ಬದಲಾಗಲಿದೆ ಬೆಂಗಳೂರು ಸಿಟಿ ಹೆಸರು !

By Internet DeskFirst Published Sep 27, 2016, 5:23 PM IST
Highlights

ಬೆಂಗಳೂರು(ಸೆ.27): ಉದ್ಯಾನ ನಗರಿ, ಸಿಲಿಕಾನ್ ಸಿಟಿ, ಗಾರ್ಬೇಜ್ ಸಿಟಿ ಹಾಗೂ ಇತ್ತೀಚಿಗೆ ಅತಿಯಾದ ವಾಹನಗಳಿಂದ ಟ್ರಾಫಿಕ್ ಸಿಟಿ ಎಂದು ಖ್ಯಾತಿ ಮತ್ತು ಕುಖ್ಯಾತಿ ಪಡೆದಿರುವ ಬೆಂಗಳೂರಿನ ಹೆಸರು ಕೆಲವೇ ದಿನಗಳಲ್ಲಿ ಬದಲಾಗುವ ಲಕ್ಷಣಗಳು ಗೋಚರಿಸುತ್ತಿದೆ. ಏಕೆಂದರೆ ಬಿಬಿಎಂಪಿ ಕೆಲವು ವರ್ಷಗಳ ಹಿಂದೆ ನಗರದ ಸೌಂದರ್ಯವನ್ನು ಹೆಚ್ಚಿಸಲು ರಸ್ತೆ ಗೋಡೆಗಳ ಮೇಲೆ  ರಾಜ್ಯದ ಇತಿಹಾಸ ಸಾರುವ ಚಿತ್ರಗಳನ್ನು ಬಿಡಿಸಲಾಗಿತ್ತು.

ಕೆಲವು ಸಂಘಟನೆಗಳು ಆ ಚಿತ್ರಗಳನ್ನು ಅಳಿಸಿ ತಮ್ಮ ಸಭೆ, ಸಮಾರಂಭ, ಸಮ್ಮೇಳನಗಳ ಗೋಡೆ ಬರಹ, ಇತ್ಯಾದಿ ಜಾಹೀರಾತುಗಳನ್ನು ಬರೆದು ಬೆಂಗಳೂರಿನ ಅಂದವನ್ನು ಕೆಡಿಸಿದ್ದರು. ಆದರೆ ಈಗ ಬಿಬಿಎಂಪಿ ಎಚ್ಚರಗೊಂಡು ಅಕ್ರಮವಾಗಿ ಗೋಡೆಗಳ ಮೇಲೆ ಬರೆದಿರುವ ಚಿತ್ರಗಳನ್ನು ಅಳಿಸಿ ಬಿಳಿ ಬಣ್ಣ ಬಳೆಯಲು ಮುಂದಾಗಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ಬೆಂಗಳೂರು ಸಿಟಿ ವೈಟ್ ಸಿಟಿಯಾಗಲಿದೆ.

click me!