ಜಯಾ ನೀಡಿದ್ದ 13 ಕೆಜಿ ಚಿನ್ನದ ಕವಚ ಕೊಡಲು ಬ್ಯಾಂಕ್ ನಕಾರ

By Suvarna Web DeskFirst Published Oct 27, 2017, 4:15 PM IST
Highlights

ಅಣ್ಣಾಡಿಎಂಕೆ ಎರಡು ಬಣಗಳಾಗಿ ಹೋಳಾಗಿರುವುದರಿಂದ ದಕ್ಷಿಣ ತಮಿಳುನಾಡಿನ ಪ್ರಬಲ ಥೇವರ್ ಸಮುದಾಯದ ನಾಯಕ ಪಾಸುಂಪನ್ ಮಾಥುರಾಮಲಿಂಗಂ ಜನ್ಮಸಂಸ್ಮರಣೆ, ಪುಣ್ಯತಿಥಿ ಕಾರ್ಯಕ್ರಮಗಳಿಗೆ ವಿಘ್ನ ಎದುರಾಗಿದೆ.

ಮದುರೈ(ಅ.27): ಅಣ್ಣಾಡಿಎಂಕೆ ಎರಡು ಬಣಗಳಾಗಿ ಹೋಳಾಗಿರುವುದರಿಂದ ದಕ್ಷಿಣ ತಮಿಳುನಾಡಿನ ಪ್ರಬಲ ಥೇವರ್ ಸಮುದಾಯದ ನಾಯಕ ಪಾಸುಂಪನ್ ಮಾಥುರಾಮಲಿಂಗಂ ಜನ್ಮಸಂಸ್ಮರಣೆ, ಪುಣ್ಯತಿಥಿ ಕಾರ್ಯಕ್ರಮಗಳಿಗೆ ವಿಘ್ನ ಎದುರಾಗಿದೆ.

ಮಾಥುರಾಮಲಿಂಗಂ ಸ್ಮರಣಾರ್ಥ ಅಣ್ಣಾಡಿಎಂಕೆ ಅಧಿನಾಯಕಿಯೂ ಆಗಿದ್ದ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು 4.5 ಕೋಟಿ ರು. ವ್ಯಯಿಸಿ 13 ಕೆ.ಜಿ. ಚಿನ್ನದ ಕವಚ ಮಾಡಿಸಿಕೊಟ್ಟಿದ್ದರು. ಅದು ಈಗ ಬ್ಯಾಂಕ್ ಆಫ್ ಇಂಡಿಯಾದ ಮದುರೈ ಶಾಖೆಯಲ್ಲಿದೆ. ಪ್ರತಿ ವರ್ಷ ಅದನ್ನು ಬ್ಯಾಂಕಿನಿಂದ ಹೊರತಂದು, ರಾಮಲಿಂಗಂ ಅವರ ಪ್ರತಿಮೆಗೆ ತೊಡಿಸಿ ಮರಳಿ ಬ್ಯಾಂಕಿಗೆ ಒಯ್ಯಲಾಗುತ್ತದೆ. ಅ.28ರಿಂದ 31ರವರೆಗೆ ರಾಮಲಿಂಗಂ ಅವರು ಕಾರ್ಯಕ್ರಮ ನಿಗದಿಯಾಗಿದ್ದು, ಪಕ್ಷದ ನಾಯಕರು ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿದ್ದಾರೆ. ಆದರೆ ನೈಜ ಅಣ್ಣಾಡಿಎಂಕೆ ಯಾವುದು ಎಂದು ಕೇಳಿರುವ ಅಧಿಕಾರಿಗಳು, ಚಿನ್ನದ ಕವಚ ನೀಡಲು ನಿರಾಕರಿಸಿದ್ದಾರೆ.

ಜಯಲಲಿತಾ ಅವರಿದ್ದಾಗ ಪನ್ನೀರ್‌ ಸೆಲ್ವಂ ಅವರು ಪಕ್ಷದ ಖಜಾಂಚಿಯಾಗಿದ್ದರು. ಶಶಿಕಲಾ ವಿರುದ್ಧ ಬಂಡೆದ್ದ ಬಳಿಕ ಅವರನ್ನು ಖಜಾಂಚಿ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಹೀಗಾಗಿ ಅವರು ಪಕ್ಷದ ಖಾತೆ ಇರುವ ಬ್ಯಾಂಕುಗಳಿಗೆ ಪತ್ರ ಬರೆದು, ಅವುಗಳ ಕಾರ್ಯನಿರ್ವಹಣೆಗೆ ತಡೆಯೊಡ್ಡಿದ್ದರು. ಜತೆಗೆ ಪಕ್ಷದ ಚಿಹ್ನೆಯನ್ನು ಆಯೋಗ ಮುಟ್ಟುಗೋಲು ಹಾಕಿಕೊಂಡಿದೆ.

 

click me!