸಂಪುಟ ಸ್ವರೂಪ ಹೀಗಿರಲಿದೆ
| ಜೆಡಿಎಸ್ | ಕಾಂಗ್ರೆಸ್ | ||
| 1 | ಮಾಹಿತಿ, ಜಿಎಡಿ, ಗುಪ್ತಚರ, ಯೋಜನೆ ಮತ್ತು ಅಂಕಿಅಂಶ | 1 | ಗೃಹ ಇಲಾಖೆ |
| 2 | ಹಣಕಾಸು ಮತ್ತು ಅಬಕಾರಿ | 2 | ನೀರಾವರಿ |
| 3 | ಲೋಕೋಪಯೋಗಿ | 3 | ಬೆಂಗಳೂರು ನಗರಾಭಿವೃದ್ದಿ |
| 4 | ಇಂಧನ | 4 | ಬೃಹತ್ ಕೈಗಾರಿಕೆ |
| 5 | ಸಹಕಾರ | 5 | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
| 6 | ಪ್ರವಾಸೋದ್ಯಮ | 6 | ಕಂದಾಯ ಮತ್ತು ಮುಜುರಾಯಿ |
| 7 | ವೈದ್ಯಕೀಯ ಶಿಕ್ಷಣ | 7 | ನಗರಾಭಿವೃದ್ದಿ |
| 8 | ಪಶುಸಂಗೋಪನೆ ಮತ್ತು ಮೀನುಗಾರಿಕೆ | 8 | ಕೃಷಿ |
| 9 | ಸಣ್ಣಕೈಗಾರಿಕೆ | 9 | ವಸತಿ |
| 10 | ತೋಟಗಾರಿಕೆ ಮತ್ತು ರೇಷ್ಮೆ ಕೃಷಿ | 10 | ಸಮಾಜ ಕಲ್ಯಾಣ |
| 11 | ಸಾರಿಗೆ | 11 | ಅರಣ್ಯ ಮತ್ತು ಪರಿಸರ |
| 12 | ಸಣ್ಣ ನೀರಾವರಿ | 12 | ಕಾರ್ಮಿಕ ಇಲಾಖೆ |
| 13 | ಗಣಿ ಮತ್ತು ಭೂ ವಿಜ್ಞಾನ ಇಲಾಖೆ | ||
| 14 | ಮಹಿಳಾ ಮತ್ತು ಮಕ್ಕಳ ಕಲ್ಯಾಣ | ||
| 15 | ಆಹಾರ ನಾಗರಿಕ ಸರಬರಾಜು | ||
| 16 | ಹಜ್, ವಕ್ಫ್, ಮತ್ತು ಅಲ್ಪಸಂಖ್ಯಾತ | ||
| 17 | ಕಾನೂನು ಮತ್ತು ಸಂಸದೀಯ ಖಾತೆ | ||
| 18 | ವಿಜ್ಞಾನ ಮತ್ತು ತಂತ್ರಜ್ಞಾನ | ||
| 19 | ಯುವಜನ, ಕ್ರೀಡೆ ಮತ್ತು ಕನ್ನಡ ಸಂಸ್ಕೃತಿ | ||
| 20 | ಬಂದರು ಮತ್ತು ಒಳನಾಡು ಸಾರಿಗೆ | ||
| 21 | ವೈದ್ಯಕೀಯ ಶಿಕ್ಷಣ | ||
| 22 | ಗ್ರಾಮೀಣಾಭಿವೃದ್ಧಿ |
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.