
ವಿಧಾನಸಭೆ : ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಾತಕವು ಎಲ್ಲೋ ಸೇರಿಬಿಟ್ಟಿದೆ. ಹೀಗಾಗಿ ಅವರು ಒಟ್ಟಾಗಿದ್ದರೆ ಯಾವಾಗಲೂ ಅಧಿಕಾರದಲ್ಲಿರುತ್ತಾರೆ. ದೂರ ಹೋದರೆ ಅಧಿಕಾರ ಕಳೆದುಕೊಳ್ಳುತ್ತಾರೆ. ಹೀಗಾಗಿ ಅವರ ಜಾತಕದ ಮಹಿಮೆ ಬಗ್ಗೆ ತಜ್ಞರಿಂದ ಪರಿಶೀಲನೆ ನಡೆಸಬೇಕು ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಶುಕ್ರವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಚ್.ಡಿ. ದೇವೇಗೌಡರು ಜಾತಕವನ್ನು ಬಹಳ ನಂಬುತ್ತಾರೆ. ಎಚ್.ಡಿ. ರೇವಣ್ಣ ಹಾಗೂ ದೇವೇಗೌಡರ ಜಾತಕ ಸೇರಿಬಿಟ್ಟಿದೆ. ಆದರೆ, ಕುಮಾರಸ್ವಾಮಿ ಅವರ ಜಾತಕ ಸ್ವತಂತ್ರವಾಗಿದೆ. ಅದೇ ರೀತಿ ದೇವೇಗೌಡರು ಹಾಗೂ ಸಿದ್ದರಾಮಯ್ಯ ಅವರ ಜಾತಕವೂ ಸೇರಿದೆ. ಹೀಗಾಗಿ ಅವರು ಒಟ್ಟಾಗಿ ಇದ್ದಾಗಲೆಲ್ಲಾ ಅಧಿಕಾರದಲ್ಲಿದ್ದರು. ಬೇರೆ ಆದಾಗಲೆಲ್ಲಾ ಅಧಿಕಾರ ಕಳೆದುಕೊಂಡರು. ಈ ಜಾತಕದ ಮಹಿಮೆಯನ್ನು ತಜ್ಞರಿಂದ ಪರಾಮರ್ಶೆ ಮಾಡಿಸಬೇಕಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಈ ವೇಳೆ ಬಿಜೆಪಿ ಶಾಸಕ ಸಿ.ಟಿ. ರವಿ, ಡಿ.ಕೆ. ಶಿವಕುಮಾರ್ ಹಾಗೂ ಕುಮಾರಸ್ವಾಮಿ ಅವರ ಜಾತಕ ಕೂಡಿದ್ದು ಹೇಗೆ ಸ್ವಲ್ಪ ಹೇಳಿ. ಡಿ.ಕೆ. ಶಿವಕುಮಾರ್ ಯಾವತ್ತೂ ಒಂಟಿ ಸಲಗ. ಅವರು ಯಾವತ್ತೂ ಯಾರೊಂದಿಗೂ ಬೆರೆತಿರಲಿಲ್ಲ. ಇದೀಗ ಕುಮಾರಸ್ವಾಮಿ ಜಾತಕದೊಂದಿಗೆ ಹೇಕೆ ಕೂಡಿಕೊಂಡಿತು ಎಂದು ಕೆಣಕಿದರು. ಇದಕ್ಕೆ ಬಸವರಾಜು ಬೊಮ್ಮಾಯಿ, ಈ ಜಾತಕವನ್ನೂ ತಜ್ಞರ ಪರಿಶೀಲನೆಗೆ ಒಳಪಡಿಸಬೇಕು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.