ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯ್ತು ಇಂದಿರಾ ಕ್ಯಾಂಟೀನ್; ಬಿಬಿಸಿ ಶ್ಲಾಘನೆ

By Suvarna Web DeskFirst Published Nov 20, 2017, 1:57 PM IST
Highlights

ಬಡವರ ಹಸಿವು ನೀಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ 'ಇಂದಿರಾ ಕ್ಯಾಂಟೀನ್​​' ಕಾರ್ಯಕ್ಕೆ ಬಿಬಿಸಿ ನ್ಯೂಸ್  ಬೇಷ್ ಎಂದಿದೆ.

ಬೆಂಗಳೂರು (ನ.20): ಬಡವರ ಹಸಿವು ನೀಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ 'ಇಂದಿರಾ ಕ್ಯಾಂಟೀನ್​​' ಕಾರ್ಯಕ್ಕೆ ಬಿಬಿಸಿ ನ್ಯೂಸ್  ಬೇಷ್ ಎಂದಿದೆ.

ಈ ಸುದ್ದಿಯನ್ನು ಕರ್ನಾಟಕ ಸರಕಾರದ ಟ್ವೀಟರ್ ಖಾತೆ ರೀ ಟ್ವೀಟ್ ಮಾಡಿದೆ. ತಾಜಾವಾಗಿರುವ, ಬಿಸಿ, ಬಿಸಿ ಆಹಾರವನ್ನು ಜನರು ಅತ್ಯಂತ ಕಡಿಮೆ ದರದಲ್ಲಿ ಕೊಳ್ಳುತ್ತಿದ್ದು, ಈ ಯೋಜನೆ ಹೆಚ್ಚು ಜನಪ್ರಿಯವಾಗಿದೆ ಎಂದು ನ್ಯೂಸ್ ಹೇಳಿದೆ. ದಿನಗೂಲಿ ಕಾರ್ಮಿಕರು, ಚಾಲಕರು, ಭದ್ರತಾ ಸಿಬ್ಬಂದಿ, ಭಿಕ್ಷುಕರು ಸೇರಿ ಬಡವರು ಆಹಾರ ಕೊಳ್ಳುತ್ತಿದ್ದು, ಇಂಥವರ ಹಸಿವು ನೀಗಿಸುವಲ್ಲಿ, ಸರಕಾರ ತೆಗೆದುಕೊಂಡಿರುವ ಕ್ರಮಕ್ಕೆ ಬಿಬಿಸಿ ಶಹಬ್ಬಾಸ್ ಎಂದು ಹೇಳಿದೆ. ಕೇವಲ ಐದು ರೂ.ಗೆ ತಿಂಡಿ ಸಿಗಲಿದ್ದು, ಈ ಮುಂಚೆ 30 ರೂ. ಖಾಲಿ ಮಾಡುತ್ತಿದ್ದವರು ದಿನಕ್ಕೆ 25 ರೂ. ಉಳಿಸುವಂತಾಗಿದೆ. ಮೂರು ಹೊತ್ತಿನ ಊಟಕ್ಕೆ ಸುಮಾರು 140 ರೂ. ಖಾಲಿ ಮಾಡುತ್ತಿದ್ದವರು ಇದೀಗ ಕೇವಲ 40 ರೂ.ಖಾಲಿ ಮಾಡುತ್ತಿದ್ದು, ದಿನಕ್ಕೆ 100 ರೂ.ನಷ್ಟು ಉಳಿತಾಯ ಮಾಡುತ್ತಿದ್ದಾರೆ. ಇದರಿಂದ ಬಡವರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಎಂಬುವುದು ಬಿಬಿಸಿ ಅಭಿಪ್ರಾಯ.

 

This project is part of my personal commitment to usher in a
I grew up envisioning a society where no one goes to bed hungry & undernourished. Proud that my government has been committed to build this Karnataka since day 1. https://t.co/4xOHqGkL8X

— Siddaramaiah (@siddaramaiah)

Serving hot, healthy & affordable meals, Indira Canteen is an ambitious step towards building a Hunger Free Karnataka. https://t.co/wvtn37yiqs

— CM of Karnataka (@CMofKarnataka)
click me!