
ಬೆಂಗಳೂರು (ಮಾ. 06): ಅಮಿತ್ ಶಾ ನಾಗಪುರಕ್ಕೆ ಹೋದಾಗ ಸ್ಥಳೀಯ ಸಂಘ ನಾಯಕರು ಯಾವುದೇ ಕಾರಣಕ್ಕೂ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಪಕ್ಷಕ್ಕೆ ಕರೆದುಕೊಳ್ಳಬೇಡಿ ಎಂದು ಹೇಳಿದ್ದು ಬಹುತೇಕ ಯತ್ನಾಳ್
ಘರ್ ವಾಪಸಿ ಸಾಧ್ಯವಿಲ್ಲ ಎಂದು ಸೂಚನೆ ನೀಡಲಾಗಿದೆಯಂತೆ.
ಯತ್ನಾಳ್ ಅವರು ಸ್ಥಳೀಯ ಸಂಘ ನಾಯಕರಿಗೆ ಏಕವಚನದಲ್ಲಿ ಬಯ್ಯುತ್ತಾರೆ, ಕ್ಯಾರೇ ಅನ್ನುವುದಿಲ್ಲ ಎನ್ನುವುದು ಉತ್ತರ ಕರ್ನಾಟಕದ ಸಂಘ ನಾಯಕರ ಆಕ್ರೋಶಕ್ಕೆ ಮುಖ್ಯ ಕಾರಣವಂತೆ. ಅಮಿತ್ ಶಾ ಸಂಘದ ನಾಯಕರಿಗೆ
‘ಯತ್ನಾಳ್‌ರನ್ನು ನಾನು ಫೋನ್ ಮಾಡಿ ಕರೆದಿಲ್ಲ, ಅವರೇ ಬಂದು ಸೇರಿಸಿಕೊಳ್ಳಿ ಎಂದು ದುಂಬಾಲು ಬಿದ್ದಿದ್ದರು’ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ವಿಜಯಪುರದಲ್ಲಿ ಗೆಲ್ಲಲು ಬಸನಗೌಡರು ಬೇಕೇ ಬೇಕು ಎಂದು ಹೇಳುತ್ತಿದ್ದ ಯಡಿಯೂರಪ್ಪನವರಿಗೆ ಮಾತ್ರ ಯತ್ನಾಳ್ ಕೊನೆಯ ಗಳಿಗೆಯಲ್ಲಿ ಕಾಂಗ್ರೆಸ್ ಜೊತೆ ಕೈ ಜೋಡಿಸಿದರೆ ಏನು ಮಾಡುವುದು ಎಂಬ ಚಿಂತೆ ಶುರುವಾಗಿದೆ.
ರಾಜಕಾರಣದ ಬಗ್ಗೆ ಹೆಚ್ಚಿನ ಮಾಹಿತಿಗೆ ಇಂಡಿಯಾ ಗೇಟ್ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.