ಏರ್ ಇಂಡಿಯಾಗೆ ಸಾಲಗಾರರ ಕಾಟ

By Web DeskFirst Published Jul 31, 2018, 12:10 PM IST
Highlights

ಆರ್ಥಿಕ ಸಂಕಷ್ಟದಲ್ಲಿರುವ ಏರ್ ಇಂಡಿಯಾಗೆ ಸಾಲಗಾರರ ಕಾಟ ಶುರುವಾಗಿದೆ.  ವಿಮಾನ ಕಂಪನಿಗಳು ಹಾಗೂ ಬ್ಯಾಂಕುಗಳಿಗೆ ೧೮೦೦ ಕೋಟಿ ರು. ಬಾಕಿ ಪಾವತಿಸಬೇಕಾಗಿದ್ದು, ಇದಕ್ಕಾಗಿ ಹಣ ಕೊಡುವಂತೆ ಏರ್ ಇಂಡಿಯಾ ಕೇಂದ್ರ ಸರ್ಕಾರಕ್ಕೆ ಮೊರೆ ಇಟ್ಟಿದೆ.

ನವದೆಹಲಿ (ಜು. 31): ಸರ್ಕಾರಿ ಸ್ವಾಮ್ಯದ ವಿಮಾನಯಾನ ಕಂಪನಿ ಏರ್ ಇಂಡಿಯಾಗೂ ಈಗ ಸಾಲಗಾರರ ಕಾಟ ಶುರುವಾಗಿದೆ. 3 ಬ್ಯಾಂಕುಗಳು ಹಾಗೂ ವಿಮಾನ ಗುತ್ತಿಗೆ ನೀಡುವ ಎರಡು ಕಂಪನಿಗಳು ಕೆಲ ವಾರಗಳಿಂದ ಏರ್ ಇಂಡಿಯಾಗೆ ನೋಟಿಸ್ ಜಾರಿ ಮಾಡಿದ್ದು, ಬಾಕಿ ಚುಕ್ತಾ ಮಾಡುವಂತೆ ಸೂಚಿಸಿವೆ ಎಂದು ಆಂಗ್ಲಮಾಧ್ಯ ಮಗಳು ವರದಿ ಮಾಡಿವೆ.

ಏರ್ ಇಂಡಿಯಾವನ್ನು ಮಾರಾಟ ಮಾಡುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲಗೊಂಡ ಬೆನ್ನ ಲ್ಲೇ, ಸಾಲಗಾರರ ನೋಟಿಸ್ ಬಂದಿದೆ. ಇದರಿಂದಾಗಿ ಏರ್ ಇಂಡಿಯಾ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಜಾರಿರುವುದು ಸ್ಪಷ್ಟವಾದಂತಾಗಿದೆ. ಆಗಸ್ಟ್ ಅಂತ್ಯದೊಳಗೆ ಸರ್ಕಾರದಿಂದ ಹಣ ಬರಲಿದೆ. ಅಲ್ಲಿವರೆಗೂ ಕಾನೂನು ಕ್ರಮಕ್ಕೆ ಮುಂದಾಗದಂತೆ ಈ ಕಂಪನಿಗಳಿಗೆ ಏರ್ ಇಂಡಿಯಾ ಅರಿಕೆ ಮಾಡಿಕೊಂಡಿದೆ ಎನ್ನಲಾಗಿದೆ.

1800 ಕೋಟಿ ರು. ಬಾಕಿ ತೀರಿಸಬೇಕು:

ವಿಮಾನ ಕಂಪನಿಗಳು ಹಾಗೂ ಬ್ಯಾಂಕುಗಳಿಗೆ ೧೮೦೦ ಕೋಟಿ ರು. ಬಾಕಿ ಪಾವತಿಸಬೇಕಾಗಿದ್ದು, ಇದಕ್ಕಾಗಿ ಹಣ ಕೊಡುವಂತೆ ಏರ್ ಇಂಡಿಯಾ ಕೇಂದ್ರ ಸರ್ಕಾರಕ್ಕೆ ಮೊರೆ ಇಟ್ಟಿದೆ.

click me!