ಬಳ್ಳಾರಿಯ ನೂತನ ಸಂಸದ ವಿ.ಎಸ್.ಉಗ್ರಪ್ಪ ರಾಜ್ಯ ಬಿಜೆಪಿ ನಾಯಕರಿಗೆ ಪಾಠ ಹೇಳಿದ್ದಾರೆ. ಹಂಪಿ ಉತ್ಸವದ ವಿಚಾರ, ಆಪರೇಶನ್ ಕಲಮದ ವಿಚಾರ ಎಲ್ಲವನ್ನು ಮಾತನಾಡಿದ್ದಾರೆ.
ಬಳ್ಳಾರಿ[ಡಿ.05] ಅಧಿಕಾರವಿಲ್ಲದೇ ಯಡಿಯೂರಪ್ಪ ಹತಾಶರಾಗಿದ್ದಾರೆ. ವಾಜಪೇಯಿ ಒಂದೇ ಓಟನಲ್ಲಿ ಅಧಿಕಾರ ಕಳೆದುಕೊಂಡರು. ಅವರು ಆಪರೇಷನ್ ಕಮಲ ಮಾಡಬಹುದಿತ್ತು. ಅದ್ರೇ ಅವರು ಮಾಡಲಿಲ್ಲ.. ಅವರನ್ನು ನೋಡಿ ಕಲಿಯಿರಿ ಎಂದು ವಿ.ಎಸ್.ಉಗ್ರಪ್ಪ ಬಿಜೆಪಿ ನಾಯಕರಿಗೆ ಪಾಠ ಹೇಳಿದ್ದಾರೆ.
ಯಡಿಯೂರಪ್ಪ , ಈಶ್ವರಪ್ಲ, ಶೆಟ್ಟರ್ ಸರ್ಕಾರ ಬಿಳುತ್ತದೆ ಅನ್ನಹುತ್ತಾರೆ. ಬಿಜೆಪಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಆಡಿಯೋ ಬಿಡುಗಡೆ.. ಕೇಂದ್ರ ಸಚಿವರ ಹೇಳಿಕೆ ಇದೆಲ್ಲ ಏನು ತೋರಿಸುತ್ತದೆ ಎಂದು ಪ್ರಶ್ನೆ ಮಾಡಿದರು.
ಯಾವ ಶಾಸಕರು ಬಿಜೆಪಿ ಷಡ್ಯಂತ್ರಕ್ಕೆ ಬಲಿಯಾಗಲ್ಲ. ಬಳ್ಳಾರಿ ಜಿಲ್ಲೆಯ ಯಾವ ಶಾಸಕರು ಹೋಗಲ್ಲ. ಜನರು ಇದಕ್ಕೆ ಮುಂದೆ ತಕ್ಕ ಪಾಠ ಕಲಿಸುತ್ತಾರೆ. ಜನಾದೇಶದ ವಿರುದ್ಧ ಬಿಜೆಪಿ ನಡೆದು ಕೊಳ್ಳುತ್ತಿದೆ ಎಂದು ಎಂದು ಆರೋಪಿಸಿದರು.
ಹಂಪಿ ಉತ್ಸವ ಮಾಡಲು ಸಿಎಂ ಘೋಷಣೆ ಮಾಡಿದ್ದಾರೆ. ಜಿಲ್ಲಾಡಳಿತ ತಯಾರಿ ನಡೆಸುತ್ತಿದೆ. ಹಂಪಿಯಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. 11 ಕೋಟಿ ದೇವಾಲಯಕ್ಕೆಸಂಬಂಧಿಸಿದ ಹಣ ಇದೆ. ಪುರಾತತ್ವ ಇಲಾಖೆಯಿಂದ ಅನುಮತಿ ಸಿಕ್ಕರೆ ಯಾತ್ರಿ ಸೌಲಭ್ಯ ಒದಗಿಸುವಂತೆ ಇಓ ಹೇಳಿದ್ದಾರೆ. ಪುರಾತತ್ವ ಇಲಾಖೆ ಅಧಿಕಾರಿಗಳ ಬಳಿ ಮಾಹಿತಿ ಪಡೆದಿದ್ದೆನೆ. 10-12 ಲಕ್ಷ ಜನ ತಿಂಗಳಲ್ಲಿ ಬಂದು ಹೋಗುತ್ತಾರೆ. 5 ಕೋಟಿ ಪ್ರತಿ ವರ್ಷ ಎಂಟ್ರಿ ಫೀ ಸಿಗುತ್ತದೆ ಎಂದು ವಿವರ ನೀಡಿದರು.
ಉತ್ಸವದ ವಿಚಾರದಲ್ಲಿ ರಾಜಕಾರಣ ಮಾಡುವುದು ಬೇಡ ಎಂದು ಪರೋಕ್ಷವಾಗಿ ಬಿಜೆಪಿಗೆ ಟಾಂಗ್ ನೀಡಿದ ಉಗ್ರಪ್ಪ ಕೆಲ ದಿನ ಕಾಯಬೇಕಾಗಿದೆ ಎಂದು ಹೇಳಿದರು.