ಬಾಲಾಕೋಟ್‌ ದಾಳಿಗೆ ‘ಆಪರೇಷನ್‌ ಬಂದರ್‌’ ಕೋಡ್‌ನೇಮ್‌!

Published : Jun 22, 2019, 08:54 AM IST
ಬಾಲಾಕೋಟ್‌ ದಾಳಿಗೆ ‘ಆಪರೇಷನ್‌ ಬಂದರ್‌’ ಕೋಡ್‌ನೇಮ್‌!

ಸಾರಾಂಶ

ಬಾಲಾಕೋಟ್‌ ದಾಳಿಗೆ ‘ಆಪರೇಷನ್‌ ಬಂದರ್‌’ ಕೋಡ್‌ನೇಮ್‌: ಸೇನೆ| ಭಾರತೀಯ ಯುದ್ಧ ಸಂಸ್ಕೃತಿಯಲ್ಲಿ ಮಂಗನಿಗೆ ವಿಶೇಷ ಮಹತ್ವವಿದೆ| ಇದೇ ಕಾರಣಕ್ಕಾಗಿಯೇ ರಹಸ್ಯವಾಗಿಯೇ ಪಾಕಿಸ್ತಾನಕ್ಕೆ ನುಗ್ಗಿ ದಾಳಿ ನಡೆಸಿದ ಕಾರ್ಯಾಚರಣೆಗೆ ಮಂಗನ ಹೆಸರನ್ನು ಇಟ್ಟಿರಬಹುದು

ನವದೆಹಲಿ[ಜೂ.22]: ಜಮ್ಮು-ಕಾಶ್ಮೀರದ ಗಡಿಯಲ್ಲಿ ಫೆ.14ರಂದು ಸಿಆರ್‌ಪಿಎಫ್‌ನ 40ಕ್ಕೂ ಹೆಚ್ಚು ಯೋಧರ ಬಲಿಪಡೆದ ಜೈಷ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಆತ್ಮಾಹುತಿ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಬಾಲಾಕೋಟ್‌ನಲ್ಲಿ ಅಡಗಿದ್ದ ಜೈಷ್‌ ಉಗ್ರರನ್ನು ಸಂಹಾರ ಮಾಡಿದ್ದ ಕಾರ್ಯಾಚರಣೆಗೆ ಭಾರತೀಯ ವಾಯುಪಡೆ, ಆ ಕಾರ್ಯಾಚರಣೆಗೆ ‘ಆಪರೇಷನ್‌ ಬಂದರ್‌’ ಎಂಬ ರಹಸ್ಯ ಸಂಕೇತಾಕ್ಷರ ಇಟ್ಟಿತ್ತು ಎಂದು ಮೂಲಗಳು ತಿಳಿಸಿವೆ.

ಇಂಥದ್ದೊಂದು ಹೆಸರು ಇಟ್ಟಿದ್ದು ಏಕೆ ಎಂಬುದರ ಬಗ್ಗೆ ಮಾಹಿತಿ ಹೊರಬಿದ್ದಿಲ್ಲವಾದರೂ, ಭಾರತೀಯ ಯುದ್ಧ ಸಂಸ್ಕೃತಿಯಲ್ಲಿ ಮಂಗನಿಗೆ ವಿಶೇಷ ಮಹತ್ವವಿದೆ. ರಾಮಾಯಣದಲ್ಲಿ ಕೋತಿಯ ಅವತಾರವಾಗಿದ್ದ ಹನುಮಂತ, ಲಂಕೆಗೆ ನುಗ್ಗಿ ಅಲ್ಲಿನ ಸೇನೆಯನ್ನು ಧ್ವಂಸ ಮಾಡಿ ಬಂದ ಇತಿಹಾಸವಿದೆ.

ಇದೇ ಕಾರಣಕ್ಕಾಗಿಯೇ ರಹಸ್ಯವಾಗಿಯೇ ಪಾಕಿಸ್ತಾನಕ್ಕೆ ನುಗ್ಗಿ ದಾಳಿ ನಡೆಸಿದ ಕಾರ್ಯಾಚರಣೆಗೆ ಮಂಗನ ಹೆಸರನ್ನು ಇಟ್ಟಿರಬಹುದು ಎಂದು ಮೂಲಗಳೂ ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೈಸೂರು ಏಕತಾ ಮಹಲ್‌ ವಿವಾದ, ತಾಯಿ-ಮಗನ ವೈರುಧ್ಯ ನಡೆ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!
ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ