ಪರೇಶ್ ಮೆಸ್ತಾ ಹತ್ಯೆ: ಶೋಭಾ ಕರಂದ್ಲಾಜೆ ಹೊಸ ಬಾಂಬ್!

Published : Dec 13, 2017, 08:11 AM ISTUpdated : Apr 11, 2018, 12:49 PM IST
ಪರೇಶ್ ಮೆಸ್ತಾ ಹತ್ಯೆ: ಶೋಭಾ ಕರಂದ್ಲಾಜೆ ಹೊಸ ಬಾಂಬ್!

ಸಾರಾಂಶ

ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಆಜಾದ್ ಅಣ್ಣಿಗೇರಿ ಎಂಬಾತನಿಗೆ ‘ಭಯೋತ್ಪಾದನೆ ಸಂಘಟನೆಯಾದ ಐಸಿಸ್ ನಂಟಿದೆ' ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.  

ಬೆಂಗಳೂರು (ಡಿ.13):  ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಆಜಾದ್ ಅಣ್ಣಿಗೇರಿ ಎಂಬಾತನಿಗೆ ‘ಭಯೋತ್ಪಾದನೆ ಸಂಘಟನೆಯಾದ ಐಸಿಸ್ ನಂಟಿದೆ' ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.  

ಕೊಲೆ ಪ್ರಕರಣದಲ್ಲಿ ಉದ್ಯಮಿ ಆಜಾದ್ ಅಣ್ಣಿಗೇರಿ ಎಂಬಾತ ಭಾಗಿಯಾಗಿರುವುದು ಸಾಬೀತಾಗಿದೆ. ಈತನಿಗೆ ‘ಭಯೋತ್ಪಾದನೆ ಸಂಘಟನೆಯಾದ ಐಸಿಸ್‌ನೊಂದಿಗೆ ನಂಟಿದ್ದು, ಸದಸ್ಯರನ್ನು ನೇಮಕ ಮಾಡುವ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ. ತಕ್ಷಣ ಆತನ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಆಜಾದ್ ಅಣ್ಣಿಗೇರಿ ಹೊನ್ನಾವರದಲ್ಲಿ ಹೋಟೆಲ್‌'ವೊಂದನ್ನು ನಡೆಸುತ್ತಿದ್ದಾನೆ. ಆತನ ಹೋಟೆಲ್‌ನಿಂದ ಕಾದಿರುವ ಎಣ್ಣೆಯನ್ನು ತಂದು ಪರೇಶ್ ಮುಖಕ್ಕೆ ಸುರಿಯಲಾಗಿದೆ ಎಂದು ಆರೋಪಿಸಿದ್ದಾರೆ. ಸರ್ಕಾರ ಮತ್ತು ಪೊಲೀಸ್ ಇಲಾಖೆಯು ಪರೇಶ್ ಮೇಸ್ತ ಕೊಲೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ. ಒಂದು ವೇಳೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ತಿರುಚಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆಸಿದರೆ ಇಡೀ ಕರಾವಳಿ ಹೊತ್ತಿ ಉರಿಯಲಿದೆ ಎಂದು ಎಚ್ಚರಿಕೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಒಂದು ವೈರಸ್ ಎಂಟ್ರಿ, 14 ಕೋಟಿ ರೂ ಕಳೆದುಕೊಂಡು ರ‍್ಯಾಪಿಡೋ ಚಾಲಕನಾದ ಉದ್ಯಮಿ ಕಣ್ಣೀರ ಕತೆ
ಒಂದೇ ವರ್ಷದಲ್ಲಿ 1 ಲಕ್ಷ ಮೌಲ್ಯದ ಕಾಂಡೋಮ್‌‌ ಖರೀದಿ ಮಾಡಿದ ಚೆನ್ನೈ ವ್ಯಕ್ತಿ!