ಬಿಬಿಎಂಪಿ ಅಧಿಕಾರಿಗಳಿಗೆ ಬಾಡಿಗೆ ಕಾರು ಬೇಡ್ವಂತೆ!

By Suvarna Web DeskFirst Published Dec 13, 2017, 8:28 AM IST
Highlights

ಬಿಬಿಎಂಪಿ ಅಧಿಕಾರಿಗಳಿಗೆ ಇನ್ಮುಂದೆ ಬಾಡಿಗೆ ಕಾರು ಬೇಡವಂತೆ. ಬದಲಾಗಿ ಅವರಿಗೆ ಕಾರಿನ ಬದಲು ಹಣವೇ ಬೇಕಂತೆ. ಇದಕ್ಕಾಗಿ ಸೂಕ್ತ ನಿರ್ಣಯವನ್ನೂ ಮಾಡಿ ಆದೇಶ ಹೊರಡಿಸಲು ಬಿಬಿಎಂಪಿಯಲ್ಲಿ ಸಿದ್ಧತೆ ನಡೆದಿದೆ.

ಬೆಂಗಳೂರು (ಡಿ.13): ಬಿಬಿಎಂಪಿ ಅಧಿಕಾರಿಗಳಿಗೆ ಇನ್ಮುಂದೆ ಬಾಡಿಗೆ ಕಾರು ಬೇಡವಂತೆ. ಬದಲಾಗಿ ಅವರಿಗೆ ಕಾರಿನ ಬದಲು ಹಣವೇ ಬೇಕಂತೆ. ಇದಕ್ಕಾಗಿ ಸೂಕ್ತ ನಿರ್ಣಯವನ್ನೂ ಮಾಡಿ ಆದೇಶ ಹೊರಡಿಸಲು ಬಿಬಿಎಂಪಿಯಲ್ಲಿ ಸಿದ್ಧತೆ ನಡೆದಿದೆ.

ಬಿಬಿಎಂಪಿಯಲ್ಲಿ ಅಧಿಕಾರಿಗಳಿಗಾಗಿಯೇ ಸ್ವಂತ ಮಾಲೀಕತ್ವದ 140 ಕಾರುಗಳಿದ್ದು, 380 ಕಾರುಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಇದೀಗ ಈ ಬಾಡಿಗೆ ಕಾರುಗಳ ಕರಾರು ಅವಧಿ ಮುಗಿದು 4 ತಿಂಗಳು ಕಳೆದಿವೆ. ಹೀಗಾಗಿ ಮುಂದಿನ ಅವಧಿಗೆ ಕಾರುಗಳನ್ನು ಬಾಡಿಗೆ ಪಡೆಯಲು ಬಿಬಿಎಂಪಿ ಈಗಾಗಲೇ  ಟೆಂಡರ್ ಕರೆಯಬೇಕಿತ್ತು. ಆದರೆ ಬಿಬಿಎಂಪಿ ಅಧಿಕಾರಿಗಳು ಈಗ 190 ಕಾರುಗಳನ್ನು ಮಾತ್ರ ಬಾಡಿಗೆ ಪಡೆಯಲು ಟೆಂಡರ್ ಕರೆದಿದ್ದಾರೆ. ಉಳಿದ 160 ಕಾರುಗಳನ್ನು ಬಾಡಿಗೆ ಪಡೆಯುವ ಬದಲು ಅದಕ್ಕೆ ತಗಲುವ ವೆಚ್ಚವನ್ನು ಅಧಿಕಾರಿಗಳಿಗೆ ನೀಡಲು ನಿರ್ಧರಿಸಲಾಗಿದೆ. ಅಂದರೆ  ಒಬ್ಬ ಅಧಿಕಾರಿಗೆ ಕಾರಿನ ಬದಲು ತಿಂಗಳಿಗೆ  15 ರಿಂದ 20 ಸಾವಿರ ನೀಡಲು ತೀರ್ಮಾನಿಸಲಾಗಿದೆ. ಆದರೆ ಕೆಎಂಸಿ ಕಾಯ್ದೆಯಲ್ಲಿ ಕಾರು ಸೌಲಭ್ಯದ ಬದಲು ಹಣ ನೀಡುವುದಕ್ಕೆ ಯಾವುದೇ ಅವಕಾಶವಿಲ್ಲ. ಅಷ್ಟೇ ಏಕೆ ಈ ವಿಚಾರವನ್ನು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪಿಸಿ ಒಪ್ಪಿಗೆ ಸಹ ಪಡೆದಿಲ್ಲ. ಸರ್ಕಾರದ ಅನುಮತಿಯನ್ನೂ ಪಡೆದಿಲ್ಲ

click me!