ಬೆಂಗಳೂರಲ್ಲೇ ಇದ್ದ ಬಾಂಗ್ಲಾ ವಲಸಿಗ ವಾಕಿಟಾಕಿ ಇಟ್ಗೊಂಡಿದ್ದು ಯಾಕೆ?

Published : Aug 24, 2018, 11:17 AM ISTUpdated : Sep 09, 2018, 09:50 PM IST
ಬೆಂಗಳೂರಲ್ಲೇ ಇದ್ದ ಬಾಂಗ್ಲಾ ವಲಸಿಗ ವಾಕಿಟಾಕಿ ಇಟ್ಗೊಂಡಿದ್ದು ಯಾಕೆ?

ಸಾರಾಂಶ

ಬಾಂಗ್ಲಾ ವಲಸಿಗರು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂಬ ಕೂಗು ಆಗಾಗ ಕೇಳಿ ಬರುತ್ತಲೆ ಇದೆ. ಸರಕಾರ ಇಲ್ಲ ಎಂಬ ಸಮರ್ಥನೆ ನೀಡಿಕೊಂಡೆ ಬಂದಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಬೆಂಗಳೂರು ಪೊಲೀಸರು ಬಾಂಗ್ಲಾ ವಲಸಿಗ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದಾರೆ.

ಬಾಂಗ್ಲಾ ವಲಸಿಗರು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂಬ ಕೂಗು ಆಗಾಗ ಕೇಳಿ ಬರುತ್ತಲೆ ಇದೆ. ಸರಕಾರ ಇಲ್ಲ ಎಂಬ ಸಮರ್ಥನೆ ನೀಡಿಕೊಂಡೆ ಬಂದಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಬೆಂಗಳೂರು ಪೊಲೀಸರು ಬಾಂಗ್ಲಾ ವಲಸಿಗ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದಾರೆ.

ಬೆಂಗಳೂರು[ಆ.23] ಆಂತರಿಕ ಭದ್ರತಾ ವಿಭಾಗ ಮತ್ತು ಸರ್ಜಾಪುರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ವಾಸವಾಗಿದ್ದ ಬಾಂಗ್ಲಾ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದಾರೆ.

ಮೊಹಮ್ಮದ್ ಶೋಬಿಕುಲ್ ಇಸ್ಲಾಂ (20) ಬಂಧಿತ ವಿದ್ಯಾರ್ಥಿಯಾಗಿದ್ದಾನೆ. ಬಂಧಿತ ಆರೋಪಿಯಿಂದ 30ಕ್ಕೂ ಹೆಚ್ಚು 7.62 ಖಾಲಿ ಕಾಡತೂಸು (ಕಾಟ್ರೇಜ್) ಮತ್ತು ಒಂದು
ವಾಕಿಟಾಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಈತ ಶಿಕ್ಷಣ ವೀಸಾದಡಿ ಸರ್ಜಾಪುರ ಹತ್ತಿರದ ಕೊಮ್ಮಸಂದ್ರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಅವಧಿ ಮುಗಿದರೂ
ಇಲ್ಲಿಯೇ ಅಕ್ರಮವಾಗಿ ವಾಸವಾಗಿದ್ದಾನೆ.

ನಗರ ಹಾಗೂ ಹೊರವಲಯದಲ್ಲಿ ಅಕ್ರಮವಾಗಿ ವಾಸವಾಗಿರುವ ಬಾಂಗ್ಲಾದೇಶದ ಇತರೆ ವಿದ್ಯಾರ್ಥಿಗಳಿಗೆ ಈತನೇ ಮಾರ್ಗದರ್ಶಕನಾಗಿದ್ದ. ಮಾರ್ಗದರ್ಶನದಿಂದ ಹಣ
ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಕಲಿ ಗುರುತಿನ ಚೀಟಿ ಬಳಸಿ ಆ್ಯಪ್ ಆಧರಿತ ಕ್ಯಾಬ್ ಚಾಲನೆ ಮಾಡುತ್ತಿದ್ದ. ಈ ಮಾಹಿತಿ ಪಡೆದ ಆಂತರಿಕಾ ಭದ್ರತಾ
ವಿಭಾಗದ ಪೊಲೀಸರು ಆರೋಪಿಯ ಮೇಲೆ ಕೆಲ ದಿನಗಳಿಂದಲೂ ನಿಗಾವಹಿಸಿದ್ದರು. ಕೊನೆಗೆ ಆ.22ರಂದು ರಾತ್ರಿ ಕೊಮ್ಮಸಂದ್ರದ ಬಾಡಿಗೆ ಮನೆಯಲ್ಲೇ ಬಂಧಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ