ಧಾರಾವಾಹಿ ನೋಡುವ ಗುಂಗಿನಲ್ಲಿದ್ದಾಗ ಕಳ್ಳ ತನ್ನ ಕರಾಮತ್ತು ತೋರಿಸಿದ್ದ

Published : Nov 02, 2016, 07:03 PM ISTUpdated : Apr 11, 2018, 12:46 PM IST
ಧಾರಾವಾಹಿ ನೋಡುವ ಗುಂಗಿನಲ್ಲಿದ್ದಾಗ ಕಳ್ಳ ತನ್ನ ಕರಾಮತ್ತು ತೋರಿಸಿದ್ದ

ಸಾರಾಂಶ

ಮನೆಯವರೆಲ್ಲ ಹೊರಗಡೆ ಹೋದ ಬಳಿಕ ರಾಮಯ್ಯ ಅವರು ಟಿ.ವಿ.ಯಲ್ಲಿ ಧಾರಾವಾಹಿ ನೋಡುತ್ತಾ ಕುಳಿತಿದ್ದಾರೆ. ಈ ವೇಳೆ ಕಳ್ಳನೊಬ್ಬ ಎಂಟ್ರಿ ಕೊಟ್ಟಿದ್ದ

ಬೆಂಗಳೂರು(ನ.3): ದೀಪಾವಳಿ ಹಬ್ಬದಂದು ಚಾಣಾಕ್ಷ ಕಳ್ಳನೊಬ್ಬ ಸುಲಭವಾಗಿ ಕೈ ಚಳಕ ತೋರಿದ್ದಾನೆ. ಹೆಚ್ಚು ಶ್ರಮವಹಿಸದೆ ಮನೆಗೆ ಪ್ರವೇಶಿಸಿ ಹಣ, ಚಿನ್ನ ದೋಚಿದ್ದಾನೆ. ಆದರೆ ಈ ಸಂದರ್ಭದಲ್ಲಿ ಮನೆಯಲ್ಲಿದ್ದವರು ಧಾರಾವಾಹಿ ನೋಡುತ್ತ ಕುಳಿತ್ತಿದ್ದದ್ದು ತಮಾಷೆಯ ಸಂಗತಿಯಾಗಿದೆ.   

ಬೆಂಗಳೂರು ರಾಜಗೋಪಾಲನಗರ  ಠಾಣೆ ವ್ಯಾಪ್ತಿಯ ರಾಮಯ್ಯ ಎಂಬುವವರ ಮನೆಮಂದಿ ಸಂಭ್ರಮದಿಂದ ದೀಪಾವಳಿ ಆಚರಿಸಿ ನಂತರ ರಾಮಯ್ಯರನ್ನು ಬಿಟ್ಟು ಸಂಬಂಧಿಕರ ಮನೆಗೆ ಹೋಗಿದ್ದಾರೆ. ರಾಮಯ್ಯನವರಿಗೆ ಸ್ವಲ್ಪ ವಯಸ್ಸಾಗಿತ್ತು. ಮನೆಯವರೆಲ್ಲ ಹೊರಗಡೆ ಹೋದ ಬಳಿಕ ರಾಮಯ್ಯ ಅವರು ಟಿ.ವಿ.ಯಲ್ಲಿ ಧಾರಾವಾಹಿ ನೋಡುತ್ತಾ ಕುಳಿತಿದ್ದಾರೆ. ಈ ವೇಳೆ ಕಳ್ಳನೊಬ್ಬ ಎಂಟ್ರಿ ಕೊಟ್ಟು 8,000 ರೂ. ನಗದು 55 ಗ್ರಾಂ ಚಿನ್ನಾಭರಣ ದೋಚಿ ಆರಾಮಾಗಿ ಪರಾರಿಯಾಗಿದ್ದಾನೆ. ಕೆಲ ಹೊತ್ತಿನ ಬಳಿಕ ಮನೆಗೆ ಬಂದ ಅವರ ಕುಟುಂಬದವರು ರೂಮಿನ ಬಾಗಿಲು ತೆಗೆದಿರುವುದನ್ನು ನೋಡೊದಾಗ ಕಳ್ಳತನವಾಗಿರುವುದು ಗೊತ್ತಾಗಿದೆ.  ಸ್ಥಳಕ್ಕೆ ರಾಜಗೋಪಾಲನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಧಾರಾವಾಹಿ ನೋಡುತ್ತಿದ್ದ ರಾಮಯ್ಯನವರಿಗೆ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿರುವುದು ಗೊತ್ತೆಯಿಲ್ಲ ಎನ್ನಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ