ಸಂತಾನಹರಣವಾದ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆಗೆ ಬಿಬಿಎಂಪಿ ನಿರ್ಧಾರ

By Suvarna Web DeskFirst Published Nov 22, 2017, 3:39 PM IST
Highlights

ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಹೆಸರಲ್ಲಿ ನಡೆಯುತ್ತಿರುವ ಅಕ್ರಮ ತಡೆಗೆ ಬಿಬಿಎಂಪಿ ಮುಂದಾಗಿದೆ.ಇನ್ನು ಮುಂದೆ ಶಸ್ತ್ರ ಚಿಕಿತ್ಸೆ ಮಾಡುವಾಗ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆಗೆ ನಿರ್ಧರಿಸಿದೆ.

ಬೆಂಗಳೂರು (ನ.22): ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಹೆಸರಲ್ಲಿ ನಡೆಯುತ್ತಿರುವ ಅಕ್ರಮ ತಡೆಗೆ ಬಿಬಿಎಂಪಿ ಮುಂದಾಗಿದೆ.ಇನ್ನು ಮುಂದೆ ಶಸ್ತ್ರ ಚಿಕಿತ್ಸೆ ಮಾಡುವಾಗ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆಗೆ ನಿರ್ಧರಿಸಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಪಾಲಿಕೆ ಡಿಜಿಟಲ್ ಚಿಪ್ ಹಾಗೂ ಜಿಪಿಎಸ್ ಅಳವಡಿಕೆ ಮುಂದಾಗಿದೆ. ಬಿಬಿಎಂಪಿ 8 ವಲಯದಲ್ಲಿ ಎಬಿಸಿ ಚಿಕಿತ್ಸೆ ನೀಡಿದ ನಾಯಿಗಳು,ದಾಳಿ ಮಾಡುವ ಡಾಗ್ಸ್, ಸೇರಿದಂತೆ ಏರಿಯಾದಲ್ಲಿನ ಬೀದಿ ನಾಯಿಗಳ ಕಂಪ್ಲೀಟ್ ಡಿಟೇಲ್ಸ್ ಡಾಟಾ ಸಿದ್ದಗೊಳಿಸಲು ನಿರ್ಧರಿಸಿದೆ. ಇನ್ನೂ ಪಾಲಿಕೆ ವ್ಯಾಪ್ತಿಯಲ್ಲಿ 17 ವರ್ಷಗಳಿಂದ 5.92 ಲಕ್ಷ ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಿದ್ದು, 31.76 ಕೋಟಿ ಹಣವನ್ನು ವ್ಯಯ ಮಾಡಲಾಗಿದೆ. ಇಷ್ಟೂ ಹಣವನ್ನು ಖರ್ಚು ಮಾಡಿದ್ರೂ ವಾರ್ಡ್ ಗಳಲ್ಲಿ ನಾಯಿಗಳ ಕಾಟ ತಪ್ಪುತ್ತಿಲ್ಲ.ಹೀಗಾಗಿಯೇ ಮೈಕ್ರೋ ಚಿಪ್ ಮತ್ತು ಜಿಪಿಎಸ್ ಅಳವಡಿಕೆ ಬಗ್ಗೆ ಪಾಲಿಕೆ ತೀರ್ಮಾನಿಸಿದೆ.ಯು.ಎಸ್. ಮೂಲದ ಎರಡು ಕಂಪನಿಗಳು ಇದರ ಗುತ್ತಿಗೆ ಪಡೆಯಲು ಮುಂದೆ ಬಂದಿದೆ. ಮೈಕ್ರೋ ಚಿಪ್ ಹಾಗೂ ಜಿಪಿಎಸ್ ಅಂದಾಜು 5 ಸಾವಿರ ರೂ. ನಷ್ಟು ಖರ್ಚಾಗಲಿದ್ದು, ದೇಶದಲ್ಲಿ ಮೊದಲ ಬಾರಿಗೆ ಬೀದಿ ನಾಯಿಗಳಿಗೆ ಚಿಪ್ ಅಳವಡಿಕೆ ಕಾರ್ಯ ಆಗಲಿದೆ.

ಒಟ್ಟಾರೆ ಬಿಬಿಎಂಪಿ ವ್ಯಾಪ್ತಿಯಲ್ಲಿ 2.90 ಲಕ್ಷಗಳಷ್ಟು ಬೀದಿ ನಾಯಿಗಳಿಗೆ ಪಾಲಿಕೆ ಡಿಜಿಟಲ್ ಟಚ್ ನೀಡಲಾಗುತ್ತಿದೆ.

 

 

 

click me!