ಕಾಂಗ್ರೆಸ್’ಗೆ ನೀರವ್ ಮೋದಿ 98 ಕೋಟಿ ರೂ ಕೊಟ್ಟಿದ್ದು ನಿಜನಾ?

By Suvarna Web DeskFirst Published Mar 6, 2018, 1:34 PM IST
Highlights

ವಾಣಿಜ್ಯೋದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ೧೧,೪೦೦ ಕೋಟಿ ರು. ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾದ ಬೆನ್ನಲ್ಲೇ ನೀರವ್ ಮೋದಿ ಮತ್ತು ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಡು ಮತ್ತೊಂದು ಗಾಳಿಸುದ್ದಿ ಸಾಮಾಜಿಕ  ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅದರ ಪ್ರಕಾರ, 2011 ರಲ್ಲಿ ನೀರವ್ ಮೋದಿ  ಕಾಂಗ್ರೆಸ್‌'ಗೆ 98 ಕೋಟಿ ರು. ಅನ್ನು ಚೆಕ್ ಮೂಲಕ ದೇಣಿಗೆ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಜಗತ್ತಿನ ಅತೀ ಭ್ರಷ್ಟ ಪಕ್ಷ ಎಂದು ಹೇಳಲಾಗಿದೆ. ಆದರೆ ನಿಜಕ್ಕೂ ಕಾಂಗ್ರೆಸ್ ನೀರವ್ ಮೋದಿಯಿಂದ 98  ಕೋಟಿ ರು. ಹಣವನ್ನು ಚೆಕ್  ಮೂಲಕ ಪಡೆದಿತ್ತೆ ಎಂದು ಪರಿಶೀಲಿಸಿದಾಗ ಈ ‘ಚೆಕ್’ ಹಿಂದಿನ ಅಸಲಿ ಕತೆ ಬಯಲಾಗಿದೆ.

ಬೆಂಗಳೂರು (ಮಾ. 06): ವಾಣಿಜ್ಯೋದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ೧೧,೪೦೦ ಕೋಟಿ ರು. ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾದ ಬೆನ್ನಲ್ಲೇ ನೀರವ್ ಮೋದಿ ಮತ್ತು ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಡು ಮತ್ತೊಂದು ಗಾಳಿಸುದ್ದಿ ಸಾಮಾಜಿಕ  ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅದರ ಪ್ರಕಾರ, 2011 ರಲ್ಲಿ ನೀರವ್ ಮೋದಿ  ಕಾಂಗ್ರೆಸ್‌'ಗೆ 98 ಕೋಟಿ ರು. ಅನ್ನು ಚೆಕ್ ಮೂಲಕ ದೇಣಿಗೆ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಜಗತ್ತಿನ ಅತೀ ಭ್ರಷ್ಟ ಪಕ್ಷ ಎಂದು ಹೇಳಲಾಗಿದೆ. ಆದರೆ ನಿಜಕ್ಕೂ ಕಾಂಗ್ರೆಸ್ ನೀರವ್ ಮೋದಿಯಿಂದ 98  ಕೋಟಿ ರು. ಹಣವನ್ನು ಚೆಕ್  ಮೂಲಕ ಪಡೆದಿತ್ತೆ ಎಂದು ಪರಿಶೀಲಿಸಿದಾಗ ಈ ‘ಚೆಕ್’ ಹಿಂದಿನ ಅಸಲಿ ಕತೆ ಬಯಲಾಗಿದೆ.

ವಾಸ್ತವವಾಗಿ ಈ ಚೆಕ್ ಅನ್ನು ಸೂಕ್ಷ್ಮವಾಗಿ ಗಮನಿಸಿದಾಗ  ಇದೊಂದು ಫೋಟೋಶಾಪ್ ಮೂಲಕ ಎಡಿಟ್ ಮಾಡಿರುವ  ಚೆಕ್ ಎಂದು ತಿಳಿಯುತ್ತದೆ. ಚೆಕ್‌ನಲ್ಲಿ ‘ನೈನ್ಟಿ’ ಎಂದು ಬರೆಯುವ ಬದಲಾಗಿ ‘ನೈನ್  ಎನ್‌ಟಿ’ ಎಂದು ಬರೆಯಲಾಗಿದೆ. ಕೋಟ್ಯಧಿಪತಿ ಉದ್ಯಮಿಯೊಬ್ಬರ ಅಕೌಂಟೆಂಟ್ ಇಂತಹ ತಪ್ಪನ್ನು ಮಾಡಲು ಸಾಧ್ಯವೇ ಎಂಬುದು ಪ್ರಶ್ನೆ? ಅಲ್ಲದೆ ಚೆಕ್ ಕೆಳಗೆ ಮಾಡಿರುವ ಸಹಿ ಕೂಡ ನಕಲಿ. ಸಹಿಯನ್ನು ಎಡಿಟ್ ಮಾಡಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಅಲ್ಲದೆ ಚೆಕ್‌ನ ಮೇಲ್ಭಾಗದಲ್ಲಿ ಲಕ್ಷ್ಮೀಪುರ ಅಸ್ಸಾಂ ಬ್ರಾಂಚ್ ಎಂದು ಬರೆದಿದೆ. ನೀರವ್  ಮೋದಿಯ ಎಲ್ಲಾ ವ್ಯವಹಾರಗಳೂ ಮುಂಬೈ ಮಹಾನಗರಿಯಲ್ಲೇ ನಡೆಯುತ್ತಿವೆ ಎಂದ ಮೇಲೆ ನೀರವ್ ಮೋದಿ ಅಸ್ಸಾಂ ಬ್ರಾಂಚ್‌ನಲ್ಲಿ ಹಣ ವರ್ಗಾವಣೆ ಮಾಡುತ್ತಿದ್ದರೆ? ಹಾಗಾಗಿ ಕಾಂಗ್ರೆಸ್‌ಗೆ ಮೋದಿ 98  ಕೋಟಿ ರು. ದಾನ ನೀಡಿದ್ದರು ಎಂದು ಹರಿದಾಡುತ್ತಿರುವ ಸುದ್ದಿ ಸುಳ್ಳು.

click me!