BBMP ಬಜೆಟ್ ಅನುಷ್ಠಾನಕ್ಕೆ ಸಿಎಂ ತಡೆ: ಕಾರಣವೂ ಉಂಟು

Published : Aug 03, 2019, 09:46 PM ISTUpdated : Aug 03, 2019, 09:53 PM IST
BBMP ಬಜೆಟ್ ಅನುಷ್ಠಾನಕ್ಕೆ ಸಿಎಂ ತಡೆ: ಕಾರಣವೂ ಉಂಟು

ಸಾರಾಂಶ

ಇನ್ನೇನು ಮೈತ್ರಿ ಸರ್ಕಾರ ಪತನವಾಗುತ್ತೆ ಎಂದು ಕೊನೆಗಳಿಗೆಯಲ್ಲಿ ಕುಮಾರಸ್ವಾಮಿ ಮಾಡಿದ ತರಾತುರಿ ಕೆಲಸಗಳಿಗೆ ನೂತನ ಸಿಎಂ ಬಿ.ಎಸ್.ಯಡಿಯೂರಪ್ಪ ಬೇಕ್ ಹಾಕುತ್ತಿದ್ದಾರೆ. ಪ್ರಾಧಿಕಾರ, ನಿಗಮ ಮಂಡಳಿ ಅಧ್ಯಕ್ಷ ಹಾಗೂ ವಿವಿಗಳಿಗೆ ಮಾಡಿರುವ ನಾಮನಿರ್ದೇಶನಗಳನ್ನು ರದ್ದುಪಡಿಸಿದ್ದಾರೆ. ಇದೀಗ ಬಿಬಿಎಂಪಿ ಬಜೆಟ್ ಸಹ ತಡೆದಿದ್ದಾರೆ. 

ಬೆಂಗಳೂರು, [ಆ.03]: ಮೈತ್ರಿ ಸರ್ಕಾರ ಮಾಡಿದ ತರಾತುರಿ ಒಂದೊಂದೇ ಕೆಲಸಗಳಿಗೆ ಬ್ರೇಕ್ ಹಾಕುತ್ತಿರುವ ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇದೀಗ ಬಿಬಿಎಂಪಿ ಮಂಡಿಸಿರುವ 2019-20ನೇ ಸಾಲಿನ ಬಜೆಟ್ ಅನ್ನು ಅನುಷ್ಠಾನ ಮಾಡದಂತೆ ಇಂದು [ಶನಿವಾರ] ಆದೇಶ ಹೊರಡಿಸಿದ್ದಾರೆ.

ಖಾತಾ ಬದಲಾವಣೆ ಲೆಕ್ಕಾಚಾರ: 12,755 ಕೋಟಿ ತಲುಪಿದ ಬಿಬಿಎಂಪಿ ಬಜೆಟ್‌!

ಸಂಪುಟ ಸಭೆ ಅನುಮೋದನೆ ಇಲ್ಲದೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ [ಬಿಬಿಎಂಪಿ]ಯ ಬಜೆಟ್ ಅನುಷ್ಠಾನ ಆಗ್ತಿರೋದಕ್ಕೆ ಆಕ್ಷೇಪ ಹಿನ್ನೆಲೆಯಲ್ಲಿ ಟೆಂಡರ್ ಕರೆಯುವ ಪ್ರಕ್ರಿಯೆ ನಿಲ್ಲಿಸಲು ಬಿಎಸ್ ವೈ ಆದೇಶಿಸಿದ್ದಾರೆ.

ಅನುಷ್ಠಾನಕ್ಕೆ ಯೋಗ್ಯವಲ್ಲ ಬಿಬಿಎಂಪಿ ಬಜೆಟ್‌!: ಆಯುಕ್ತರಿಂದಲೇ ಅಸಮಾಧಾನ!

2019-20ನೇ ಸಾಲಿನ 12,755 ಕೋಟಿ ರು. ಮೊತ್ತದ ಬಜೆಟ್ ಅನ್ನು ಫೆ.19 ರಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಮಂಡಿಸಿದ್ದರು. ಆದ್ರೆ, ಬಜೆಟ್ ನ್ನು ಅನುಷ್ಠಾನ ಮಾಡದಂತೆ ಯಡಿಯೂರಪ್ಪ ಸೂಚಿಸಿದ್ದಾರೆ.

ಯಡಿಯೂರಪ್ಪ ಮಾತ್ರವಲ್ಲದೇ ಈ ಹಿಂದೆಯೇ ಖುದ್ದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರೇ ಬಜೆಟ್‌ ಅನುಷ್ಠಾನಕ್ಕೆ ಯೋಗ್ಯವಲ್ಲ ಎಂದು ಹೇಳಿದ್ದರು.ಅಷ್ಟೇ ಅಲ್ಲದೇ ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಗೆ ಪತ್ರವನ್ನೂ ಸಹ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್
ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್